ಭರತನಾಟ್ಯ; ಅಲೋಶಿಯಸ್ ವೇದಿಕೆಗೆ ಗೋಲ್ಡನ್ ಗರ್ಲ್ ರೆಮೋನಾ

Upayuktha
0



ಮಂಗಳೂರು: ಇತ್ತೀಚೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ರೆಮೊನಾ ಇವೆಟ್ ಪಿರೇರಾರವರು ವಿವಿಯ ಎಲ್ಸಿಆರ್ಐ ಸಭಾಂಗಣದ ವೇದಿಕೆಯಲ್ಲಿ ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಬರೆದಿದ್ದು ಇದೀಗ ಅಲೋಶಿಯಸ್ ವಿವಿಯು ಆ ವೇದಿಕೆಗೆ 'ಗೋಲ್ಡನ್ ಗರ್ಲ್ ರೆಮೋನಾ ವೇದಿಕೆ' ಎಂದು ಹೆಸರಿಟ್ಟು ವಿಶೇಷ ರೀತಿಯಲ್ಲಿ ಆಕೆಗೆ ಅಭಿನಂದನೆ ಸಲ್ಲಿಸಿದೆ.


ರೆಮೋನಾ ಇವೆಟ್ ಪಿರೇರಾರವರು 2025ರ ಜುಲೈ 21ರಿಂದ 28ರವರೆಗೆ ಸಂತ ಅಲೋಶಿಯಸ್ ಕಾಲೇಜಿನ ಎಲ್ಸಿಆರ್ಐ ಸಭಾಂಗಣದಲ್ಲಿ ಏಳು ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿ ಕೊಂಡಿದ್ದರು.


 ಈ ಸಂದರ್ಭದಲ್ಲಿ ರೆಮೋನಾ ಇವೆಟ್ಟಾ ಪಿರೇರಾ ಮಾತನಾಡಿ, ಸಾವಿರಾರು ಪ್ರತಿಭೆಗಳನ್ನು ಕಂಡ ಈ ಕಾಲೇಜು, ನನ್ನ ಸಾಧನೆಯನ್ನು ಗುರುತಿಸಿ ಇಲ್ಲಿನ ವೇದಿಕೆಗೆ ‘ಗೋಲ್ಡನ್ ಗರ್ಲ್ ರೆಮೋನಾ ವೇದಿಕೆ’ ಎಂದು ನಾಮಕರಣ ಮಾಡಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ ಎಂದು ಅತೀವ ಸಂತಸ ವ್ಯಕ್ತಪಡಿಸಿದರು. ಮುಂದಕ್ಕೆ ಭರತನಾಟ್ಯದಲ್ಲಿ ಪಿಎಚ್ಡಿ ಮಾಡಬೇಕೆಂಬ ಕನಸಿದ್ದು ಈ ಕನಸನ್ನು ಆದಷ್ಟು ಶೀಘ್ರದಲ್ಲಿ ನನಸಾಗಿಸುತ್ತೇನೆ ಎಂದರು. ಅಲ್ಲದೆ ವಿಶೇಷ ಚೇತನರಿಗೆ ಮತ್ತು ಮಂಗಳಮುಖಿಯರಿಗೆ ಭರತನಾಟ್ಯ ಕಲಿಸುತ್ತಿದ್ದು, ಮುಂದೆಯೂ ಕಲಿಸುತ್ತೇನೆ ಎಂದರು. 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top