ಹಬ್ಬಗಳ ಆಚರಣೆಯಲ್ಲಿ ವೈಜ್ಞಾನಿಕ ವಿಚಾರಗಳೂ ಅಡಗಿವೆ: ಶಂಕರಿ ಶರ್ಮ

Upayuktha
0



ಪುತ್ತೂರು: ಭಾರತೀಯ ಪರಂಪರೆಯಲ್ಲಿ ಉಕ್ತವಾಗಿರುವ ಪ್ರತಿಯೊಂದು ಆಚರಣೆ, ಹಬ್ಬಗಳಲ್ಲೂ ವೈಜ್ಞಾನಿಕ ನೆಲೆಗಟ್ಟನ್ನು ಕಾಣಬಹುದು. ಸರಿಯಾದ ಆಧಾರವಿಲ್ಲದೆ ಯಾವುದನ್ನೂ ನಮ್ಮ ಧರ್ಮದಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ ನಾವಿಂದು ನಮ್ಮ ಆಚರಣೆಗಳ ಹಿಂದಿರುವ ವಿಜ್ಞಾನವನ್ನು ಅರಿಯದೆ ಆಚರಣೆಗಳನ್ನೇ ಅನುಮಾನದಿಂದ ಕಾಣುತ್ತಿದ್ದೇವೆ. ಆದ್ದರಿಂದ ನಮ್ಮೊಳಗಿನ ಕತ್ತಲನ್ನು ಜ್ಞಾನದ ಬೆಳಕಿನಿಂದ ತೊಡಯಬೇಕಿದೆ ಎಂದು ಬಿಎಸ್‌ಎನ್‌ಎಲ್‌ನ ವಿಶ್ರಾಂತ ಉದ್ಯೋಗಿ ಶಂಕರಿ ಶರ್ಮ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯ, ಪದವಿಪೂರ್ವ ವಿದ್ಯಾಲಯ ಹಾಗೂ ವಿದ್ಯಾಭಾರತಿ ಉಚ್ಚಶಿಕ್ಷಣ ಸಂಸ್ಥಾನಗಳ ಸಹಯೋಗದಲ್ಲಿ ಆಯೋಜಿಸಲಾದ ಭಾರತ್ ಬೋಧ್ ಮಾಲಾ ಸರಣಿ ಉಪನ್ಯಾಸ ಕಾರ್ಯಕ್ರಮದ ಭಾಗವಾಗಿ ಹಬ್ಬಗಳ ಆಚರಣೆಯಲ್ಲಿ ವೈಜ್ಞಾನಿಕ ಹಿನ್ನಲೆ ಎಂಬ ವಿಷಯದ ಬಗೆಗೆ ಮಾಹಿತಿ ನೀಡಿದರು.


ನಾಗರಪಂಚಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಹೀಗೆ ವಿವಿಧ ಹಬ್ಬಗಳ ಆಚರಣೆಗಳ ಹಿಂದೆ ನಾನಾ ಬಗೆಯ ಉದ್ದೇಶ, ವಿಜ್ಞಾನಗಳು ಅಡಗಿವೆ. ಅಭ್ಯಂಜನದಂತಹ ರೀತಿ ರಿವಾಜುಗಳು ಮುಂಬರುವ ಚಳಿಯ ದಿನಗಳಿಂದ ಚರ್ಮವನ್ನು ಕಾಪಾಡಿಕೊಳ್ಳುವ ದೂರದೃಷ್ಟಿತ್ವವನ್ನು ಹೊಂದಿವೆ. ಇಷ್ಟಲ್ಲದೆ ನಮ್ಮ ಸಂಪ್ರದಾಯದಲ್ಲಿ ಉಕ್ತವಾದ ವಿವಿಧ ಬಗೆಯ ನಂಬಿಕೆಗಳೂ ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿವೆ. ಸಂಜೆ ವಿಸಿಲ್ ಹೊಡೆಯಬಾರದು, ಕೂದಲು, ಉಗುರುಗಳನ್ನು ಕತ್ತರಿಸಬಾರದು ಎಂಬುದಕ್ಕೆ ಸಕಾರಣಗಳಿವೆ ಎಂದು ವಿವರಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನದ ರಾಷ್ಟ್ರೀಯ ಮಂತ್ರಿ ಡಾ.ಶೋಭಿತಾ ಸತೀಶ್ ಮಾತನಾಡಿ ಭಾರತದಲ್ಲಿ ಶಿಕ್ಷಣವಿದೆ, ಆದರೆ ಶಿಕ್ಷಣದಲ್ಲಿ ಭಾರತವಿಲ್ಲ ಎಂಬುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಮೆಕಾಲೆ ಭಾರತದಲ್ಲಿ ಇಂಗ್ಲಿಷ್ ಭಾಷೆಯನ್ನು ಶಿಕ್ಷಣದ ಮೂಲಕ ತಂದಿರುವ ಬಗೆಗೆ ಆಕ್ಷೇಪವಿಲ್ಲ, ಆದರೆ ಶಿಕ್ಷಣದಲ್ಲಿ ಭಾರತೀಯ ವಿಚಾರಧಾರೆಗಳನ್ನು, ನಂಬಿಕೆ ವಿಶ್ವಾಸಗಳನ್ನು ಒಡಮೂಡಿಸದೆ ವಿದ್ಯಾರ್ಥಿಗಳನ್ನು ಭಾರತೀಯ ವಿಷಯಗಳಿಂದ ದೂರಗೊಳಿಸಿ ರೂಪಿಸುವ ಉದ್ದೇಶದ ಬಗೆಗೆ ವಿರೋಧವಿದೆ ಎಂದರು.


ನಮ್ಮ ಭಾರತೀಯ ವಿಚಾರಧಾರೆಗಳು ಎಷ್ಟು ಶ್ರೇಷ್ಟವಾಗಿವೆ ಎಂಬುದನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವುದು ಅತ್ಯಂತ ಅಗತ್ಯ. ಅಂಬಿಕಾದಂತಹ ಸಂಸ್ಥೆಗಳಲ್ಲಿ ಶಿಕ್ಷಣದಲ್ಲಿ ಭಾರತೀಯತೆಯನ್ನು ಒದಗಿಸಿಕೊಡಲಾಗುತ್ತಿದೆಯಾದರೂ ಹಲವು ಕಡೆಗಳಲ್ಲಿ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಭಾರತೀಯ ವಿಚಾರಧಾರೆಗಳ ಪ್ರಸರಣವನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.


ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ ಪ್ರಸಾದ್ ಡಿ.ಎಸ್. ಉಪಸ್ಥಿತರಿದ್ದರು. ವಿದ್ಯಾಥಿನಿ ಶ್ರೀಲಕ್ಷ್ಮಿ ಪ್ರಾರ್ಥಿಸಿ, ವಿದ್ಯಾರ್ಥಿ ಅನ್ವಿತ್ ಸ್ವಾಗತಿಸಿದರು. ವಿದ್ಯಾಥಿನಿ ಸುಜನಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷಿತಾ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top