ಆಯುರ್ವೇದ ಕೇವಲ ಆರೋಗ್ಯ ಚಿಕಿತ್ಸೆಯಲ್ಲ ಜೀವನ ವಿಜ್ಞಾನ: ಡಾ.ಸದಾನಂದ ಪಾಟೀಲ್

Upayuktha
0



ಕಲಬುರಗಿ: ಭಗವಾನ್ ಧನ್ವಂತರಿ ಅವರನ್ನು ಆಯುರ್ವೇದದ ದೇವತೆ ಹಾಗೂ ದೈವೀ ವೈದ್ಯನಾಗಿ ಗೌರವಿಸಲಾಗುತ್ತದೆ. ಸಮುದ್ರ ಮಥನ ಸಂದರ್ಭದಲ್ಲಿ  ಸಮುದ್ರದಿಂದ ಅಮೃತ ಕಲಶವನ್ನು ಹಿಡಿದು ಭಗವಾನ್ ಧನ್ವಂತರಿ ಪ್ರತ್ಯಕ್ಷವಾಗಿ  ಮಾನವಕೋಟಿಗೆ ಆರೋಗ್ಯ, ಆಯುಷ್ಯ ಮತ್ತು ಶಾಂತಿಯನ್ನು ನೀಡುವ ಉದ್ದೇಶದಿಂದ ಅಶ್ವಿನಿ ದೇವತೆ ರೂಪದಲ್ಲಿ ಅವತರಿಸಿ ಆಯುರ್ವೇದವ ಪದ್ಧತಿಯನ್ನು ನೀಡಿದರು ಎಂದು ಹಿರಿಯ ಆಯುರ್ವೇದ ವೈದ್ಯರಾದ ಡಾ. ಸದಾನಂದ ಪಾಟೀಲ್ ಹೇಳಿದರು.


 ಕಲಬುರಗಿಯ ರಾಜಾಪುರದಲ್ಲಿರುವ ಚರಕ ಆಸ್ಪತ್ರೆಯಲ್ಲಿ ಅ.18ರಂದು ನಡೆದ ಧನ್ವಂತರಿ ಜಯಂತಿ ಆಚರಣೆಯ ಪ್ರಯುಕ್ತ ನಡೆದ ವಿಶೇಷ ಪೂಜೆಯ ನಂತರ ಮಾತನಾಡಿ ಆಯುರ್ವೇದವು ಕೇವಲ ರೋಗನಾಶಕ ವ್ಯವಸ್ಥೆಯಲ್ಲ. ಅದು ಆರೋಗ್ಯ ಸಂರಕ್ಷಣೆಯ ಶಾಸ್ತ್ರ. ಧನ್ವಂತರಿಯ ಉಪದೇಶದಿಂದ ಶರೀರ, ಮನಸ್ಸು, ಆತ್ಮ ಮತ್ತು ಇಂದ್ರಿಯಗಳ ಸಮತೋಲನದಲ್ಲಿದೆ. 


ಆದ್ದರಿಂದಲೇ, ಆಯುರ್ವೇದವನ್ನು “ಜೀವನದ ವಿಜ್ಞಾನ” ಎಂದು ಕರೆಯಲಾಗುತ್ತದೆ.ಪ್ರತಿ ವರ್ಷ ಧನ್ವಂತರಿ ಜಯಂತಿಯನ್ನು, ದೀಪಾವಳಿಯ ಪೂರ್ವದಿನದಂದು, ದೇಶದಾದ್ಯಂತ ಆಯುರ್ವೇದ ವೈದ್ಯರು ಹಾಗೂ ಅಭಿಮಾನಿಗಳು ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ಈ ದಿನವು ಆಯುರ್ವೇದದ ಮಹತ್ವವನ್ನು ನೆನಪಿಸುವ ಹಾಗೂ ನಮ್ಮ ಜೀವನದಲ್ಲಿ ಪ್ರಕೃತಿಯ ಆಧಾರಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ದಿನವಾಗಿದೆ ಎಂದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿಬಂಧ ಕಾರ್ಯಕ್ರಮ ಡಾ. ಸದಾನಂದ ಪೆರ್ಲ ಮಾತನಾಡಿ ಭಾರತದ ಪ್ರಾಚೀನ ವೈದ್ಯ ಪದ್ಧತಿಯನ್ನು ವಿಶ್ವಕ್ಕೆ ಕೊಟ್ಟ ಶ್ರೇಷ್ಠತೆ ನಮ್ಮ ದೇಶಕ್ಕಿದೆ.ಇದು ನಮ್ಮ ಪೌರಾಣಿಕ ಕೊಡುಗೆಯಾಗಿದ್ದು ಭಗವಾನ್ ಧನ್ವಂತರಿಯ ಕೃಪೆಯಿಂದ ದೊರಕಿದೆ.ದೇಶದ ಎಲ್ಲರೂ ಆರೋಗ್ಯವಂತರಾಗಿ, ಶಾಂತಚಿತ್ತರಾಗಿ, ಸಂತೋಷಪೂರ್ಣವಾದ ಜೀವನ ನಡೆಸಲು ಆಯುರ್ವೇದ ಪದ್ಧತಿಯ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಪ್ರಮುಖರಾದ ಮಹಾದೇವಯ್ಯ ಕರದಳ್ಳಿ, ಡಾ. ಪ್ರಿಯದರ್ಶಿನಿ ಸದಾನಂದ ಪಾಟೀಲ್, ದೇವೇಂದ್ರಪ್ಪ ರಾಮನ್, ಚಿಂಚೋಳಿ ತಾಲೂಕು ಬಿಜೆಪಿ ಅಧ್ಯಕ್ಷರಾದ ವಿಜಯಕುಮಾರ್ ಚೆಂಗಟಿ,ಸಾಮಾಜಿಕ ಕಾರ್ಯಕರ್ತರಾದ ಎಸ್ ಎಸ್ ಹಿರೇಮಠ,,ಶರಣು ಸಾಹು, ಸಮಾಜ ಸೇವಕರಾದ ವಿ ಶಾಂತರೆಡ್ಡಿ ಮತ್ತಿತರ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

                       

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top