ಯೋಗಾಸನ ಸ್ಪರ್ಧೆ; ಆಳ್ವಾಸ್ ಶಾಲೆಯ 12 ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ

Chandrashekhara Kulamarva
0



ಮೂಡುಬಿದಿರೆ: ಕಾರ್ಕಳ ಸಾಣೂರಿನ ರಾಜೇಶ್ವರಿ ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ - ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ 04 ಜನ ಬಾಲಕಿಯರು ಹಾಗೂ 08 ಜನ ಬಾಲಕರು ಒಟ್ಟು 12 ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದುಕೊಂದು ರಾಜ್ಯಮಟ್ಟಕ್ಕೆ  ಆಯ್ಕೆಯಾಗಿದ್ದಾರೆ. ಒಂದೇ ಶಾಲೆಯಿಂದ  12 ಜನ  ಕ್ರೀಡಾಪಟುಗಳು ಆಯ್ಕೆಯಾಗಿರುವುದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಹೆಮ್ಮೆಯ ವಿಚಾರವಾಗಿರುತ್ತದೆ.


14 ವರ್ಷ ವಯೋಮಿತಿ ವಿಭಾಗ

ಅರ್ಟಿಸ್ಟಿಕ್ ಯೋಗ ಪೇರ್ : ಶ್ಯಾಮ್ ಹಾಗೂ ಶಶಿಕುಮಾರ್ - ಪ್ರಥಮ

ರಿದಮಿಕ್ ಯೋಗ ಪೇರ್ : ಆದರ್ಶ್ ಹಾಗೂ ಶಶಾಂಕ್ - ಪ್ರಥಮ

ಅರ್ಟಿಸ್ಟಿಕ್ ಸಿಂಗಲ್ : ಆದರ್ಶ್ ಕೆ ಎಸ್ - ಪ್ರಥಮ

ಟ್ರೆಡಿಶನಲ್ ಸಿಂಗಲ್ - ಶಶಿಕುಮಾರ್ ವಿ ಜಿ - ಪ್ರಥಮ

17 ವರ್ಷ ವಯೋಮಿತಿಯ ಬಾಲಕರ ವಿಭಾಗ

ಅರ್ಟಿಸ್ಟಿಕ್ ಯೋಗ ಪೇರ್ : ಕಾರ್ತಿಕ್ ಹಾಗೂ ಪ್ರಜ್ವಲ್ - ಪ್ರಥಮ

ರಿದಮಿಕ್ ಯೋಗ ಪೇರ್ : ಶ್ರೀವತ್ಸರಾಜ್ ಹಾಗೂ ಶ್ರೇಯಸ್ - ಪ್ರಥಮ

17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ

ಅರ್ಟಿಸ್ಟಿಕ್ ಯೋಗ ಪೇರ್ : ಹಿಮಜ ಹಾಗೂ ಶ್ರಾವಣಿ - ಪ್ರಥಮ

ರಿದಮಿಕ್ ಯೋಗ ಪೇರ್ : ಸಾನಿಕ ಹಾಗೂ ಜಯಲಕ್ಷಿ÷್ಮ - ಪ್ರಥಮ

ಅರ್ಟಿಸ್ಟಿಕ್ ಸಿಂಗಲ್ : ಸಾನಿಕ - ದ್ವಿತೀಯ

ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರವರು ಅಭಿನಂದಸಿದ್ದಾರೆ.



Post a Comment

0 Comments
Post a Comment (0)
To Top