ಪ್ರತಿ ಕ್ಷಣ ಬದಲಾಗೋ ಈ ಪ್ರಪಂಚದಲ್ಲಿ, ಎಂದು ಬದಲಾಗದೇ ಶಾಶ್ವತವಾಗಿ ಉಳಿಯುವುದೇ ಒಂದೇ ಒಂದು ತಾಯಿಯ ಪ್ರೀತಿ. ಈ ಭೂಮಿಯಲ್ಲಿ ಅಮ್ಮನಿಗಿಂತ ದೊಡ್ಡ ತ್ಯಾಗಮೂರ್ತಿ ಯಾರೂ ಇಲ್ಲ. ಅಮ್ಮ ಮಮತೆಯ ಮೂರ್ತಿ, ಬದುಕಿನ ಶಕ್ತಿ, ಉಸಿರು ನೀಡಿದ ದೇವತೆ.
ಪ್ರಪಂಚಕ್ಕೆ ನನ್ನ ಪರಿಚಯಿಸಿದ ನನ್ನ ಜೀವ ನನ್ನ ಅಮ್ಮ. ಇಡೀ ವಿಶ್ವದಲ್ಲಿಯೇ ನಿಮ್ಮಷ್ಟು ಅಮೂಲ್ಯ ಬೇರೆ ಏನೂ ಇಲ್ಲ, ಪ್ರೀತಿ, ನಿರ್ಮಲ ಮನಸ್ಸಿನ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಮತೆಯ ಮಡಿಲು, ತ್ಯಾಗದ ಒಡಲು ಆಗಿರುವ ದೇವತೆಯೇ ಅಮ್ಮ. ನಾವು ಎಷ್ಟೇ ನೋವು ಕೊಟ್ಟರೂ ಮತ್ತೇ ನಮ್ಮನ್ನು ಪ್ರೀತ್ಸೋ ಜೀವ ಅಂದ್ರೆ ಅದು ತಾಯಿ ಮಾತ್ರ.
ನಮ್ಮ ಜೀವನವನ್ನು ಸೃಷ್ಟಿಸಿ, ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪಿಸುವಲ್ಲಿ ಅಮ್ಮ ಬಹಳ ಕಷ್ಟ ಪಡುತ್ತಾರೆ. ತಾಯಿಯೇ ಪ್ರತಿ ಮಗುವಿಗೆ ಮೊದಲ ಗುರು. ಹುಟ್ಟಿದಾಗ ಮೊದಲು ಕಂಡದ್ದು ಅಮ್ಮ. ನೂರು ಜನ್ಮವೆತ್ತಿ ಹಗಲು, ರಾತ್ರಿ ತಾಯಿಯ ಸೇವೆ ಮಾಡಿದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಬಿದ್ದಾಗ, ಅತ್ತಾಗ ಮೊದಲು ಕರೆಯುವುದೇ ಅಮ್ಮಾ... ಎಂದು ಕರೆಯುವುದೇ ಸ್ಪೂರ್ತಿ. ಜಗತ್ತಿನ ಯಾವ ಪ್ರೀತಿಯಾದರೂ ಮೋಸ ಮಾಡಬಹುದು ಆದರೆ ತಾಯಿಯ ಪ್ರೀತಿ ಎಂದಿಗೂ ಮೋಸ ಮಾಡಲು ಸಾಧ್ಯವಿಲ್ಲ. ನಿನ್ನ ಮಡಿಲಲ್ಲಿ ಮಲಗಿದಾಗ ಸಿಕ್ಕ ನೆಮ್ಮದಿ ಇನ್ನೆಲ್ಲೂ ಸಿಗದು, ನಿನ್ನ ಕೈ ತುತ್ತಿನ ರುಚಿಯು ಎಲ್ಲೂ ಸಿಗದು.
ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ, ಮಮಕಾರದಲ್ಲಿ ಕಡಲು ನನ್ನ ತಾಯಿ. ಗರ್ಭದಲ್ಲೇ ಗುಡಿ ಕಟ್ಟಿ ಒಂಭತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಪೂಜಿಸಿ ಕಾಪಾಡುವ ದೇವತೆಯೇ ಅಮ್ಮಾ. ಬೆಲೆ ಕಟ್ಟೋಕೆ ಆಗದೇ ಇರುವ ಜೀವ ಅಂದ್ರೆ ಅದು ತಾಯಿ ಒಬ್ಬಳೇ. ಮನೆಗೆ ಬಂದ ತಕ್ಷಣ ಬಾಯಿಂದ ಬರೋ ಮೊದಲ ಪದವೇ ಅಮ್ಮ. ತನಗೇನನ್ನೂ ಬಯಸದೇ ಮಕ್ಕಳ ಸಂತೋಷದಲ್ಲಿ ತನ್ನ ಸುಖವನ್ನು ಕಂಡು ತನ್ನವರಿಗಾಗಿ ಜೀವ ಸವೆದವಳು. ಹಸಿವು ಎಂದಾಗ ತುತ್ತನಿಟ್ಟು, ಹಣೆಗೆ ಮುತ್ತನಿಟ್ಟು, ಚೇಷ್ಟೆಗೆ ಪೆಟ್ಟು ಕೊಟ್ಟು ಒಳಗೊಳಗೆ ನೋವನ್ನು ಮುಚ್ಚಿಟ್ಟು ಬದುಕುವವಳೇ ಅಮ್ಮ. ಅಮ್ಮ ದೋಣಿಯಾಗಿ ನಮ್ಮ ಜೀವನ ಎಂಬ ನದಿಯ ಮೇಲೆ ತೇಲಿಸುತ್ತಾಳೆ. ಪ್ರತಿಯೊಂದು ಕ್ಷಣದಲ್ಲೂ ನನಗಾಗಿ ಮಿಡಿಯುವ ಹೃದಯವೇ ಅಮ್ಮ. ಅಮ್ಮ, ಗಂಡನಿಗೆ ಮಡದಿಯಾಗಿ, ಮಕ್ಕಳಿಗೆ ಅಮ್ಮನಾಗಿ, ಅತ್ತೆ ಮಾವನಿಗೆ ಸೊಸೆಯಾಗಿ ಕ್ಷೇಮ ಸಮಾಚಾರವನ್ನು ವಿಚಾರಿಸುವವಳೇ ಅಮ್ಮ.
ಅಮ್ಮ ಬದುಕಿನ ಶಕ್ತಿ. ಪ್ರತಿಯೊಬ್ಬರ ಬಾಳಿನಲ್ಲಿ ನೀನೆ ಬೆಳಕು ತುಂಬಿದ ದೇವತೆ. ಹೊರ ಲೋಕವನ್ನು ಪರಿಚಯಿಸಿ ಕೊಟ್ಟ ನನ್ನ ಜೀವ ಅಮ್ಮಾ..
ಸಂಸ್ಕಾರವನ್ನು ಕಳಿಸಿಕೊಟ್ಟ ದೇವತೆ ನೀನಮ್ಮಾ.. ಬದುಕನ್ನು ಹೇಗೆ ನಡೆಸಬೇಕು ಎಂದು ಕಲಿಸಿಕೊಟ್ಟ ದೇವತೆ. ನಿನಗೆ ಆರೋಗ್ಯ, ಶಾಂತಿ, ನೆಮ್ಮದಿ, ಸಂಪತ್ತು ನೀಡಿ ಕಾಪಾಡಲಿ ಎಂದು ದೇವರಲ್ಲಿ ಬೇಡುತ್ತೇನೆ.
- ಶಿವಾನಿ ಕೊಡಂಗಾಯಿ
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



