ಚಿಕ್ಕಮಗಳೂರು: ಅಪರೂಪದ ಹೃದಯ ಸಮಸ್ಯೆ ಇದ್ದ ಅಣ್ಣ ನೀರಜ್ (24) ಮತ್ತು ತಂಗಿ ನೀತಿ (22) ಅವರ ಸಮಸ್ಯೆ ಪತ್ತೆ ಮಾಡಿ ತಕ್ಷಣ ಜೀವರಕ್ಷಕ ಚಿಕಿತ್ಸೆ ಒದಗಿಸಿ ಹೊಸ ಬದುಕು ನೀಡುವಲ್ಲಿ ಬೆಂಗಳೂರು ನಾಗರಭಾವಿಯ ಫೋರ್ಟೀಸ್ ಆಸ್ಪತ್ರೆ ಯಶಸ್ವಿಯಾಗಿದೆ.
ಮೇಲ್ನೋಟಕ್ಕೆ ಆರೋಗ್ಯಕರವಾಗಿ ಇವರಿಗೆ ಈ ಹಿಂದೆ ಯಾವುದೇ ರೋಗ ಲಕ್ಷಣಗಳು ಅಥವಾ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಆದರೆ, ಫೋರ್ಟೀಸ್ ನಲ್ಲಿ ನಡೆದ ಆರೋಗ್ಯ ತಪಾಸಣೆಯಲ್ಲಿ ವೈದ್ಯರು ಹುಟ್ಟಿನಿಂದಲೇ ಬರುವ ಅಪರೂಪದ ರೋಗದಿಂದ ಉಂಟಾದ ಗಂಭೀರ ಕೋರೋನರಿ ಆರ್ಟರಿ ಬ್ಲಾಕ್ ಗಳು ಇರುವುದನ್ನು ಪತ್ತೆ ಹಚ್ಚಿದರು. ಕುಟುಂಬದವರಿಗೆ ಈ ವಿಚಾರ ತಿಳಿದಾಗ ಆಘಾತಕ್ಕೀಡಾದರು.
ಇಬ್ಬರೂ ಕೌಟುಂಬಿಕ ಹೈಪರ್‍ಕೊಲೆಸ್ಟೆರಾಲೇಮಿಯಾ (ಎಫ್‍ಎಚ್) ಎಂಬ ಹುಟ್ಟಿನಿಂದಲೇ ಬರುವ ಹೃದಯ ಸಮಸ್ಯೆಯು ಹೊಂದಿರುವುದಾಗಿ ತಿಳಿದು ಬಂತು. ರೋಗ ಲಕ್ಷಣಗಳು ಕಾಣಿಸದೇ ಇದ್ದಾಗಲೂ ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನದ ಮೂಲಕ ಅವರ ಹೃದಯ ರಕ್ತನಾಳಗಳಲ್ಲಿ ಬಹು ಗಂಭೀರವಾದ ಬ್ಲಾಕ್‍ಗಳು ಇರುವುದಾಗಿ ಪತ್ತೆಯಾಯಿತು.
ತಕ್ಷಣ ಕಾರ್ಯಪ್ರವೃತ್ತರಾದ ನಾಗರಭಾವಿ ಫೋರ್ಟೀಸ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕ್ಯುಲರ್ ಸರ್ಜರಿ ವಿಭಾಗದ ಅಸೋಸಿಯೇಟ್ ಕನ್ಸಲ್ಟೆಂಟ್ ಡಾ. ಮ್ಯಾಥ್ಯೂ ಮೌರಿಷ್ ಥಾಮಸ್ ಅವರು ಮತ್ತು ಕಾರ್ಡಿಯಾಕ್ ಟೀಮ್, ನಾಗರಭಾವಿ ಫೋರ್ಟೀಸ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕ್ಯುಲರ್ ಸರ್ಜರಿ ವಿಭಾಗದ ಅಡಿಷನಲ್ ಡೈರೆಕ್ಟರ್ ಡಾ. ಸುದರ್ಶನ ಜಿ.ಟಿ. ಅವರ ಮಾರ್ಗದರ್ಶನದಲ್ಲಿ ಈ ಇಬ್ಬರು ಸಹೋದರ, ಸಹೋದರಿಯರಿಗೆ ಒಂದೇ ದಿನ ಕಾಂಪ್ಲೆಕ್ಸ್ ಕಾರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಸರ್ಜರಿಗಳನ್ನು ನಡೆಸಿ, ಸಂಭಾವ್ಯ ಹೃದಯಾಘಾತವನ್ನು ತಪ್ಪಿಸಿತು ಎಂದು ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕ್ಯುಲರ್ ಸರ್ಜರಿ ವಿಭಾಗದ ಅಡಿಷನಲ್ ಡೈರೆಕ್ಟರ್ ಡಾ. ಸುದರ್ಶನ ಜಿ.ಟಿ. ಹೇಳಿದ್ದಾರೆ.
"ಈ ಪ್ರಕರಣವು ನಮ್ಮ ವೈದ್ಯಕೀಯ ತಂಡದ ಅತ್ಯುನ್ನತ ಸಾಮಥ್ರ್ಯ ಮತ್ತು ತಜ್ಞತೆಯನ್ನು ತೋರಿಸಿರುವುದು ಮಾತ್ರವಲ್ಲ, ದೈನಂದಿನ ಆರೋಗ್ಯ ತಪಾಸಣೆಗಳ ಮಹತ್ವವನ್ನೂ ಒತ್ತಿ ಹೇಳಿದೆ ಎಂದು ಫೆಸಿಲಿಟಿ ಡೈರೆಕ್ಟರ್ ರತೀಫ್ ನಾಯಕ್ ಹೇಳಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


