ಕವಿಗಳ ಕವನಗಳು ಮಾನವನ ಜೀವನವನ್ನು ಪರಿವರ್ತನೆ ಮಾಡುವ ಶಕ್ತಿ ಹೊಂದಿದೆ-ಭೀಮಣ್ಣ ಟಿ.ನಾಯ್ಕ

Upayuktha
0


ದಾವಣಗೆರೆ: ಅರ್ಥಪೂರ್ಣ ಹಿರಿಯ ಕವಿ, ಕವಯತ್ರಿಯರ ಕವನಗಳು ಮಾನವನ ಜೀವನವನ್ನು ಸಮಾಜವನ್ನು ಪರಿವರ್ತನೆ ಮಾಡುವ ಶಕ್ತಿ ಹೊಂದಿದೆ. ಕೇವಲ ಹಾಡು, ಕವನ ವಾಚನ, ಕವಿಗೋಷ್ಠಿಗಳಿಗೆ ಸೀಮಿತವಾಗದೇ ನಮ್ಮ ನಿಮ್ಮೆಲ್ಲರ ಮನದಲ್ಲಿ ಹೃದಯದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಕಾಳಜಿ ಇದ್ದರೆ ಕನ್ನಡದ ಹೋರಾಟಕ್ಕೆ ಸೀಮಿತವಾಗದೇ ಕನ್ನಡದ ಸೇವೆ ಮಾಡೋಣ ಎಂದು ಶಿರಶಿಯ ಸಿದ್ದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ.ನಾಯ್ಕ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.


ಉತ್ತರ ಕನ್ನಡ ಜಿಲ್ಲೆಯ ಶಿರಶಿಯ ಹೋಟೆಲ್ ಸುಪ್ರಿಯಾ ಇಂಟರ್ ನ್ಯಾಷನಲ್ ಸಭಾಂಗಣದ ಭವ್ಯ-ದಿವ್ಯ ವೇದಿಕೆಯಲ್ಲಿ ಶಿರಶಿಯ ಕದಂಬ ಕಲಾ ಸಾಂಸ್ಕøತಿಕ ಪರಿಷತ್ತು ಹಾಗೂ ಕರ್ನಾಟಕ ಸಗಮ ಸಂಗೀತ ಪರಿಷತ್ ಸಂಯುಕ್ತಾಶ್ರಯದಲ್ಲಿ ಶತಕಂಠ ಗೀತಗಾಯನ ಸಮಾರಂಭವನ್ನು ಇತ್ತೀಚಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ಸಗಮ ಸಂಗೀತ ಪರಿಷತ್‍ನ ಅಧ್ಯಕ್ಷರು ಹಾಗೂ ಕದಂಬ ಕಲಾ ಸಾಂಸ್ಕøತಿಕ ಪರಿಷತ್ತು ಅಧ್ಯಕ್ಷರಾದ ಕದಂಬ ರತ್ನಾಕರ ವಹಿಸಿಕೊಂಡರು.


ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಕದಂಬ ರತ್ನಾಕರರವರ “ಹೊನ್ನುಡಿ” ಕವನ ಸಂಕಲನವನ್ನು ವೇದಿಕೆಯಲ್ಲಿ ಲೋಕಾರ್ಪಣೆ ಮಾಡಿದರು. ವೇದಿಕೆಯಲ್ಲಿ ಶಿರಶಿಯ ತಹಶೀಲ್ದಾರರಾದ ಪಟ್ಟರಾಜ ಗೌಡ, ಹಿರಿಯ ಕವಿಗಳಾದ ಬೆಂಗಳೂರಿನ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ಶಿರಶಿಯ ಶಿಕ್ಷಣ ತಜ್ಞರಾದ ಪ್ರೊ.ಕೆ.ಎನ್.ಹೊಸ್ಮನಿ, ಸತೀಶ್‍ನಾಯ್ಕ, ಡಾ. ವೆಂಕಟೇಶನಾಯ್ಕ, ಗಣಪತಿ ಭಟ್, ಗಣಪತಿ ಆರ್.ನಾಯ್ಕ, ಉಮಾಕಾಂತಗೌಡ, ಭೀಮಶಂಕರ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.


ಕರ್ನಾಟಕ ಸಗಮ ಸಂಗೀತ ಪರಿಷತ್‍ನ ಮೈಸೂರು ಜಿಲ್ಲೆಯ ಅಧ್ಯಕ್ಷರಾದ ಡಾ. ನಾಗರಾಜ ವಿ.ಬೈರಿ, ಚಾಮರಾಜ ನಗರದ ಖ್ಯಾತ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ, ಕ.ಸು.ಸಂ.ಪರಿಷತ್ತಿನ ಮಂಡ್ಯ ಜಿಲ್ಲೆಯ ಅಧ್ಯಕ್ಷರಾದ ಡೇವಿಡ್ ಪ್ರತಿಭಾಂಜಲಿ, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶಾಂತಾ ಶೆಟ್ಟ, ದಾವಣಗೆರೆ ಜಿಲ್ಲೆಯ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ, ಬೆಂಗಳೂರಿನ ಹೆಸರಾಂತ ಗಾಯಕರಾದ ಎರ್ರಿಸ್ವಾಮಿ ಹೆಚ್. ಇವರೆಲ್ಲರಿಗೂ ಅವರ ಕಲಾ ಪ್ರತಿಭೆ ಸಾಧನೆಗಳನ್ನು ಗುರುತಿಸಿ “ಕದಂಬ ಕಲಾರಾಧಕ” ರಾಜ್ಯ ಪ್ರಶಸ್ತಿಯನ್ನು ಗಣ್ಯಮಾನ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಕುಮಾರಿ ದಿವ್ಯಾ ಎಸ್.ಕದಂಬರವರು ಅಚ್ಚುಕಟ್ಟಾಗಿ ಸಂಗೀತ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗ್ರಂಥಾಲಯವೇ ದೇವಾಲಯ ಗೀತೆಯೊಂದಿಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಸಾಮೂಹಿಕ ಗೀತೆಯೊಂದಿಗೆ ಸ್ವಾಗತಿಸಿದರು. ಕೊನೆಯಲ್ಲಿ ಕುಮಾರಿ ದಿವಾÀ್ಯ ಶೇಟ್ ವಂದಿಸಿದರು. ಕಾವೆಂಶ್ರೀ “ಕಾವ್ಯಯಾನ-ಭಾವಯಾನ” ಕವಿಯ ನೋಡಿ ಕವಿತೆ ಹಾಡಿ ಗೀತಗಾಯನ ಸಮಾರಂಭವು ಅತ್ಯದ್ಭುತವಾಗಿ ಯಶಸ್ವಿಯಾಗಿ ಸುಸಂಪನ್ನಗೊಂಡಿತು ಎಂದು  ಕರ್ನಾಟಕ ಸಗಮ ಸಂಗೀತ ಪರಿಷತ್‍ನ ಜಿಲ್ಲಾಧ್ಯಕ್ಷರಾದ, ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಸಾಲಿಗ್ರಾಮ ಗಣೇಶ್ ಶೆಣೈ ಮೆಚ್ಚುಗೆ ವ್ಯಕ್ತಪಡಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top