ಉಡುಪಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಾಪುನಲ್ಲಿ ಐಕ್ಯೂಎಸಿ, ರೋವರ್ ಮತ್ತು ರೇಂಜರ್ ಹಾಗೂ ಎನ್. ಎಸ್. ಎಸ್, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಕೇಂದ್ರ ಎಪಿಡೀಮಿಯಾಲಾಜಿ ವಿಭಾಗ ನಿಮ್ಹಾನ್ಸ್ ಬೆಂಗಳೂರು, ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜೀವನ ಕೌಶಲ್ಯ ಹಾಗೂ ಪ್ರೇರಣ ತರಬೇತಿ ಕಾರ್ಯಕ್ರಮ ನಡೆಯಿತು.
ಪ್ರೇರಣ ಸಂಯೋಜಕರಾದ ಶ್ರೀಕಾಂತ್ ಇವರು ವಿದ್ಯಾರ್ಥಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಯುವ ಸಮಾಲೋಚಕರಾದ ಶ್ಯಾಮಲ ಕಿರಣ್ ಮತ್ತು ಉಡುಪಿಯ ಯುವ ಸ್ಪಂದನದ ಯುವ ಪರಿವರ್ತಕ ಪಾರ್ಥಸಾರಥಿ ಇವರು ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆ, ಗುಂಪು ಚರ್ಚೆ, ಸೃಜನಶೀಲ ಚಿಂತನೆ , ಜೀವನದಲ್ಲಿ ಸಮಸ್ಯೆ ಬಂದಾಗ ಯಾವ ರೀತಿ ಸಮಸ್ಯೆಯನ್ನು ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.
ಯುವ ಸ್ಪಂದನದ ಸುನೀತಾ ಇವರು ವಿದ್ಯಾರ್ಥಿಗಳಿಗೆ ಫೋಕ್ಸೋ ಕಾಯಿದೆ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್, IQAC ಸಂಚಾಲಕ ಡಾ. ರೋಶ್ನಿ ಯಶವಂತ್, Palcement Cell ಸಂಚಾಲಕ ಟಿ. ಜಿ. ಭಟ್, NSS ಕಾರ್ಯಕ್ರಮಾಧಿಕಾರಿ ಮಂಜುಳಾ ಹೆಚ್. ಎಸ್, Rover & Ranger ಸಂಚಾಲಕಿ ಸವಿತಾ ಇವರು ಉಪಸ್ಥಿತರಿದ್ದರು.
ಕುಮಾರಿ ಮನೀಷ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ದಿಯಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ವೃಂದ, ಕಚೇರಿ ಸಿಬ್ಬಂದಿಗಳು , ವಿದ್ಯಾರ್ಥಿಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ