ಡಯಾಬಿಟೀಸ್‌ನಿಂದ ಅಪರೂಪದ ಮೂತ್ರಪಿಂಡ ವೈಫಲ್ಯ– ಪತಿಯ ಜೀವ ಉಳಿಸಿದ ಪತ್ನಿಯ ತ್ಯಾಗ

Upayuktha
0



ಬೆಂಗಳೂರು, ವೈಟ್‌ ಫೀಲ್ಡ್‌: ಪಶ್ಚಿಮ ಬಂಗಾಳದ 41 ವರ್ಷದ ವ್ಯಕ್ತಿಯೊಬ್ಬರಿಗೆ ಕೇವಲ 3 ವರ್ಷಗಳ ಡಯಾಬಿಟೀಸ್‌ನಿಂದ ಮೂತ್ರಪಿಂಡ ವೈಫಲ್ಯ ಉಂಟಾಯಿತು. ಪತಿಯ ಬದುಕು ಉಳಿಸಲು ಪತ್ನಿಯೇ ತನ್ನ ಮೂತ್ರಪಿಂಡವನ್ನು ದಾನ ಮಾಡಿದ್ದು, ಮೆಡಿಕವರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ನಡೆಸಿ ಅವರ ಜೀವ ಉಳಿಸಿದರು.


ಸಾಮಾನ್ಯವಾಗಿ ಡಯಾಬಿಟೀಸ್ ಹಾಗೂ ರಕ್ತದೊತ್ತಡದಿಂದ ಮೂತ್ರಪಿಂಡ ಹಾನಿ 10–15 ವರ್ಷಗಳ ಬಳಿಕವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ 3 ವರ್ಷಗಳಲ್ಲಿ ಡಯಾಬಿಟಿಕ್ ಕಿಡ್ನಿ ಡಿಸೀಸ್ ದೃಢಪಟ್ಟಿತು. ಕಳೆದ 2 ತಿಂಗಳುಗಳಿಂದ ರೋಗಿ ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಂಡಿದ್ದರು.


ಮೆಡಿಕವರ್‌ ಆಸ್ಪತ್ರೆಯ ನುರಿತ ವೈದ್ಯರ ತಂಡ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಪೂರೈಸಿದರು. ಮೂತ್ರ ಪಿಂಡ ಶಾಸ್ತ್ರಜ್ಞ ಡಾ. ಹರೀಶಾ ಬಾಬು ನೇತೃತ್ವದಲ್ಲಿ ಮೂತ್ರ ಶಾಸ್ತ್ರಜ್ಞ ಡಾ ದಿಲೀಪ್‌ ಹಾಗೂ ಡಾ ಪ್ರಮೋದ್‌ ನೇತ್ರತ್ವದಲ್ಲಿ ಕಡ್ನಿ ಕಿಸಿಯನ್ನು ಮಾಡಲಾಯಿತು.  ನಂತರ ತಕ್ಷಣವೇ ಮೂತ್ರ ವಿಸರ್ಜನೆ ಪ್ರಾರಂಭವಾಗಿ, ರೋಗಿಯಲ್ಲಿ ಚೇತರಿಕೆ ಕಂಡು ಬಂದಿದೆ. 


ಈ ಪ್ರಕರಣದ ಬಗ್ಗೆ ಮೆಡಿಕವರ್ ಆಸ್ಪತ್ರೆಯ ಹಿರಿಯ ನೇಫ್ರಾಲಜಿಸ್ಟ್ ಡಾ. ಹರೀಶಾ ಬಾಬು ಮಾತನಾಡಿ, “ಡಯಾಬಿಟೀಸ್‌ನಿಂದಾಗಿ ಸಾಮಾನ್ಯವಾಗಿ 10 ವರ್ಷಗಳ ನಂತರವೇ ಕಿಡ್ನಿ ಹಾನಿ ಉಂಟಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ 3 ವರ್ಷಗಳಲ್ಲೇ ಮೂತ್ರಪಿಂಡ ವೈಫಲ್ಯ ಉಂಟಾಗಿದೆ. ಇದು ಪ್ರಾರಂಭಿಕ ಹಂತದಲ್ಲೇ ತಪಾಸಣೆ ಮತ್ತು ಚಿಕಿತ್ಸೆಯ ಮಹತ್ವವನ್ನು ತೋರಿಸುತ್ತದೆ. ನಿಯಮಿತ ತಪಾಸಣೆ, ಜೀವನ ಶೈಲಿಯ ಬದಲಾವಣೆಗಳು ಕಿಡ್ನಿ ಹಾನಿಯನ್ನು ತಡೆಯಬಹುದು” ಎಂದು ತಿಳಿಸಿದರು.


ಈ ಯಶಸ್ವಿ ಶಸ್ತ್ರಚಿಕಿತ್ಸೆ ಪತಿಯ ಬದುಕಿಗಾಗಿ ತ್ಯಾಗ ಮಾಡಿದ ಪತ್ನಿಯ ಪ್ರೀತಿ ಮತ್ತು ವೈದ್ಯಕೀಯ ವಿಜ್ಞಾನದ ಶಕ್ತಿಗೆ ಸಾಕ್ಷಿಯಾಗಿದೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top