ಸುಜಾತಾ ಜಿ. ನಾಯಕ ಅವರ 'ಮೇರಿ ದುನಿಯಾ' ಕೃತಿ ಬಿಡುಗಡೆ

Upayuktha
0


ಮಂಗಳೂರು: ತಮ್ಮ ಮಗಳ ಮದುವೆಯ ಮುನ್ನಾ ದಿನದ 'ಫೂಲ್ ಮುದ್ದಿ' ಕಾರ್ಯಕ್ರಮದಂದು ಕೆನರಾ ಕಾಲೇಜು ಹಾಗೂ ಕೆನರಾ ಸಂಧ್ಯಾ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಜಾತಾ ಜಿ. ನಾಯಕರವರು ಹಿಂದಿ ಕವನ ಸಂಕಲನ 'ಮೇರಿ ದುನಿಯಾ' ದ ಅನಾವರಣವನ್ನೂ ಇಟ್ಟುಕೊಂಡಿದ್ದರು.


ಪುಸ್ತಕ ಬಿಡುಗಡೆಗೊಳಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಮಾಧವಿ ಎಸ್. ಭಂಡಾರಿಯವರು, ಪಾರಿವಾರಿಕ ನೆಲೆಯಲ್ಲಿ ಹುಟ್ಟಿಕೊಂಡ ಅವರ ಕವನಗಳು ಸಾಮಾಜಿಕ ಮಗ್ಗಲುಗಳತ್ತ ಚಾಚಿಕೊಂಡಿರುವುದನ್ನು ವಿಸ್ತಾರವಾಗಿ ವಿವರಿಸಿದರು. ಜೊತೆಗೆ ಅದರಲ್ಲಿ ಬಂದಿರುವ ವೈವಿಧ್ಯಮಯ ವಿಷಯಗಳನ್ನು ಶ್ಲಾಘಿಸಿದರು. ಕುಟುಂಬ ಸದಸ್ಯರು, ಬಂಧು ಮಿತ್ರರು ಹಿತೈಷಿಗಳೆಲ್ಲರೂ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top