ಬದಿಯಡ್ಕ: ದೀಪಾವಳಿಯ ಶುಭ ಸಂದರ್ಭದಲ್ಲಿ ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಶಾಲೆಯಲ್ಲಿ ಭಟ್ ಬಯೋ ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಡಾ.ಶಾಮ ಭಟ್ ಇವರ ವತಿಯಿಂದ ಶಿಷ್ಯವೇತನ ವಿತರಣಾ ಕಾರ್ಯಕ್ರಮ ಗುರುವಾರ (ಅ.23) ನಡೆಯಿತು.
ಕಳೆದ ಮೂರು ವರ್ಷಗಳಿಂದ ಡಾ.ಶಾಮ ಭಟ್ ಇವರು ತಮ್ಮ ಸ್ನೇಹಿತ ಆಶುಕವಿ ವಾಗ್ಮಿ ದಿ. ಪೊಟ್ಟಿಪ್ಪಲ ನಾರಾಯಣ ಭಟ್ಟರ ಸ್ಮರಣಾರ್ಥ ಶಾಲೆಯಿಂದ ಗುರುತಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತಿದ್ದು, ಈ ಬಾರಿ ಸಹ ಆ ಪರಂಪರೆ ಮುಂದುವರಿಯಿತು.
ಈ ವರ್ಷದ ಶಿಷ್ಯವೇತನವನ್ನು ಪಡೆದವರು- ಅಕ್ಷಯಾ ವೆಂಕಟೇಶ್ (10ನೇ ತರಗತಿ) ಮತ್ತು ಜಯಂತ ಕೃಷ್ ಭಟ್ ಕೆ (8ನೇ ತರಗತಿ).
ಶಿಷ್ಯವೇತನ ನೀಡಿ ಮಾತನಾಡಿದ ಡಾ. ಶಾಮ ಭಟ್, ತಾನು ಬೆಳೆದು ಬಂದ ದಾರಿ, ಸ್ನೇಹಿತನೊಂದಿಗಿನ ಒಡನಾಟದ ಗಾಢತೆ ಮುಂತಾದವುಗಳ ಬಗ್ಗೆ ಹೇಳುತ್ತಾ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯರು ಮಾತನಾಡಿ, “ಡಾ. ಶಾಮ ಭಟ್ ನೀಡುತ್ತಿರುವ ಶಿಷ್ಯವೇತನವು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಬೆಳಕನ್ನು ಹರಿಸುತ್ತಿದೆ ಜೊತೆಗೆ ಮಿತ್ರತ್ವದ ಸಾರವನ್ನೂ ತಿಳಿಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷ ಕೆರೆಮೂಲೆ ಸುಬ್ರಹ್ಮಣ್ಯ ಭಟ್ ಮಾತನಾಡಿ, "ವಿದ್ಯಾರ್ಥಿ ವೇತನ ಸಿಕ್ಕಿರುವುದು ಇಬ್ಬರಿಗಾದರೂ ಎಲ್ಲಾ ಮಕ್ಕಳಿಗೂ ಇದೊಂದು ಜೀವನ ಪಾಠ" ಎಂದು ಹೇಳಿದರು.
ಪೊಟ್ಟಿಪ್ಪಲ ನಾರಾಯಣ ಭಟ್ ಅವರ ಪುತ್ರ ಡಾ. ಗಿರೀಶ್, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಮಧುಸೂದನ ತಿಮ್ಮಕಜೆ, ಸದಸ್ಯ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ಉಪಸ್ಥಿತರಿದ್ದರು.
ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳಿಬ್ಬರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಈ ವಿದ್ಯಾರ್ಥಿ ವೇತನವನ್ನು ಕಲಿಕೆಗೆ ಪೂರಕವಾಗುವಂತಹ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ ಎಂದು ಹೇಳಿದರು. ಶಾಲಾ ಅಧ್ಯಾಪಿಕೆ ಸರೋಜಾ ಕಾನತ್ತಿಲ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

