ಶಿವಮೊಗ್ಗ: ಬಾನು ಮುಷ್ತಾಕ್ ಕತೆಗಳ ವಾಚನಾಭಿನಯ

Upayuktha
0



ಶಿವಮೊಗ್ಗ: ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,  ಸಾಹಿತ್ಯ ಸಹೃದಯ ವೇದಿಕೆ, ಲಿಟರರಿ ಕ್ಲಬ್, ಐಕ್ಯೂಎಸಿ ಇವರ ಸಹಯೋಗದೊಂದಿಗೆ ದಿನಾಂಕ: 28.10.2025 ರಂದು “ಬಾನು ಮುಷ್ತಾಕ್‌ರವರ ಕತೆಗಳ ಅಂತರಕಾಲೇಜು ವಿಮರ್ಶಾ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ” ಹಾಗೂ ನೇಟಿವ್, ಶಿವಮೊಗ್ಗ ಇವರು ಪ್ರಸ್ತುತ ಪಡಿಸಿದ ಬೂಕರ್ ಬಹುಮಾನ ವಿಜೇತ ಲೇಖಕಿ ಬಾನು ಮುಷ್ತಾಕ್‌ರವರ ಕತೆಗಳ ವಾಚನಾಭಿನಯವನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. 


ಬಾನು ಮುಷ್ತಾಕ್‌ರವರ ಕತೆಗಳ ವಸ್ತು ವಿವರಣೆ ಜೊತೆಗೆ ಕಥೆಯನ್ನು ಓದಿಸುವ ಪ್ರಯತ್ನ ನಡೆಸಿದರು. ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಅನೇಕ ಮಜಲುಗಳನ್ನು ಸೂಕ್ಷ್ಮವಾಗಿ ಕಥೆಗಳ ವಾಚನದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ಮನುಷ್ಯ ಸಂಬಂಧಗಳ ಮಹತ್ವವನ್ನು ಇಂದಿನ ವಿದ್ಯಾರ್ಥಿಗಳಲ್ಲಿ ತುಂಬುವ ಪ್ರಯತ್ನ ಇದರ ಉದ್ದೇಶವಾಗಿತ್ತು. ಮಾನಸ ಸಾಂಸ್ಕೃತಿಕ ಅಧ್ಯಯನದ ಕೇಂದ್ರದ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿಯವರು ಮಾತನಾಡಿ ಬೂಕರ್ ಪ್ರಶಸ್ತಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಂದ ಗೌರವವಾಗಿದೆ. 


ಬೂಕರ್ ಪ್ರಶಸ್ತಿ ಕನ್ನಡಕ್ಕೆ ಮೊದಲ ಬಾರಿ ಸಿಕ್ಕಿರುವುದು ಸಂತಸದ ವಿಷಯವಾಗಿದೆ. ಘಟನೆಗಳನ್ನು ಪಾತ್ರಗಳ ಮೂಲಕ ಕಟ್ಟಿಕೊಟ್ಟಿರುವುದು ಅದ್ಭುತವಾದ ಸಂಗತಿಯಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀ ಮೇಲಿನ ದೌರ್ಜನ್ಯ ದಬ್ಬಾಳಿಕೆಯ ಪ್ರಮಾಣ ಅಧಿಕವಾಗಿದೆ, ಅದರ ವಿರುದ್ಧ ಧ್ವನಿ ಎತ್ತಬೇಕಿದೆ. ಈ ಕಥೆಗಳ ಮೂಲವು ಬಾನು ಮುಷ್ತಾಕ್ ಅವರು ವೈಯಕ್ತಿಕ ಜೀವನದಲ್ಲಿ ನೋಡಿರುವ ಹೋರಾಟದ ಸಂಗತಿಗಳ ಹಿನ್ನೆಲೆಯನ್ನು ಹೊಂದಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಈ ಮೂಲಕ ಬಾನು ಮುಷ್ತಾಕ್‌ರವರ ಕತೆಗಳನ್ನು ಓದಲು ಪ್ರೇರೆಪಣೆಯಾಗಿದೆ ಎಂದು ತಿಳಿಸಿದರು. ಮನುಷ್ಯ ಸಂಬಂಧಗಳನ್ನು ಉಳಿಸಿಕೊಳ್ಳುವ ತುರ್ತು ಇವತ್ತಿಗೆ ಅನಿವಾರ್ಯವಾಗಿದೆೆ. 


ವಾಚನಾಭಿನಯವನ್ನು ಪ್ರಸ್ತುತ ಪಡಿಸಿದ ನಿವೃತ್ತ ಪ್ರಾಂಶುಪಾಲರಾದ ಡಾ.ನಾಗಭೂಷಣ್ ರವರು ಮಾತನಾಡಿ ಮಹಿಳೆಯರ ಯಶಸ್ಸಿನ ಹಿಂದೆ ಪುರುಷರ ಬೆಂಬಲ ಇರಬೇಕು. ಮಹಿಳಾ ಸಂವೇದನೆಯನ್ನು ಬಾನು ಮುಷ್ತಾಕ್ ಅವರ ಕತೆಗಳ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ ಎಂದು ಕಾರ್ಯಕ್ರಮವನ್ನು ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದರು. 


ವಿದ್ಯಾರ್ಥಿಗಳ ಭಾವನೆ ಸಂವೇದನೆ ಸೋತಿದೆ. ಮಹಿಳೆಯರ ಮೇಲೆ ಗೌರವವನ್ನು ಉಳಿಸಿಕೊಳ್ಳಬೇಕು. ಯುವಜನರು ಹೇಗೆ ಸ್ಪಂದಿಸಬೇಕು. ಸ್ತ್ರೀ ಸಂವೇದನೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಕಿವಿ ಮಾತುಗಳನ್ನು ಹೇಳಿದರು. ವಿದ್ಯಾರ್ಥಿಗಳಲ್ಲಿ ನಾಟಕೀಯ ಓದು ಹವ್ಯಾಸಗಳನ್ನು ಬೆಳೆಸುವಂತೆ ಸಲಹೆ ನೀಡಿದರು. ಅಧ್ಯಕ್ಷತೆಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ಮಹಿಳಾ ಲೇಖಕಿಗೆ ಪ್ರಶಸ್ತಿ ಬಂದಿದ್ದು ಜೊತೆಗೆ ಮಹಿಳಾ ಸಂವೇದನೆ ಉಳ್ಳ ಮಹಿಳೆಗೆ ಪ್ರಶಸ್ತಿ ಬಂದಿದ್ದು ಬಹಳ ಸಂತಸದ ವಿಷಯ ಎಂದು ಅಭಿಪ್ರಾಯ ಪಟ್ಟರು. 


ವಿದ್ಯಾರ್ಥಿಗಳಲ್ಲಿ ಬಾನು ಮುಷ್ತಾಕ್‌ರವರ ಕತೆಗಳನ್ನು ಓದಿಸಿ ಅವರ ಅಭಿಪ್ರಾಯಗಳನ್ನು ಆಸಕ್ತಿಯನ್ನು ತಿಳಿದುಕೊಳ್ಳುವ ಉದ್ದೇಶ. ಕಾಲೇಜಿನ ಅನೇಕ ಕ್ಲಬ್‌ಗಳ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುವ ಶ್ರಮದ ಬಗ್ಗೆ, ಲಿಂಗ ಸಮಾನತೆ, ಪರಸ್ಪರ ಪ್ರೀತಿ ಮನುಷ್ಯ ಸಂಬಂಧಗಳ ಬಗ್ಗೆ ತಿಳಿಸಿದರು. ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತುವ ಕೆಲಸವಾಗಬೇಕು. ಬದುಕಿನಲ್ಲಿ ಬದುಕಲು ಸಂವೇದನೆ ಬಹಳ ಮುಖ್ಯ. ಅದು ಈ ಕಾರ್ಯಕ್ರಮದಿಂದ ಸಾಧ್ಯವಾಗಿದೆ. 


ನಂತರ ಪ್ರಬಂಧ ವಿಜೇತರುಗಳಿಗೆ ಅಭಿರುಚಿ ಪ್ರಕಾಶನದವರು ನೀಡಿದ ಪುಸ್ತಕಗಳ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಹೊಳೆಹೊನ್ನುರು ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ.ಭಾರತಿ ದೇವಿ ಅವರು ಮಾತನಾಡಿ ಹೆಣ್ಣಿಗೆ ಆಯ್ಕೆ ಸ್ವಾತಂತ್ರವಿಲ್ಲ, ಹೆಣ್ಣಿನ ಅಸಹಾಯಕತೆಗೆ ಸಮಾಜ ನಿರ್ಮಿಸಿರುವ ಚೌಕಟ್ಟು, ಹೆಣ್ಣಿನಿಂದ ದಾಟಲು ಸಾಧ್ಯವಾಗಲಿಲ್ಲ ಎಂದು ಅಭಿಪ್ರಾಯ ಪಟ್ಟರು. 


ನೇಟಿವ್ ಥಿಯೇಟರ್‌ನ ನಿರ್ದೇಶಕರಾದ ಪ್ರರ್ತಕರ್ತ ಹಾಗೂ ರಂಗಕರ್ಮಿ ಹಾಲಸ್ವಾಮಿ ಆರ್.ಎಸ್. ಅವರ ನಿರ್ದೇಶನದಲ್ಲಿ ಈ ರಂಗಪ್ರಸ್ತುತಿ ಅತ್ಯಂತ ಅಮೋಘವಾಗಿ ಮೂಡಿ ಬಂದಿತು. ಕನ್ನಡ ವಿಭಾಗ ಮುಖ್ಯಸ್ಥರಾದ ಮೋಹನ್ ಕುಮಾರ್ ರವರು ಪ್ರಾಸ್ತವಿಕ ನುಡಿಗಳನ್ನು ಮಾತನಾಡಿದರು. ಕುಮಾರಿ ಕೃತಿಕ, ದ್ವಿತೀಯ ಬಿ.ಎ. ಅವರು ಸ್ವಾಗತಿಸಿದರು.  ತೇಜಸ್ವಿ, ದ್ವಿತೀಯ ಬಿ.ಎ. ಇವರು ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರೇಷ್ಮಾರವರು ಹಾಗೂ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಕುಮಾರಿ ಅನನ್ಯ ನಾಡಿಗ್, ದ್ವಿತೀಯ ಬಿ.ಎ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top