ನಿಟ್ಟೆ: ಭಾರತೀಯ ಶ್ರಾವಣ ಸಂಸ್ಕೃತಿಯ ಪ್ರಸಾರಕ್ಕಾಗಿ ದೇಶವ್ಯಾಪಿ ಕಾರ್ಯನಿರ್ವಹಿಸುತ್ತಿರುವ ಎಸ್.ಪಿ.ಐ.ಸಿ.ಎಂ.ಎ.ಸಿ.ಎ.ವೈ (Society for the Promotion of Indian Classical Music And Culture Among Youth) ಸಂಸ್ಥೆಯ ಮಂಗಳೂರು ವಿಭಾಗದ ಆಶ್ರಯದಲ್ಲಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಅಕ್ಟೋಬರ್ 13 ರಂದು ಮಧ್ಯಾಹ್ನ 3.೦೦ ಗಂಟೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಿಟ್ಟೆ ಕ್ಯಾಂಪಸ್ ನ ಸಂಭ್ರಮ ಸಭಾಂಗಣದಲ್ಲಿ ಏರ್ಪಡಿಸಿದೆ.
ಪ್ರಸಿದ್ಧ ಗಾಯಕಿ ವಿದುಷಿ ಅಮೃತಾ ಮುರಳಿ ಅವರಿಂದ ಈ ಸಂಗೀತ ಕಚೇರಿ ನಡೆಯಲಿದ್ದು, ಅವರಿಗೆ ವಿದ್ವಾನ್ ಬಿ. ಎಸ್. ಪ್ರಶಾಂತ್ (ಮೃದಂಗ) ಮತ್ತು ವಿದುಷಿ ಅದಿತಿ ಕೃಷ್ಣಪ್ರಕಾಶ್ (ವೈಯೊಲಿನ್) ಸಹಕರಿಸಲಿರುವರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿ.