ಕೃತಕ ಬುದ್ಧಿಮತ್ತೆಯಿಂದ ಹೊಸ ಅವಕಾಶ ಸೃಷ್ಟಿ : ಅಜಯ್ ಕುಮಾರ್ ಚೌಧರಿ

Chandrashekhara Kulamarva
0



ಮಂಗಳೂರು: "ಕೃತಕ ಬುದ್ಧಿಮತ್ತೆ ಮುಖ್ಯವಾಹಿನಿಗೆ ಬಂದಿದ್ದು, ಹಣಕಾಸು ಸೇವೆಗಳನ್ನು ರೂಪಿಸುವುದು, ನೀಡುವುದು ಮತ್ತು ಅನುಭವಿಸುವ ವಿಧಾನವನ್ನೇ ಸಂಪೂರ್ಣವಾಗಿ ಪರಿವರ್ತಿಸುತ್ತಿದೆ. ಇದು ಕಾರ್ಯಕ್ಷಮತೆ, ಪಾಲ್ಗೊಳ್ಳುವಿಕೆ ಮತ್ತು ಸ್ಥೈರ್ಯಕ್ಕಾಗಿ ಹೊಸ ದ್ವಾರಗಳನ್ನು ತೆರೆದಿದೆ" ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‍ಸಿಪಿಐ) ನಾನ್ ಎಕ್ಸಿಕ್ಯೂಟಿವ್ ಚೇರ್‍ಮನ್ ಮತ್ತು ಸ್ವತಂತ್ರ ನಿರ್ದೇಶಕ ಅಜಯ್ ಕುಮಾರ್ ಚೌಧರಿ ಹೇಳಿದರು.


ಮುಂಬೈಯಲ್ಲಿ ನಡೆದ 6ನೇ ಗ್ಲೋಬಲ್ ಫಿನ್‍ಟೆಕ್ ಫೆಸ್ಟ್ (ಜಿಎಫ್‍ಎಫ್) 2025ರಲ್ಲಿ "ಎಐಯ ಭರವಸೆ ಮತ್ತು ಅಪಾಯ: ಪಾಲ್ಗೊಳ್ಳುವಿಕೆಯ ವಿತ್ತವ್ಯವಸ್ಥೆಗಾಗಿ ಜವಾಬ್ದಾರಿಯುತ ಬುದ್ಧಿಮತ್ತೆಯನ್ನು ನಿರ್ಮಿಸುವುದು" ಎಂಬ ವಿಷಯದ ಕುರಿತು ಅವರು ಮಾತನಾಡಿದರು.


ಭದ್ರತೆ, ಪಾರದರ್ಶಕತೆ ಮತ್ತು ಬಳಸಲು ಸರಳತೆಯನ್ನು ಹೆಚ್ಚಿಸಲು ಮುಂದಿನ ಡಿಜಿಟಲ್ ಪಾವತಿ ನಾವೀನ್ಯತೆಗಳನ್ನು ಘೋಷಿಸಿದರು. ಇದರ ಭಾಗವಾಗಿ, ಆನ್‍ಲೈನ್ ಚಾನೆಲ್‍ಗಳಲ್ಲಿ ವ್ಯಾಪಾರಿಗಳ ಪಾವತಿಗಳನ್ನು ಮಾನ್ಯಗೊಳಿಸಲು 'ಭಾರತ್ ಕನೆಕ್ಟ್' ಎಂಬ ಇಂಟರ್ ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ವೇದಿಕೆ ಆರಂಭಿಸುವುದಾಗಿ ಘೋಷಿಸಿದರು.


ಎಐ ಅಪೂರ್ವ ಅವಕಾಶಗಳನ್ನು ನೀಡುವಷ್ಟೇ ಅಲ್ಲದೆ, ಜಟಿಲವಾದ ಸವಾಲುಗಳನ್ನು ಕೂಡ ಉಂಟುಮಾಡುತ್ತದೆ ಎಂದು ಒತ್ತಿ ಹೇಳಿದರು. ಇದನ್ನು ಸಮರ್ಪಕ ಆಡಳಿತ ಮತ್ತು ರಾಷ್ಟ್ರಾಂತರ ಸಹಕಾರದ ಮೂಲಕ ನಿಭಾಯಿಸಬೇಕಾಗಿದೆ ಎಂದು ವಿಶ್ಲೇಷಿಸಿದರು.


2027ರೊಳಗೆ ಬ್ಯಾಂಕಿಂಗ್, ವಿಮಾ, ಬಂಡವಾಳ ಮಾರುಕಟ್ಟೆಗಳು ಮತ್ತು ಪಾವತಿಗಳ ಕ್ಷೇತ್ರಗಳಲ್ಲಿ ಎಐಗೆ ಇರುವ ಹೂಡಿಕೆಗಳು ಸುಮಾರು 100 ಬಿಲಿಯನ್ ಅಮೆರಿಕನ್ ಡಾಲರಗಳವರೆಗೆ ತಲುಪಲಿದೆ ಎಂಬ ನಿರೀಕ್ಷೆಯಿದೆ. ಈಗಾಗಲೇ 78% ಹಣಕಾಸು ಸಂಸ್ಥೆಗಳು ಕನಿಷ್ಠ ಒಂದು ಕಾರ್ಯದಲ್ಲಿ ಎಐನನ್ನು ಅನುಸರಿಸಿವೆ, ಇದು 2023ರಲ್ಲಿ 55% ಇತ್ತು ಎಂದು ವಿವರಿಸಿದರು.



إرسال تعليق

0 تعليقات
إرسال تعليق (0)
To Top