ಮಂಗಳೂರು: ಇತ್ತೀಚೆಗೆ ನಿಧನರಾದ ಹೋಟೆಲ್ ಜನತಾ ಡಿಲಕ್ಸ್‌ನ ಮಾಲಿಕ ಪತ್ತುಮುಡಿ ಸೂರ್ಯನಾರಾಯಣ ರಾವ್ ಅವರ ಸ್ಮರಣಾರ್ಥವಾಗಿ, ಕೂಟ ಮಹಾಜಗತ್ತು ಮಂಗಳೂರು ಘಟಕದ ವತಿಯಿಂದ ಪಾಂಡೇಶ್ವರದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಬ್ಯಾಂಕ್‌ನ ನಿವೃತ್ತ ಆಡಳಿತ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ಭಟ್ ಅವರು, “ಅನ್ನಂ ಪರಬ್ರಹ್ಮ ಸ್ವರೂಪಮ್, ಅನ್ನೇ ನ ಭೃಶಂ ಚಿಂತಯೇತ್” ಎಂಬ ನುಡಿಗಟ್ಟನ್ನು ಉಲ್ಲೇಖಿಸಿ, ಅನ್ನದ ಮೇಲಿನ ಗೌರವ ಮತ್ತು ಶ್ರದ್ಧೆಯೇ ಸೂರ್ಯನಾರಾಯಣ ರಾವ್ ಅವರನ್ನು ಕರಾವಳಿಯ ಹೋಟೆಲ್ ಉದ್ಯಮದಲ್ಲಿ ಸೂರ್ಯನಂತೆ ಪ್ರಕಾಶಮಾನರನ್ನಾಗಿ ಮಾಡಿತು ಎಂದು ಹೇಳಿದರು.
ಉದ್ಯಮದೊಂದಿಗೆ ಸಮಾಜಸೇವೆಯಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ಶ್ರೀಯುತರು, ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ದಾನ ಧರ್ಮವನ್ನು ಮಾಡಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಶ್ರೇಷ್ಠತೆಯ ಸಾಧನೆಗಾಗಿ, ನಮ್ಮ ಸಮಾಜದ ಪ್ರತಿನಿಧಿಯಾದ ಸೂರ್ಯನಾರಾಯಣ ರಾವ್ ಅವರಿಗೆ ಇತ್ತೀಚೆಗೆ ಕೂಟ ಮಹಾಜಗತ್ತಿನ ಕಣ್ಮಣಿ ಪುರಸ್ಕಾರ ನೀಡಿತ್ತು ಎಂದು ಕೂಟ ಮಹಾಜಗತ್ತಿನ ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಶ್ರೀಧರ ಹೊಳ್ಳ ಹೇಳಿದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಕೂಟ ವಾಣಿ ಪತ್ರಿಕೆಯ ನಿಕಟಪೂರ್ವ ಸಂಪಾದಕ ನಿತ್ಯಾನಂದ ಕಾರಂತ್, ಸಂಪಾದಕ ಅಡೂರು ಕೃಷ್ಣ ರಾವ್, ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ ಐತಾಳ್, ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಮೊದಲಾದವರು ನುಡಿನಮನ ಸಲ್ಲಿಸಿದರು.
ಕೋಶಾಧಿಕಾರಿ ಪದ್ಮನಾಭ ಮಯ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಪದಾಧಿಕಾರಿ ಸದಸ್ಯರಾದ ಸಿ.ಎ ಚಂದ್ರಮೋಹನ್, ಪ್ರಸನ್ನ ಇರುವೈಲು, ಮೆನೇಜರ್ ಶಿವರಾಮ ರಾವ್, ತಾರಾನಾಥ ಹೊಳ್ಳ ಕಾರ್ಕಡ, ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಭಾ ಎಸ್ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಗೌರಿ ಆರ್. ಹೊಳ್ಳ, ಶಶಿಪ್ರಭಾ ಐತಾಳ್, ಅನುಪಮ, ವೀಣಾ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ