ಮಂಗಳೂರು: ಹಿರಿಯ ಕೊಂಕಣಿ ಸಾಹಿತಿ, ಪತ್ರಕರ್ತರು, ಸಂಘಟಕರನ್ನು ಹುಡುಕಿ, ಭೇಟಿ ಮಾಡಿ ಅವರ ವಿವರ ಪಡೆದು ಸಹಾಯ ಮಾಡಲು ಸಾಧ್ಯತೆಯನ್ನು ಪರಿಶೀಲನೆ ಮಾಡುವ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಮಹತ್ವದ ಕಾರ್ಯಕ್ರಮ ಬೆಳ್ಳೂರು ನಿವಾಸಿ ಕಾಣಿಕ್ ಪತ್ರಿಕೆಯ ಮಾಜಿ ಸಂಪಾದಕ ಅವಿಲ್ ರಸ್ಕೀನ್ಹಾ ಅವರ ಮನೆಯಲ್ಲಿ ಕಾರ್ಯಕ್ರಮ ಮಾಡುವ ಮುಖಾಂತರ ಆರಂಭಿಸಲಾಯಿತು.
ದೀಪ ಬೆಳಗಿ ನಂದಿಸುವ ಬದಲು ಪ್ರಕಟಿತ ಪುಸ್ತಕದ ಓದಿನಿಂದ ಈ ಕಾರ್ಯಕ್ರಮ ಆರಂಭಿಸಿದ ಕೆಬಿಎಂಕೆ ನೂತನ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಸಾವಿರಾರು ಮಂದಿ ಲೇಖಕರು ಮುಂದೆ ಬರಲು ಬೆಳಕಾದ ಅವಿಲ್ ಅವರಿಗೆ ಸಾಹಿತ್ಯದ ಓದು ದೀಪವಾಗಿದೆ. ಅದಕ್ಕಾಗಿ ಪುಸ್ತಕ ಓದಿನಿಂದ ಉದ್ಘಾಟನೆ ಮಾಡಿದ್ದೇನೆ ಎಂದು ಶುಭನುಡಿದರು.
ಮುಖ್ಯ ಅತಿಥಿ ದೈಜಿದುಬಾಯ್ ಸಾಹಿತ್ಯ ಸಂಘಟನೆಯ ಸ್ಥಳೀಯ ಅಧ್ಯಕ್ಷರಾದ ಪ್ರವೀಣ್ ತಾವ್ರೊ ಮಾತನಾಡಿ, ನಾವು ಹಿರಿಯರು ನಮ್ಮ ಬಳಿಗೆ ಬರುವುದು ಕಾಯುವುದನ್ನು ಬಿಟ್ಟು, ನಾವೇ ಹೋಗಿ ಕ್ಷೇಮಾಭಿವೃದ್ಧಿ ನೋಡುವುದು ಒಳ್ಳೆಯ ನಡತೆ. ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಅಭಿನಂದನಾ ಅರ್ಹರು ಎಂದು ಶ್ಲಾಘಿಸಿದರು.
ಎಪ್ಪತ್ತರ ದಶಕದಲ್ಲಿ ಬಹಳ ಪ್ರಚಲಿತ ಮಂಗಳೂರಿನ ಕೊಂಕಣಿ ಪತ್ರಿಕೆ "ಕಾಣಿಕ್ " ಪ್ರಕಾಶನ ಮಾಡಿ ಸಂಪಾದಕ ಆಗಿದ್ದ ಅವಿಲ್ ರಸ್ಕಿನ್ಹಾ ಸನ್ಮಾನ ಸ್ವೀಕರಿಸಿ ಮಾತನಾಡಿದರು.
'ತಾನು ಜನರಿಗೆ ಮರೆತು ಹೋಗಿರುವ ಕಾಲದಲ್ಲಿ ಮತ್ತೊಮ್ಮೆ ಹುರಿದುಂಬಿಸುವ ಈ ಭಾಷಾ ಮಂಡಳ್ ಕರ್ನಾಟಕ ಕಾರ್ಯಕ್ರಮ ಸ್ತುತ್ಯಾರ್ಹ ಕೊಂಕಣಿ ಸಂಸ್ಥೆಗಳು ಇದನ್ನು ಮಾಡಬೇಕು. ಆಶಕ್ತರ ಬೆನ್ನೆಲುಬು ಆಗಬೇಕು. ಆರ್ಥಿಕ ನೆರವು ಮತ್ತು ಸರಕಾರಿ ಸವಲತ್ತುಗಳನ್ನು ಸಿಗುವಂತೆ ಪ್ರಯತ್ನ ಮಾಡಲು ಒಂದು ಮಾಹಿತಿ ಸಂಗ್ರಹ ಮಾಡಬೇಕು. ಆಗ ಅಲ್ಲಿ ಅನುದಾನಗಳು ಸದ್ವಿನಿಯೋಗ ಆದಂತೆ. ಕೆಬಿಎಂಕೆ ಅಧ್ಯಕ್ಷ ಈ ತೆರನಾದ ಯೋಜನೆ ಲೋಕೊದ್ದಾರಕ ರೀತಿಯದ್ದು ಎಂದು ಶ್ಲಾಘಿಸಿದರು.
ಹಿರಿಯ ಕೆಬಿಎಂಕೆ ಅಧ್ಯಕ್ಷ ಕೆ ವಸಂತ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಅವರು ಮಾತನಾಡಿ, ಕೆಬಿಎಂಕೆ ಮರುಜೀವ ಮಾಡಲು ಅವಕಾಶ ದೊರೆತಿದೆ. ನಾವು ಜನೋಪಯೋಗಿ ಆಗಿ ಸಂಸ್ಥೆಯ ಕಾರ್ಯಕ್ರಮ ಮಾಡುವ ಪಣ ತೊಟ್ಟಿದ್ದೇವೆ. ಜನರು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಜೂಲಿಯೆಟ್ ಫೆರ್ನಾಂಡೀಸ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿ ನಡೆಯಿತು. ಎಡ್ವರ್ಡ್ ಲೋಬೊ ತೊಕ್ಕೊಟ್ಟು ಮಿಮಿಕ್ರಿ ಮಾಡಿ ರಂಜಿಸಿದರು. ಕವಿಗಳಾದ ಅನಿತಾ ಶೆಣೈ, ರಿಚ್ಚಿ ಪಿರೇರಾ, ನವೀನ್ ಕುಲ್ಶೇಕರ್, ಮಾರಿಯೆಟ್ ರಸ್ಕಿನ್ಹಾ, ಮರಿಯಾ ಪಿಂಟೊ ಪಡಿಲ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ರೇಮಂಡ್ ಡಿಕೂನಾ ತಾಕೊಡೆ, ಜೊಸ್ಸಿ ಪಿಂಟೊ ಕಿನ್ನಿಗೊಳಿ, ಅವಿಲ್ ರಸ್ಕಿನ್ಹಾ ಕವಿತೆಗಳನ್ನು ಸಾಧರಗೊಳಿಸಿದರು.
ಮೆಲಿಶಾ ಫೆರ್ನಾಂಡೀಸ್ ಕೊಂಕಣಿ ಗಾಯನ ಮಾಡಿದರು. ಸಿಎ ಆಶಿತ್ ರಸ್ಕಿನ್ಹಾ, ಸಿಎ ಕೇರಲ್ ರಸ್ಕಿನ್ಹಾ, ಲಿನೆಟ್ ಮೆನೆಜಸ್, ಸಿರಿಲ್ ಲೋಬೊ ಸಹಕರಿಸಿದರು. ಮೊದಲಿಗೆ ರೇಮಂಡ್ ಡಿಕೂನಾ ಸ್ವಾಗತಿಸಿ, ಮಾರಿಯೆಟ್ ರಸ್ಕಿನ್ಹಾ ವಂದಿಸಿದರು. ಜೊಸ್ಸಿ ಪಿಂಟೊ ನಿರ್ವಹಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
