"ಅಮಾವಾಸ್ಯೆಯ ರಾತ್ರಿ ಕಂಡ ಗುಂಡಿಗೆ ಸೂರ್ಯನ ಬಿಸಿಲಿರುವ ತೇಜಸ್ಸಿನ ಹಗಲಿನಲ್ಲಿ ಬಿದ್ದಂತೆ" ಆಗಿದೆ.
ಈ ಕನ್ಫ್ಯೂಸ್ ಆಗರುವುದು ಆ ಮಾಣಿಗೆ ಮಾತ್ರ ಅಲ್ಲ, ಎಲ್ಲರೂ ಕನ್ಫ್ಯೂಸ್ ಆಗಿದಾರೆ!!!!
ರಾತ್ರಿಯಲ್ಲಿ ರಸ್ತೆ ಗುಂಡಿ ನೋಡಿದ ವ್ಯಕ್ತಿ, ಬೆಳಿಗ್ಗೆ ಅದೇ ಗುಂಡಿಗೆ ಬಿದ್ದುಹೋಗುವ ಪರಿಸ್ಥಿತಿಯು ಒಂದು ತಪ್ಪು ಮತ್ತು ಮೂರ್ಖತನದ ಸಂಕೇತ.
ಇನ್ನೂ ವಿವರಣೆ ಕೊಡುವುದಾದರೆ: ರಾತ್ರಿಯಲ್ಲಿ ಗುಂಡಿಯನ್ನು ನೋಡಿದರೂ, ಹಗಲಿನ ಸ್ಪಷ್ಟ ಬೆಳಕಿನಲ್ಲಿಯೂ ಅದೇ ಗುಂಡಿಗೆ ಬಿದ್ದಂತೆ. ನಮಗೆ ತಪ್ಪು ಎಂದು ಹಿಂದಿನ ಅನುಭವದಿಂದ ತಿಳಿದಿದ್ದರೂ, ತಪ್ಪನ್ನು ಮತ್ತೆ ಮಾಡುತ್ತೇವೆ ಎಂಬುದನ್ನು ಈ ಅಮವಾಸ್ಯೆ ಗುಂಡಿ ಗಾದೆ ತಿಳಿಸುತ್ತದೆ.
ಉದಾಹರಣೆ: ಮೋಸಗಾರರನ್ನು ನಂಬಬಾರದು ಎಂದು ಗೊತ್ತಿದ್ದರೂ ಅವರ ಮಾತಿಗೆ ಮರುಳಾಗಿ ಮೋಸಹೋಗುವುದು.
ಒಂದು ಕೆಲಸವು ತಪ್ಪು ಎಂದು ತಿಳಿದಿದ್ದರೂ, ಅದನ್ನು ಮತ್ತೆ ಮಾಡುವುದು.
ಕನ್ಫ್ಯೂಸ್ ಆದವರು ಯಾರ್ಯಾರು?
1) ಮೊನ್ನೆ ಈ ಗಾದೆ ಹೇಳಿದವರು!!!. ಹೇಳಬೇಕಾದ್ದು ಪೂರ್ವದಲ್ಲಿ ಉದಯಿಸುತ್ತಿರುವ(!?) ಬಂಡೆಗೆ. ಆದರೆ ಹೇಳಿದ್ದು ಉದಯಿಸುತ್ತಿರುವ (!?) ಸೂರ್ಯನಿಗೆ!!? ಹೇಳುವಾಗಲೇ ಕನ್ಫ್ಯೂಸಾ!?
2) ಕನ್ಫ್ಯೂಸ್ ಆದವರಲ್ಲಿ ಒಬ್ಬರು ಉತ್ತರದ ಮಂತ್ರಾಲಯಕ್ಕೆ ಹೋದರು, ಇನ್ನೊಬ್ಬರು ಉತ್ತರ ಕೊಡಲು ಮೈಕ್ ಹಿಡಿದು ಗಾದೆಯ ಪೂರ್ವೋತ್ತರ ವಿವರಣೆ ಕೊಡ್ತಾ ಇದ್ದಾರೆ.
3) ಸಿಕ್ಕಾಬಟ್ಟೆ ಮೋಡ ಮುಸುಕಿಕೊಂಡು, ಉತ್ತರದಲ್ಲಿರುವ ಹೈಕಮಾಂಡ್‌ಗೂ ಕನ್ಫ್ಯೂಸ್!!?
4) ಹುಣ್ಣಿಮೆ ಚಂದ್ರನನ್ನು ನಿರೀಕ್ಷಿಸುತ್ತ ಸಿದ್ದ ನಾಗಿ ಕುಳಿತ ಪರಮ ಈಶ್ವರನಿಗೂ ಕನ್ಫ್ಯೂಸ್ !!!
5) ಎಲ್ಲಿ ಹೋದರೂ ಮಳೇ ಮಳೆ. ಎಲ್ಲಿ ಹೋದರೂ ಜಾರಿಕೆ ಜಾರಿಕೆ, ಎಲ್ಲಿ ಹೋದರೂ ಹೊಳೇ ಹೊಳೆ, ಎಲ್ಲಿ ಹೋದರೂ ರಸ್ತೆ ಗುಂಡೀ ಗುಂಡಿ. ರಸ್ತೆಯಲ್ಲಿ ಕಾಣುತ್ತಿರುವುದು ಹುಣ್ಣಿಮೆಯ ಚಂದ್ರನಾ? ಅಮವಾಸ್ಯೆಯ ರಾತ್ರಿಯಲ್ಲಿ ನೀರು ತುಂಬಿದ ಗುಂಡಿಯಾ? ಕನ್ಫ್ಯೂಸೋ ಕನ್ಫ್ಯೂಸು!!! ಗಾಡಿ ಎಲ್ಲಿಗೆ ತಿರುಗಿಸುವುದು? ಎಲ್ಲಿಗೆ ಹಾರಿಸುವುದು.... ಕನ್ಫ್ಯೂಸ್.
6) ಸಾಕಷ್ಟು ಲಕ್ಷ್ಮೀ ಪೂಜೆ ಪ್ರಸಾದ ಸ್ವೀಕರಿಸಿ, ಟುಸ್ ಪಟಾಕಿ ಹೊಡೆಯುತ್ತಿರುವ ವಿರೋಧಿಗಳಿಗೂ ಕನ್ಫ್ಯೂಸ್ ದೀಪಾವಳಿ ಲಕ್ಷ್ಮೀ ಪೂಜೆ ಬರುವುದು ದೀಪಾವಳಿಗಾ? ಯುಗಾದಿಗೂ ಬರುತ್ತಾ? ಅಂತ.
7) ಕನ್ಫ್ಯೂಸ್ ಬೇಡ ಅಂತ ಎಲ್ಲರ ಮನೆ ಮನೆಗೂ ಬಂದು, ದಕ್ಷಿಣೆ ಕೊಟ್ಟು ಸಾರ್ವಜನಿಕರ ಅಭಿ'ಮತ' ಕೇಳ್ತಾರಂತೆ!! ಎಂದು ಅನೇಕ ಜನರೂ ಕನ್ಫ್ಯೂಸ್ ಆಗಿದಾರಂತೆ!!
8) ಅಂಟಿಗೆ ಪೆಂಟಿಗೆ, ನಾಟಕ, ಯಕ್ಷಗಾನ, ಆರ್ಕೇಷ್ಟ್ರಾ ಮಾಡಲು ನಮಗೂ ಅವಕಾಶ ಸಿಗಬಹುದು ಅಂತ ಅಮವಾಸ್ಯೆ ಯಿಂದ ಸೂರ್ಯ ಕಡೆಯವರೂ, ಚಂದ್ರನ ಕಡೆಯವರೂ ರೆಡಿಯಾಗಿದ್ದಾರಂತೆ!!?
9) ಅಮವಾಸ್ಯೆ ರಾತ್ರಿ ಕೋಲು ಹಚ್ಚಿ ಮೆರವಣಿಗೆ ಮಾಡಲು ನಮಗೂ ಅವಕಾಶ ಕೊಡಿ ಅಂತ ನೀಲಿ ಆಕಾಶದ ಅಡಿಯ ಬಿಳಿ ಮೋಡದ ಕೆಳಗೆ ರಚ್ಚೆ ಹಿಡಿದಿದ್ದಾರಂತೆ!!
10) ದೊಣ್ಣೆ ನೋಡಿದರೆ ಹೆದರಿ ಬೀಳುವ, ಮೂರು ಬ್ಯಾಂಕ್‌ಗಳಲ್ಲಿ ಅಕೌಂಟ್ (ಖಾತೆ) ಇರುವ ಸಾಫ್ಟ್ವೇರ್ ಗ್ರಾಹಕ, ಉಳಿತಾಯ ಖಾತೆ (ನೊಂದಣಿ) ಇಲ್ಲದ, ಬ್ಯಾಂಕೇ ಅಲ್ಲದ ಕಟ್ಟಡದ ಮುಂದೆ ಸೆಲ್ಫ್ ಚಕ್ ಹಿಡಿದು, ಏಕಾಂಗಿಯಾಗಿ ಹಣ ಡ್ರಾ ಮಾಡಬೇಕು ಅಂತ ಕೂಗ್ತಾ ಇದಾನಂತೆ!!
11) ಇದಿಷ್ಟನ್ನು ಓದಿದ ಮೇಲೆ ಅರ್ಥ ಆಗಲಿಲ್ಲ ಅಂದ್ರೆ, ಇನ್ನೊಮ್ಮೆ ಓದಿ. ಇನ್ನೊಮ್ಮೆ ಮತ್ತೊಮ್ಮೆ ಓದಿದರೂ ಅರ್ಥ ಆಗಲಿಲ್ಲ ಅಂದ್ರೆ... ಪ್ರಜಾಕಿಯ ಪಕ್ಷದ ಕಾರ್ಮಿಕ ನನ್ನು ಕೇಳಿ. ಅವರಿಗೂ ಕನ್ಫ್ಯೂಸ್ ಆದ್ರೆ... ಸುಮ್ನೆ ಡಿಲೀಟ್ ಮಾಡಿ, ಸೈಲಂಟ್ ಆಗಿ!!
12) ಕನ್ಫ್ಯೂಸ್ ಆಗಿ, ಬರೆದವನನ್ನೇ ಕೇಳುವ ಅಂತ ಮುಂದಾಗಬೇಡಿ!! ಐ ಆ್ಯಮ್ ಆಲ್ಸೋ ಇನ್ ಕನ್ಫ್ಯೂಸ್!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

