ಕಾಂತಾರಾ-1 ಕ್ಲೈಮ್ಯಾಕ್ಸ್ ಶೂಟಿಂಗ್: ಕಠಿಣ ಸನ್ನಿವೇಶದ ಫೋಟೋ ಹಂಚಿಕೊಂಡ ರಿಷಭ್ ಶೆಟ್ಟಿ

Upayuktha
0


ಬೆಂಗಳೂರು: ಕಾಂತಾರಾ ಚಾಪ್ಟರ್ 1 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿದ್ದು, ಇದರ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಹೋದೆಡೆಯೆಲ್ಲಾ ಹೂಮಳೆಯ ಅದ್ದೂರಿ ಸ್ವಾಗತ ದೊರೆಯುತ್ತಿದೆ. ಆದರೆ, ಶೂಟಿಂಗ್ ವೇಳೆ ಅವರು ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಹೌದು... ಕಾಂತಾರ ಚಾಪ್ಟರ್ 1ರ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವರು ಅನುಭವಿಸಿದ ನರಕ ಯಾತನೆಯನ್ನು ಅವರೇ ಹಂಚಿಕೊಂಡಿದ್ದಾರೆ.


ಚಿತ್ರದ ಕ್ಲೈಮ್ಯಾಕ್ಸ್ ನೋಡಿದ ಪ್ರತಿಯೊಬ್ಬರೂ ಜೀವನದಲ್ಲಿ ಆ ದೃಶ್ಯಗಳನ್ನು ಮರೆಯುವುದಿಲ್ಲ. ಅಷ್ಟು ಅದ್ಬುತ, ಅಮೋಘವಾಗಿ ಮೂಡಿ ಬಂದಿದೆ. ಆದರೆ, ಅದರ ಹಿಂದೆ ರಿಷಬ್ ಶ್ರಮ ಎಷ್ಟಿತ್ತು ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ತೆರೆದಿಟ್ಟಿದ್ದಾರೆ.


ಕ್ಲೈಮ್ಯಾಕ್ಸ್ ಸಮಯದಲ್ಲಿ ತಮ್ಮ ಕಾಲಿಗೆ ಆದ ನೋವುಗಳನ್ನು ಕೆಲ ಫೋಟೋಗಳ ಸಮೇತ ಹಂಚಿಕೊಂಡಿದ್ದಾರೆ.


ಈ ಮೂಲಕ ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಜಾಲತಾಣದಲ್ಲಿ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ತೆರೆಯ ಹಿಂದಿನ ಪರಿಶ್ರಮಗಳೆಲ್ಲವು ಇಂದು ತೆರೆಯ ಮೇಲೆ ಸಕ್ಸಸ್ ಆಗಿ ಕಾಣ್ತಿರೋದಂತೂ ನಿಜ.


ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ, ಸುಸ್ತಾಗಿ ಮಲಗಿದ್ದರು ರಿಷಬ್ ಶೆಟ್ಟಿ. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ ಅಂದ್ರೆ ಅದಕ್ಕೆ ತೆರೆಯ ಹಿಂದೆ ನಾವು ಪಟ್ಟ ಶ್ರಮದ ಜೊತೆಗೆ ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು ಜಾಲತಾಣದಲ್ಲಿ ಡಿವೈನ್ ಸ್ಟಾರ್ ಬರೆದುಕೊಂಡಿದ್ದಾರೆ.


ಅವರ ಎರಡೂ ಕಾಲುಗಳೂ ಕಪ್ಪುಗಟ್ಟಿ, ಊದಿಕೊಂಡಿರುವುದು ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ಈ ಚಿತ್ರಕ್ಕಾಗಿ ರಿಷಬ್ ಎಷ್ಟು  ಶ್ರಮ ಹಾಕಿದ್ದಾರೆ ಎಂಬುದನ್ನು ಸಾಕ್ಷೀಕರಿಸುತ್ತದೆ.


ಆದರೆ, ಇಷ್ಟೆಲ್ಲಾ ಶ್ರಮ ಹಾಕಿದ್ದಕ್ಕೂ, ಇಂದು ಅವರ ಕಾಂತಾರಾ ಚಾಪ್ಟರ್ 1 ಚಿತ್ರವನ್ನು ವಿಶ್ವದಾದ್ಯಂತ ಜನ ಮೆಚ್ಚಿಕೊಂಡಿದ್ದಾರೆ. ಪ್ರಮುಖವಾಗಿ ನಮ್ಮ ದೇಶದ ರಾಷ್ಟ್ರಪತಿ ಭವನದಲ್ಲಿ ಸ್ವತಃ ರಾಷ್ಟ್ರಪತಿಗಳು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top