ಸಿದ್ದಕಟ್ಟೆ ಕೊಡಂಗೆ: ವೀರ ವಿಕ್ರಮ ಜೋಡುಕರೆ ಎರಡನೇ ವರ್ಷದ 'ರೋಟರಿ ಕಂಬಳ'ಕ್ಕೆ ಚಾಲನೆ

Upayuktha
0

ಕಂಬಳಕ್ಕೆ ಅಂತರ್ ರಾಷ್ಟೀಯ ಮಾನ್ಯತೆ: ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ




ಬಂಟ್ವಾಳ: ದೇಶದಲ್ಲಿ ಸಿಗುವ ಕೆಲವೊಂದು ಜನಪ್ರಿಯ ಆಹಾರ ಮತ್ತು ಪಾನೀಯ ಪೊಟ್ಟಣಗಳಲ್ಲಿ ಕೂಡಾ ದಷ್ಟ -ಪುಷ್ಟ ಕಂಬಳ ಕೋಣಗಳ ಓಟದ ಚಿತ್ರ ಅಳವಡಿಸುವಷ್ಟರ ಮಟ್ಟಿಗೆ ಗ್ರಾಮೀಣ ರೈತರ ಕಂಬಳ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಆಕರ್ಶಿಸುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಹೇಳಿದ್ದಾರೆ.


ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಎರಡನೇ ವರ್ಷದ 'ರೋಟರಿ ಕಂಬಳ' ಉದ್ಘಾಟಿಸಿ ಅವರು ಮಾತನಾಡಿದರು.


ಲೊರೆಟ್ಟೋ ಹಿಲ್ಸ್ ಸೇರಿದಂತೆ ಬಂಟ್ವಾಳ, ಮೊಡಂಕಾಪು, ಮಂಗಳೂರು ಸೆಂಟ್ರಲ್ ಮತ್ತು ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹ ಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕಿರಿಯ ಮತ್ತು ಸಬ್ ಜೂನಿಯರ್ ವಿಭಾಗದ ಈ ಕಂಬಳ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜಮುಖಿ ಚಟುವಟಿಕೆ ಜೊತೆಗೆ ಪಬ್ಲಿಕ್ ಇಮೇಜ್ ವೃದ್ಧಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ರೋಟರಿ ಕಂಬಳ ಪೂರಕವಾಗಿದೆ ಎಂದರು.


ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭೇಟಿ ನೀಡಿ ಶುಭ ಹಾರೈಸಿದರು.


ಲೊರೆಟ್ಟೋ ಹಿಲ್ಸ್ ಕ್ಲಬ್ಬಿನ ಮಾಜಿ ಅಧ್ಯಕ್ಷ ಎಂ. ಪದ್ಮರಾಜ್ ಬಲ್ಲಾಳ್ ಮಾವಂತೂರು ಇವರು 'ಕಂಬಳ ಕರೆ ಉದ್ಘಾಟಿಸಿದರು. ಎಡಿಶನಲ್ ಎಸ್ಪಿ ಅನಿಲ್ ಕುಮಾರ್ ಬೊಮ್ಮರೆಡ್ಡಿ, ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಕ್ಯಪದವು ಮೈರ ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ, ರೋಟರಿ ಸಹಾಯಕ ಗವರ್ನರ್ ಡಾ.ಎ.ಜಯ ಕುಮಾರ ಶೆಟ್ಟಿ, ಉಮೇಶ್ ರಾವ್ ಮಿಜಾರು, ಕೆ.ಪದ್ಮನಾಭ ರೈ ಕಲ್ಲಡ್ಕ,  ಡಾ. ರಾಜಾರಾಮ್ ಉಪ್ಪಿನಂಗಡಿ, ಪ್ರಮುಖರಾದ ಡಾ. ದೇವದಾಸ್ ರೈ, ನಾರಾಯಣ ಹೆಗ್ಡೆ, ಡಾ. ಶಿವಪ್ರಕಾಶ್, ಲೊರೆಟ್ಟೋ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಬಂಟ್ವಾಳ ಕ್ಲಬ್ಬಿನ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ಸಿದ್ದಕಟ್ಟೆ ಕ್ಲಬ್ಬಿನ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ, ಮೊಡಂಕಾಪು ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆರ್ನಾಂಡಿಸ್, ಮಂಗಳೂರು ಕ್ಲಬ್ಬಿನ ಅಧ್ಯಕ್ಷ ಭಾಸ್ಕರ ರೈ ಕಟ್ಟ ಶುಭ ಹಾರೈಸಿದರು.


ಪ್ರಮುಖರಾದ ಶ್ರುತಿ ಮಾಡ್ತಾ, ಡಾ.ಆತ್ಮ ರಂಜನ್ ರೈ, ಗಣೇಶ್ ಶೆಟ್ಟಿ ಸಿದ್ದಕಟ್ಟೆ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಜಾನ್ ಕೆನ್ಯೂಟ್ ಮಸ್ಕರೆನ್ಹಸ್ ಉಪ್ಪಿನಂಗಡಿ, ಡಾ. ಪ್ರಹ್ಲಾದ್ ಮೈಸೂರು, ಪುಷ್ಪರಾಜ ಹೆಗ್ಡೆ, ಕಿರಣ್ ಹೆಗ್ಡೆ ಮಾಣಿ, ಕಿರಣ್ ಕುಮಾರ್ ಮಂಜಿಲ, ಮೈಕಲ್ ಡಿಕೋಸ್ತ, ಮೋಹನ್ ಕೆ. ಶ್ರೀಯಾನ್ ರಾಯಿ, ಮೊಹಮ್ಮದ್ ಯಾಸೀರ್ ಕಲ್ಲಡ್ಕ, ಟೀನಾ ಡಿಕೊಸ್ತ ಸಿದ್ದಕಟ್ಟೆ, ಪ್ರಸನ್ನ ರಾವ್ ಮೊಡಂಕಾಪು, ವಿಕಾಸ್ ಕೋಟ್ಯಾನ್ ಮಂಗಳೂರು, ರಾಜೇಶ್ ಶೆಟ್ಟಿ ಸೀತಾಳ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಮೈಕಲ್ ಡಿಕೋಸ್ತ, ಹೊನ್ನಯ ಕಾಟಿಪಳ್ಳ, ಪಿ.ಎ. ರಹೀಂ ಬಿ.ಸಿ. ರೋಡ್, ಕೆ. ರಮೇಶ್ ನಾಯಕ್, ಅಲೆಕ್ಸಾಂಡರ್ ಲೋಬೋ, ಶಶಿಧರ ಶೆಟ್ಟಿ ಕಲ್ಲಾಪು, ಸೀತಾರಾಮ ಶೆಟ್ಟಿ, ಹರೀಶ ಶೆಟ್ಟಿ, ಜಿಲ್ಲಾ ತೀರ್ಪುಗಾರ ವಿಜಯ ಕುಮಾರ್ ಕಂಗಿನಮನೆ, ಉಮೇಶ್ ಹಿಂಗಾಣಿ ಮತ್ತಿತರರಿದ್ದರು.

   

ಕಂಬಳದ ಸಾರಥ್ಯ ವಹಿಸಿದ್ದ ಮೊಡಂಕಾಪು ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಎಲಿಯಾಸ್ ಸಾಂಕ್ಟೀಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಾಜಗೋಪಾಲ್ ರೈ ವಂದಿಸಿದರು. ಮಾಜಿ ಅಧ್ಯಕ್ಷ ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತು ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್  ಕಾರ್ಯಕ್ರಮ ನಿರೂಪಿಸಿದರು.


ಇದೇ ವೇಳೆ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ. ಕೆ. ಮತ್ತು ಸ್ಥಳದಾನಿ ಚಂದ್ರಹಾಸ್ ಕೊಡಂಗೆ ಇವರನ್ನು ಸನ್ಮಾನಿಸಲಾಯಿತು. ಕ್ಲಬ್ಬಿನ ಸದಸ್ಯ ಪ್ರಭಾಕರ ಪ್ರಭು ಇದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top