ಯುವಜನರು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಂರಕ್ಷಣೆ ಅತೀ ಅಗತ್ಯ: ಮಂಜುನಾಥ ನಾಯಕ್

Upayuktha
0


ಶಿವಮೊಗ್ಗ: ನಗರದ ಪೋಲಿಸ್ ಸಭಾಂಗಣದಲ್ಲಿ ಶುಕ್ರವಾರ (ಅ.10) ನಡೆದ ವಿಶ್ವ ಮಾನಸಿಕ ಆರೋಗ್ಯದಿನಾಚರಣೆಯ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಮಂಜುನಾಥ ನಾಯಕ ರವರು ಮಾನಸಿಕ ಆರೋಗ್ಯ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.


ಭಾರತದಲ್ಲಿ ಆತ್ಮಹತ್ಯೆ ಹೆಚ್ಚಾಗುತ್ತಿದ್ದು ಕೇವಲ ಒಂದು ವರ್ಷದಲ್ಲಿ 13,900 ಕ್ಕಿಂತಲೂ ಹೆಚ್ಚು ಯುವಜನರು,ವಿಧ್ಯಾರ್ಥಿಗಳು ಆತ್ಮಹತ್ಯೆಗೆ ಒಳಗಾಗಿರುವುದು ಆತಂಕಕಾರಿ ಎಂದರು.ವಿದ್ಯಾರ್ಥಿಗಳಿಗೆ ತಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ತರಬೇತಿ ಹಾಗೂ ಬೆಂಬಲದ ಅಗತ್ಯವಿದೆ ಎಂದು ಅವರು ತಿಳಿಸಿದರು.


ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಶೈಕ್ಷಣಿಕ ಸಂಸ್ಥೆಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಿರುವುದರ ಕುರಿತು ಮಾತನಾಡಿದ ಪ್ರಧಾನ ನ್ಯಾಯಾಧೀಶರು ಪೊಲೀಸ್ ಸಿಬ್ಬಂದಿ ಗಳು ಸಾರ್ವಜನಿಕರೊಂದಿಗೆ ಎಲ್ಲಾ ತುರ್ತು ಸನ್ನಿವೇಶಗಳಲ್ಲಿ ಉಂಟಾಗ ಬಹುದಾದ ಮಾನಸಿಕ ಸಮಸ್ಯೆಗಳನ್ನು ಗುರುತಿಸಬೇಕು. ಮಾತ್ರವಲ್ಲದೆ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮ್ಮ  ಹಾಗೂ ಇತರರ ಮಾನಸಿಕ ಆರೋಗ್ಯ ನಿರ್ವಹಣೆಯ ಸಂಧರ್ಭದಲ್ಲಿ ಕೇವಲ ಪೊಲೀಸ್ ಎಂದಷ್ಟೇ ಅಲ್ಲದೆ ಮಾನವರಾಗಿ ಮನುಷ್ಯರಂತೆ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು. ಪೊಲೀಸ್ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯ ಕುರಿತ ವಿಚಾರ ಸಂಕಿರಣ ಉಪಯುಕ್ತವಾಗಬಲ್ಲದು ಎಂದು ಅವರು ತಿಳಿಸಿದರು. ಜಿಲ್ಲಕಾನೂನು ಸೇವಾ ಪ್ರಾಧಿಕಾರವು ಮಾನಸ ಸಂಸ್ಥೆಯ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.


ಇದೇ ಸಂಧರ್ಭದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಕಾಲೇಜಿನ ವಿಧ್ಯಾರ್ಥಿಗಳು ಏರ್ಪಡಿಸಿದ ಮಾನಸಿಕ ಆರೋಗ್ಯ ಜನ ಜಾಗೃತಿ ಜಾಥಾವನ್ನು ಮಂಜುನಾಥ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ರವರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನಕುಮಾರ್ ರವರು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪೊಲೀಸ್ ಅಧೀಕ್ಷ ಮಿಥುನಕುಮಾರ್ ಅವರು ಪೊಲೀಸ್ ಸಿಬ್ಬಂದಿಗಳು ತಮ್ಮ ಹಾಗೂ ತಮ್ಮ ಮಾನಸಿಕ ಆರೋಗ್ಯಸಂರಕ್ಷಿಸಿಕೊಳ್ಳ ಬೇಕಾದ ಅಗತ್ಯಗಳನ್ನು ಉದಾಹರಣೆಗಳೊಂದಿಗೆ ತಿಳಿಸಿದರು.


ದಿಕ್ಸೂಚಿ ಭಾಷಣ ಮಾಡಿದ ಮಾನಸ ನರ್ಸಿಂಗ್ ಹೋಮ್ ನ ಮನೋವೈದ್ಯರಾದ ಡಾಕ್ಟರ್ ನವೀನ್ ರವರು ವಿಪತ್ತು ಸನ್ನಿವೇಶಗಳ ಮಾನಸಿಕ ಸ್ಥಿತಿಗತಿಗಳನ್ನು ವಿವರಿಸಿ ಸಾರ್ವಜನಿಕ ಸೇವೆಯಲ್ಲಿ ಇರುವವರ ಜವಾಬ್ದಾರಿ ಹಾಗೂ ಕೌಶಲ್ಯ ಗಳ ಕುರಿತು ಉಲ್ಲೇಖಿಸಿದರು. ಮಾನಸಿಕ ಆರೋಗ್ಯ ಸೇವೆ ಕುಟುಂಬ ಹಾಗೂ ನೆರೆಹೊರೆಯ ಜನರ ಬೆಂಬಲ ಹಾಗೂ ಸಾಂತ್ವನದಿಂದ ಪ್ರಾರಂಭವಾಗುತ್ತದೆ. ಎರಡನೇ ಹಂತ ವಿವಿಧ ಇಲಾಖೆ ಹಾಗೂ ಸಂಸ್ಥೆಗಳದ್ದು. ಮೂರನೆಯ ಹಂತ ಮಾನಸಿಕ ಆರೋಗ್ಯ ತಜ್ಞರದ್ದು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಏ ಜಿ ಕಾರಿಯಪ್ಪ, ರಮೇಶಕುಮಾರ್, ಮಾನಸ ಸಂಸ್ಥೆ ಆಡಳಿತಾಧಿಕಾರಿ ಪ್ರೊ ರಾಮಚಂದ್ರ ಬಾಳಿಗಾ, ಪ್ರಾಂಶುಪಾಲರಾದ ಸಂಧ್ಯಾ ಕಾವೇರಿ, ಡಾಕ್ಟರ್ ಮಲ್ಲಿಕಾರ್ಜುನ್, ಡಾಕ್ಟರ್ ಅರ್ಚನಾ ಭಟ್, ಡಾಕ್ಟರ್ ಹರಿಹರನ್ ಉಪಸ್ಥಿತರಿದ್ದರು. 


ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಧ್ಯಾ ಕಾವೇರಿಯವರು, ಮಾನಸಿಕ ಆರೋಗ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ 7 ದಿನಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಾನಸಿಕ ಆರೋಗ್ಯ ಸಂರಕ್ಷಣೆಯ ಕುರಿತು ಸಾರ್ವಜನಿಕ ಗಮನ ಸೆಳೆಯಲು ದಿನಾಂಕ 11 ರಂದು ಸಿಟಿ ಸೆಂಟರ್ ಮಾಲ್ ನಲ್ಲಿ ಸಂಜೆ 5 ಗಂಟೆಗೆ ನೃತ್ಯ ರೂಪಕ ನಡೆಯಲಿದೆ. ಎರಡು ದಿನಗಳ ಕಾಲ ವೆಬಿನರ್ ನಡೆಯಲಿದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಆಪ್ತ ಎಂಬ ಸಮಾಲೋಚನಾ ಕೇಂದ್ರ ಉದ್ಘಾಟನೆ ಆಗಲಿದೆ. ರಸಪ್ರಶ್ನೆ ಹಾಗೂ ವಿಡಿಯೋ ಸ್ಪರ್ಧೆ ನಡೆಯಲಿದೆ. ವಿವಿಧ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.


ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಮಾನಸ ನರ್ಸಿಂಗ್ ಹೋಮ್ ನಲ್ಲಿ ವಿಶೇಷ ಮನೋಶಿಕ್ಷಣ ಆಪ್ತ ಸಮಾಲೋಚನೆಯನ್ನು 1 ವಾರಗಳ ಕಾಲ  ಉಚಿತವಾಗಿ ನೀಡಲಾಗುತ್ತದೆ. ಸಪ್ತಾಹ ಕಾರ್ಯಕ್ರಮಗಳ ಸಮಾರೋಪವು ದಿನಾಂಕ 17ರಂದು ನಗರದ ಗೋಪಿ ವೃತ್ತದಲ್ಲಿ ಮನೋ ಸಾಮಾಜಿಕ ಸಂರಕ್ಷಣೆಯ ಪ್ರತಿಜ್ಞಾ ವಿಧಿಯ ಮೂಲಕ ನಡೆಯಲಿದೆ. ಸಾಯಂಕಾಲ 5.30 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಶ್ರೀಮತಿ ಸವಿತಾ ನಾಗಭೂಷಣ್ ಅವರು ಪ್ರತಿಜ್ಞಾ ವಿಧಿ ಬೋಧಿಸಲಿದ್ದು, ನ್ಯಾಯಾಧೀಶ ಸಂತೋಷ್ ಅವರು, ಡಾಕ್ಟರ್ ರಜನಿ ಪೈ, ರಾಜೇಂದ್ರ ಚೆನ್ನಿ  ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು.


ನಂತರ ಸಂಪನ್ಮೂಲ ವ್ಯಕ್ತಿಗಳಾದ ಮನಶಾಸ್ತ್ರಜ್ಞರಾದ ಶ್ರೀಮತಿ ಶ್ರೀದೇವಿ ಹಾಗೂ ಡಾಕ್ಟರ್ ಶ್ವೇತಾರವರು, ಎಂ ಫಿಲ್ ಕ್ಲಿನಿಕಲ್ Psychology ಪ್ರಶಿಕ್ಷಣಾರ್ಥಿಗಳಾದ ದೃಶ್ಯ ಮತ್ತು ಚೇತನ ಒತ್ತಡ ನಿರ್ವಹಣೆ ಕುರಿತು ಅಧಿವೇಶನಗಳನ್ನು ನಡೆಸಿದರು.


ಶ್ರೀಮತಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.ಡಾಕ್ಟರ್ ಅರ್ಚನಾ ಸ್ವಾಗತಿಸಿ, ಡಾಕ್ಟರ್ ಹರಿಹರನ್ ವಂದಿಸಿದರು. ಎಂ ಎಸ್ ಸಿ ಕ್ಲಿನಿಕಲ್ ಸೈಕಾಲಜಿ  ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಸುಮಾರು 200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top