ಸುರತ್ಕಲ್: ವಿಶೇಷ ಚೇತನ ಮಕ್ಕಳ ಸಮಗ್ರ ಅಭಿವೃದ್ಧಿಗೆ ಕೈಗಾರಿಕಾ ಸಂಸ್ಥೆಗಳು ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳು ಸಹಭಾಗಿತ್ವದಿಂದ ಶ್ರಮಿಸಬೇಕಾಗಿದೆ. ಪಾರಾದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಸಂಸ್ಥೆಯ ಉತ್ಪಾದನಾ ಮುಖ್ಯಸ್ಥ ಗಿರೀಶ್ ಎಸ್. ನುಡಿದರು.
ಅವರು ಪಣಂಬೂರಿನ ಪಾರಾದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಕೈಗಾರಿಕಾ ಸಂಸ್ಥೆಯ ವತಿಯಿಂದ ಸುರತ್ಕಲ್ ರೋಟರಿ ಮೂಲಕ ಪದವು ಕುಲಶೇಖರ ಶ್ರೀ ದುರ್ಗಾ ಟ್ರಸ್ಟ್ ಪ್ರವರ್ತಿತ ಐಕ್ಯಮ್ ವಿಶೇಷ ಮಕ್ಕಳ ಶಾಲೆಗೆ ಕೊಡುಗೆಯಾಗಿ ನೀಡಿದ ಶಾಲಾ ವಾಹನವನ್ನು ಹಸ್ತಾಂತರಿಸಿ ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮತ್ತು ಟ್ರಸ್ಟಿ ತಾರಾನಾಥ್ ಗಟ್ಟಿ ಮಾತನಾಡಿ, ದೇವರ ಮಕ್ಕಳೆಂದು ಪರಿಭಾವಿಸುವ ವಿಶೇಷ ಚೇತನ ಮಕ್ಕಳ ಅಭ್ಯುದಯಕ್ಕೆ ಸರಕಾರ ಮತ್ತು ಸಮಾಜ ಆದ್ಯತೆ ನೀಡಬೇಕಾಗಿದ್ದು ವಾಹನದ ಕೊಡುಗೆ ಪೋಷಕರು ಮತ್ತು ಮಕ್ಕಳ ಪಾಲಿಗೆ ಉಪಯುಕ್ತವಾಗಿದೆ ಎಂದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಮತ್ತು ಟ್ರಸ್ಟಿ ರಾಮಚಂದ್ರ ಬಿ ಕುಂದರ್ ಮಾತನಾಡಿ, ರೋಟರಿಯು ವಿಭಿನ್ನ ಸಾಮರ್ಥ್ಯದ ಮಕ್ಕಳ ಕಲ್ಯಾಣಕ್ಕೆ ಮುಖ್ಯ ಆದ್ಯತೆಯನ್ನು ನೀಡಲಾಗುತ್ತಿದ್ದು ವಾಹನ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರಯೋಜನ ಪಡೆಯಬಹುದಾಗಿದೆ ಎಂದರು.
ಪಾರಾದೀಪ್ ಫಾಸ್ಪೇಟ್ಸ್ ಲಿಮಿಟೆಡ್‌ನ ಹೆಚ್. ಆರ್. ವಿಭಾಗದ ಮುಖ್ಯಸ್ಥ ಚೇತನ್ ಮೆಂಡೋನ್ಸ ಮಾತನಾಡಿ, ನಮ್ಮ ಸಂಸ್ಥೆಯ ಪರಿಸರ ಅಭಿವೃದ್ಧಿ ಚಟುವಟಿಕೆಗಳೊಂದಿಗೆ ಶಿಕ್ಷಣ ಕ್ಷೇತಕ್ಕೂ ಸಹಾಯ ನೀಡುತ್ತಾ ಬಂದಿದ್ದು ವಿಶೇಷ ಚೇತನ ಮಕ್ಕಳ ಚಟುವಟಿಕೆಗಳಿಗೆ ನೆರವು ನೀಡುವುದು ಸಂತಸದ ಕಾರ್ಯವೆಂದರು.
ಸುರತ್ಕಲ್ ರೋಟರಿ ಯ ಉಪಾಧ್ಯಕ್ಷ ರಮೇಶ್ ರಾವ್ ಎಂ., ಕಾರ್ಯದರ್ಶಿ ರಾಮಮೋಹನ್ ವೈ. ಕ್ಲಬ್ ಸೇವಾ ನಿರ್ದೇಶಕ ಪ್ರೊ. ಕೃಷ್ಣಮೂರ್ತಿ. ಪಿ., ಪಬ್ಲಿಕ್ ಇಮೇಜ್ ನಿರ್ದೇಶಕ ಡಾ. ರಾಜಮೋಹನ್ ರಾವ್. ಕೆ., ಶ್ರೀ ದುರ್ಗಾ ಟ್ರಸ್ಟಿನ ಅಧ್ಯಕ್ಷೆ ಕಮಲಾಕ್ಷಿ. ಕೆ. ಕೋಶಾಧಿಕಾರಿ ರಾಜೇಶ್. ಎನ್., ಟ್ರಸ್ಟಿಗಳಾದ ಉಮಾನಾಥ ಕೊಟ್ಟಾರಿ, ಮಂಜುನಾಥ್ ರಾವ್, ಪದ್ಮನಾಭ ಕೆ. ಪಿ. ಪಿ. ಎಲ್. ಸಂಸ್ಥೆಯ ಅಧಿಕಾರಿ ವಿವೇಕ್ ಕೋಟ್ಯಾನ್, ಪೋಷಕರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

