ಜಗತ್ತು ಕಂಡ ಅಪ್ರತಿಮ ಮೇರು ವ್ಯಕ್ತಿ ಶಿವರಾಮ ಕಾರಂತ : ಡಾ. ನರಸಿಂಹಮೂರ್ತಿ. ಆರ್

Upayuktha
0



ಪುತ್ತೂರು: 20 ನೇ ಶತಮಾನದಲ್ಲಿ, ಜಗತ್ತು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಪಟ್ಟಿ ಮಾಡಿದರೆ ಶಿವರಾಮಕಾರಂತರು ಅಗ್ರಗಣ್ಯರು .  ಒಬ್ಬ ವ್ಯಕ್ತಿ ಮನಸ್ಸು  ಮಾಡಿದರೆ ಏನನ್ನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಮಾದರಿ ಶಿರಾಮಕಾರಂತರು.ನಾಲ್ಕು ಗೋಡೆಯ ಮಧ್ಯೆ ಮಕ್ಕಳನ್ನು ಬೆಳೆಸುವ ಬದಲು ಮಕ್ಕಳು ಪರಿಸರದೊಂದಿಗೆ ಬೆರೆಯುವುದರ ಮೂಲಕ ಪರಿಸರದ ಒಂದು ಭಾಗವಾಗಬೇಕು ಎಂಬ ಕಾರಣದಿಂದ ಶಿಕ್ಷಣದಲ್ಲಿ ಹೊಸ ಆಲೋಚನೆಗಳನ್ನು ತಂದರು.ಕಾರಂತರ ಪುಸ್ತಕಗಳನ್ನು ಓದುದರ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬಹುದು ಎಂದು ಕನ್ನಡ ವಿಶ್ರಾಂತ ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ಆರ್ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ಸಂಶೋಧನಾ ಕೇಂದ್ರ ಹಾಗೂ  ಐಕ್ಯೂಎಸಿ ಮತ್ತು ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ  ಕಾರಂತ ಸಾಹಿತ್ಯ ಚಿಂತನ ಉಪನ್ಯಾಸ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ  ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಹಿರಿಯರು ಮಾಡಿದ ಸಾಧನೆಯನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ತೆಗೆದುಕೊಂಡು ಅವರು ಹಾಕಿಕೊಟ್ಟ ಪಥದಲ್ಲಿ ಸಾಗಬೇಕು ಹಾಗೆಯೇ ಕರಾವಳಿಯ ಮಹನೀಯರು ಮಾಡಿರುವ ಸಾಧನೆಯ ಬಗ್ಗೆ ವಿದ್ಯಾರ್ಥಿಗಳು ಕೃತಿಯನ್ನು ರಚಿಸುವಂತವರಾಗಬೇಕು ಎಂದು ಹೇಳಿದರು.


ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ. ಕೆ. ಎನ್, ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ. ಬಿ, ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್. ಬಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಡಾ. ಕೆ ಶಿವರಾಮ ಕಾರಂತರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಪ್ರಮೋದ್. ಎಂ. ಜೆ ಸ್ವಾಗತಿಸಿ,  ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್. ಕೆ ವಂದಿಸಿ, ದ್ವಿತೀಯ ಬಿ ಎ ವಿದ್ಯಾರ್ಥಿನಿ ಚೈತನ್ಯ ಚಂದಪ್ಪ  ನಿರೂಪಿಸಿದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top