ಏರ್ಯ ದಿ. ಲಕ್ಷ್ಮೀನಾರಾಯಣ ಆಳ್ವ ಜನ್ಮ ಶತಮಾನೋತ್ಸವ; 'ಏರ್ಯ ಪ್ರಶಸ್ತಿ' ಪ್ರದಾನ

Upayuktha
0


ಮಂಗಳೂರು: ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಂಗ ಸಂಸ್ಥೆಯಾದ ಕೆನರಾ ಕಾಲೇಜು ವತಿಯಿಂದ ಏರ್ಯ ದಿ. ಲಕ್ಷ್ಮೀನಾರಾಯಣ ಆಳ್ವ ಇವರ ಜನ್ಮ ಶತಮಾನೋತ್ಸವ- ಏರ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಚಾರ್ಟರ್ಡ್ ಗ್ರೂಪ್ ಬೆಂಗಳೂರು ಇದರ ಪ್ರಮುಖ ನಿರ್ವಹಣಾ ನಿರ್ದೇಶಕರಾದ ಏರ್ಯ ಬಾಲಕೃಷ್ಣ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೆನರಾ ಸಂಸ್ಥೆಯ ಸ್ಥಾಪಕರ ದೂರ ದೃಷ್ಟಿ ಹಾಗೂ ದಿ.ಲಕ್ಷ್ಮೀ ನಾರಾಯಣ ಆಳ್ವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಮೇಲಿನ ಗೌರವವನ್ನು ಉಳಿಸಿಕೊಂಡು ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಕೆನರಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.


ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಿ. ವಾಸುದೇವ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು ಏರ್ಯ ಪ್ರಶಸ್ತಿಯನ್ನು ಸಾಧಕರ ಛಲ ನಿಷ್ಠೆ ಅಸಾಧಾರಣ ಕಾರ್ಯಪ್ರವೃತ್ತಿ ಹಿನ್ನೆಲೆಯಲ್ಲಿ ನೀಡಲಾಗಿದೆ ಎಂದರು. ಧಾರ್ಮಿಕ, ಸಾಹಿತ್ಯಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಗೈದ ಚೇಂಪಿ ವೇ. ಮೂ. ರಾಮಚಂದ್ರ ಅನಂತ ಭಟ್ ಹಾಗೂ ಡಾ. ಸೋಂದೆ ಭಾಸ್ಕರ ಭಟ್ ಅವರಿಗೆ ಏರ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.


ಏರ್ಯ ಪ್ರಶಸ್ತಿ ಸ್ವೀಕರಿಸಿದ ಚೇಂಪಿ ವೇl ಮೂ l ರಾಮಚಂದ್ರ ಅನಂತ ಭಟ್ ಮಾತನಾಡಿ, ಇಂದಿನ ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಜವಾಬ್ದಾರಿ ಧಾರ್ಮಿಕ ಕ್ಷೇತ್ರದಲ್ಲಿರುವವರ ಹಾಗೂ ಶಿಕ್ಷಕರ ಜವಾಬ್ದಾರಿ. ಸಾತ್ವಿಕತೆ, ಮಧುರತೆ, ಸಹಕಾರ, ಸಮಯಪ್ರಜ್ಞೆಯನ್ನು ಚಿಕ್ಕ ವಯಸ್ಸಿನಲ್ಲೇ ಮೂಡಿಸುವ ಮೂಲಕ ಏರ್ಯರಂತಹ ಹಿರಿಯರ ಕನಸು ನನಸಾಗಿಸಬೇಕು ಎಂದರು.


ಏರ್ಯ ಪ್ರಶಸ್ತಿ ಪುರಸ್ಕೃತ ಡಾ.ಸೋಂದೆ ಭಾಸ್ಕರ ಭಟ್ ಮಾತನಾಡಿ, ಏರ್ಯರು ಹಿಂದೂ ಸಮಾಜದಲ್ಲಿ ಏಕತೆ ನಿರ್ಮಾಣ ಮಾಡಲು ಬಿರುಗಾಳಿಯ ವೇಗದಲ್ಲಿ ಸಂಚಾರ ಮಾಡುತ್ತಿದ್ದರು. ತಾನು ಬೆಳೆಯುವುದರ ಜೊತೆಗೆ ಸಹ ಕಾರ್ಯಕರ್ತರನ್ನು ಬೆಳೆಸಿದವರು. ವೇದ ಮಂತ್ರದಲ್ಲಿ ಆಸಕ್ತಿ ಇದ್ದವರಿಗೆ ಕಲಿಸಬೇಕು, ಲಿಂಗ ತಾರತಮ್ಯ ಸಲ್ಲದು ಎಂಬ ನಿಲುವು ಏರ್ಯ ರದಾಗಿತ್ತು ಎಂದು ತಮ್ಮ ಗುರು ಸದೃಶ ವ್ಯಕ್ತಿತ್ವನ್ನು ಸ್ಮರಿಸಿದರು.


ಕಾಲೇಜಿನ ಸಂಚಾಲಕರಾದ ಶ್ರೀ ಸಿ ಎ ಎಂ ಜಗನ್ನಾಥ ಕಾಮತ್, ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಗುರುರಾಜ್ ಶೇಟ್, ಕೆನರಾ ಪಿ.ಯು ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಅನಸೂಯಾ ಭಾಗವತ್, ಮೇಘಾ ರಾವ್, ಲವೀನಾ ಹಾಗೂ ಉಪನ್ಯಾಸಕ ವರ್ಗ, ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ಡಾ ಪ್ರೇಮಲತಾ ವಿ ಸ್ವಾಗತಿಸಿ, ಪ್ರೊ.ದೇಜಮ್ಮ ಎ ವಂದಿಸಿದರು. ಶೈಲಜಾ ಪುದುಕೋಳಿ ಅಭಿನಂದನಾ ಪತ್ರ ವಾಚಿಸಿದರು. ಶ್ರೀಮತಿ ವಾಣಿ ಯು ಎಸ್ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top