ನವರಾತ್ರಿ ಹಬ್ಬ ಅಂದ್ರೆ ವಿಶೇಷವಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ದುರ್ಗೆಯ ಆರಾಧನೆಯನ್ನು ಮಾಡುತ್ತಾರೆ. ಈ ಹಬ್ಬವು ಉತ್ತಮ ಮಹತ್ವವನ್ನು ಸಾರುತ್ತದೆ. ಹಬ್ಬದಂದು ಭಕ್ತಾದಿಗಳು ತಮ್ಮ ಮೆಚ್ಚುಗೆಯ ದೇವಿಯನ್ನು ಪೂಜಿಸಿ ಆರಾಧನೆಯನ್ನು ಮಾಡಿ ಸಲ್ಲಿಸುತ್ತಾರೆ. ಈ ಹಬ್ಬವು ಒಂಬತ್ತು ದಿನಗಳವರೆಗೆ ನಡೆಯುತ್ತದೆ.
ಇದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ.ಇದು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವುದರ ಜೊತೆಗೆ ದೇವಿಯ ಒಂಬತ್ತು ರೂಪಗಳನ್ನು ಒಳಗೊಂಡಿರುವ ದೃಶ್ಯವನ್ನು ನೋಡಿರುತ್ತೇವೆ. ನವರಾತ್ರಿಯು ವರ್ಷಕ್ಕೆ ಎರಡು ಬಾರಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಇಲ್ಲಿ ಹಲವಾರು ರೀತಿಯ ವೇಷಗಳನ್ನು ಹಾಕಿ ಮನೋರಂಜನೆಯನ್ನು ಕೊಡುವಲ್ಲಿ ನಮ್ಮ ತುಳುನಾಡು ಪ್ರಸಿದ್ಧಿಯನ್ನು ಪಡೆದಿದೆ. ಹುಲಿವೇಷವನ್ನು ಕಾಣುತ್ತೇವೆ.
ನವರಾತ್ರಿ ಹಬ್ಬದಂದು ಕೆಲವರು ಉಪವಾಸ ವೃತವನ್ನು ಮಾಡುತ್ತಾರೆ. ನವರಾತ್ರಿಯಂದು ಹಲವಾರು ದೇವಿಯ ಅವತಾರವನ್ನು ಎತ್ತುವ ಕಾಲವಿದು. ಈ ಹಬ್ಬವು ದೇವಿಯ ಸ್ವರೂಪವನ್ನು ಸೂಚಿಸುತ್ತದೆ. ಹಬ್ಬದಲ್ಲಿ ದೇವಿಗೆ ನೈವೇದ್ಯೆಯನ್ನು ಮಾಡಿ ಅರ್ಪಿಸುತ್ತಾರೆ.
ಪ್ರತಿ ದೇವಾಲಯದಲ್ಲಿಯೂ ದೇವಿಯನ್ನು ಹೂವಿನಿಂದ ಅಲಂಕರಿಸಿ, ಆಭರಣ, ವಸ್ತ್ರಗಳನ್ನು ಧರಿಸಿ ಪೂಜೆಯನ್ನು ಮಾಡುತ್ತಾರೆ. ಈ ಹಬ್ಬವನ್ನು ಎಲ್ಲೆಡೆ ಬಹಳ ವಿಜೃಂಭಣೆಯಿಂದ ಮನೆಮನೆಯಲ್ಲೂ ಪೂಜೆಯನ್ನು ಮಾಡಿ ಶುದ್ಧದಿಂದ ದೇವರನ್ನು ಆರಾಧಿಸುತ್ತಾರೆ. ಶೈಲಪುತ್ರಿಯನ್ನುಆರಾಧಿಸುತ್ತಾರೆ. ನವರಾತ್ರಿ ಮೊದಲನೆ ದಿನದಂದು ಶೈಲ ಪುತ್ರಿ ದೇವಿಯನ್ನು ಪೂಜಿಸುತ್ತೇವೆ. ಶೈಲ ಪುತ್ರಿ ದೇವಿಯು ಬಿಳಿ ಬಣ್ಣವನ್ನು ಹಾಗೂ ಬಿಳಿ ಬಣ್ಣದ ವಸ್ತ್ರಗಳನ್ನು ಪ್ರೀತಿಸುತ್ತಾಳೆ. ಬಿಳಿ ಬಣ್ಣವು ಮುಗ್ಧತೆ ಶುದ್ಧತೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಹಿಮಾಲಯದ ಪುತ್ರಿ ಆಗಿದ್ದಾರೆ ಶೈಲ ಪುತ್ರಿ. ಗೂಳಿಯ ಮೇಲೆ ಕುಳಿತಿರುವ ಮಾತೆ ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಮತ್ತು ಕೈಯಲ್ಲಿ ತಾವರೆ ಇದೆ. ಸತಿ, ಭವಾನಿ, ಪಾರ್ವತಿ, ಮತ್ತು ಹೇಮಾವತಿ ಎಂಬ ಹೆಸರು ಶೈಲ ಪುತ್ರಿ ಗೊಂಡಿದೆ.
ನಂತರ ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಾಮಾತಾ, ಕಾತ್ಯಾಯಿನಿ, ಕಾಲ ರಾತ್ರಿ, ಮಹಾ ಗೌರಿ, ಸಿದ್ಧಿ ಧಾತ್ರಿ. ಪ್ರತಿದಿನ ದೇವಿಯ ಆರಾಧನೆಯನ್ನು ಮಾಡುತ್ತಾರೆ. ನವರಾತ್ರಿಯ ನಂತರವೇ ದಸರಾ ಹಬ್ಬ ಆರಂಭವಾಗುತ್ತದೆ.
-ಶಿವಾನಿ ಕೊಡಂಗಾಯಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



