ಇಂಡಿಯನ್ ರೇಸಿಂಗ್ ಲೀಗ್‌ನ 3ನೇ ಸುತ್ತಿಗೆ ತೆರೆ; ಕಿಚ್ಚ ಟೀಮ್‌ನ ಕಮಾಲ್!

Upayuktha
0


ಬೆಂಗಳೂರು: ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಮೂರನೇ ಸುತ್ತಿನ ಸ್ಪರ್ಧೆಯು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ ಭಾನುವಾರ (ಅ.5) ಮುಕ್ತಾಯಗೊಂಡಿತು. ಇಂಡಿಯನ್ ರೇಸಿಂಗ್ ಲೀಗ್, ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್, ಫಾರ್ಮುಲಾ LGB4 ಒಳಗೊಂಡ ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿತು.

 

ಇಂಡಿಯನ್ ರೇಸಿಂಗ್ ಲೀಗ್

ಗೋವಾ ಏಸಸ್ JA ರೇಸಿಂಗ್‌ನ ರೌಲ್ ಹೈಮನ್ ಎರಡನೇ ಸುತ್ತಿನಲ್ಲಿ ಜಯ ಸಾಧಿಸಿದರು.


2ನೇ ದಿನದ ಇಂಡಿಯನ್ ರೇಸಿಂಗ್ ಲೀಗ್‌ನ ಡ್ರೈವರ್ B ರೇಸ್‌ ಎಲ್ಲರ ಗಮನ ಸೆಳೆದವು. ಉತ್ತಮ ಪ್ರತಿಭೆ ಮತ್ತು ಅಂತರರಾಷ್ಟ್ರೀಯ ಅನುಭವ ರೇಸರ್ ಗಳು ಒಂದಾಗಿ ಮತ್ತೊಂದು ಹೈ-ಆಕ್ಟೇನ್ ಪೈಪೋಟಿ ನೀಡಿದರು. ಸ್ಪೀಡ್ ಡೆಮನ್ಸ್ ದೆಹಲಿಯ ತಂಡದ ಮಾಲೀಕ ನಟ ಅರ್ಜುನ್ ಕಪೂರ್ ಟ್ರ್ಯಾಕ್‌ಸೈಡ್‌ನಲ್ಲಿ ಹಾಜರಿದ್ದರು. ಯುನೈಟೆಡ್ ಕಿಂಗ್‌ಡಮ್‌ನ ಗೋವಾ ಏಸಸ್ JA ರೇಸಿಂಗ್ ಚಾಲಕ ರೌಲ್ ಹೈಮನ್ 26:46.480 ಸಮಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಎರಡನೇ ಗೆಲುವು ಸಾಧಿಸಿದರು.


ಟ್ರ್ಯಾಕ್‌ನ 16 ತಿರುವುಗಳನ್ನು ನಿಖರತೆ ಮತ್ತು ನಿಯಂತ್ರಣದಿಂದ ನಿಭಾಯಿಸಿದ 29 ವರ್ಷದ ಹೈಮನ್ ಅತ್ಯತ್ತಮ ಪ್ರದರ್ಶನ ನೀಡಿ, ಸ್ಪೀಡ್ ಡೀಮನ್‌ಸ್ ದೆಹಲಿಯ ಶಹಾನ್ ಅಲಿ ಮೊಹ್ಸಿನ್ ಅವರನ್ನು ಹಿಮ್ಮೆಟ್ಟಿಸಿದರು. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಅಲ್ವಾ ಸ್ಥಾನದಲ್ಲಿ ಮೂರನೇ ಸ್ಥಾನ ಪಡೆದುಕೊಂಡರು.


ಫಲಿತಾಂಶಗಳು (ಐಆರ್‌ಎಲ್ ಡ್ರೈವರ್ B ರೇಸ್):

1. ರೌಲ ಹೈಮನ್ (ಗೋವಾ ಏಸೆಸ್ JA ರೇಸಿಂಗ್) – 26:46.480

2. ಶಹಾನ್ ಅಲಿ ಮೊಹ್ಸಿನ್ (ಸ್ಪೀಡ್ ಡೀಮನ್‌ಸ್ ದೆಹಲಿ) – 26:52.937

3. ರುಹಾನ್ ಅಲ್ವಾ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು)– 26:57.632 


ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್

ಎಫ್‌ಐಎ ಮಾನ್ಯತೆ ಪಡೆದ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್ ಕರೀ ಮೋಟಾರ್ ಸ್ಪೀಡ್‌ವೇನಲ್ಲಿ ನಡೆದ ಎರಡನೇ ದಿನದ ರೇಸ್‌  ರೋಮಾಂಚನಕಾರಿಯಾಗಿತ್ತು. ಶೇನ್ ಚಂದಾರಿಯಾ, ಇಟ್ಸುಕಿ ಸಾಟೋ ಮತ್ತು ಇಶಾನ್ ಮದೇಶ್ ಈ ಮೂವರು ಮೂರು ತೀವ್ರ ಪೈಪೋಟಿಯ ರೇಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.


ಕೀನ್ಯಾದ ಪ್ರತಿಭಾವಂತ ಚಾಲಕರಾದ ಶೇನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್) ದಿನವನ್ನು ರೇಸ್ 2ರಲ್ಲಿ ಲೈಟ್ಸ್-ಟು-ಫ್ಲ್ಯಾಗ್ ಶೈಲಿಯ ಆಧಿಪತ್ಯದ ಗೆಲುವಿನಿಂದ ಆರಂಭಿಸಿದರು. ಲುವಿವೇ ಸಾಂಬುಡ್ಲಾ (ಗೋವಾ ಏಸೆಸ್ JA ರೇಸಿಂಗ್) ಮತ್ತು ಇಟ್ಸುಕಿ ಸಾಟೋ (ಅಹಮದಾಬಾದ್ ಏಪೆಕ್ಸ್ ರೇಸರ್ಸ್) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು.


ರೇಸ್ 3ರಲ್ಲಿ ಜಪಾನಿನ ತಾರೆ ಸಾಟೋ ನಾಟಕೀಯ ಶೈಲಿಯಲ್ಲಿ ಗೆಲುವು ದಾಖಲಿಸಿದರು. ಅಂತಿಮ ಲ್ಯಾಪ್‌ನಲ್ಲಿ ಚಂದಾರಿಯಾ ಮತ್ತು ಸಾಚೆಲ್ ರಾಟ್ಗೆ (ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು) ನಡುವೆ ಸಂಭವಿಸಿದ ಸಂಪರ್ಕದಿಂದಾಗಿ ಸಾಟೋ ಮುನ್ನಡೆ ಹಿಡಿದು ಜಯ ಸಾಧಿಸಿದರು. ಸಾಂಬುಡ್ಲಾ ಮತ್ತೊಮ್ಮೆ ಎರಡನೇ ಸ್ಥಾನ ಪಡೆದರು, ಇಶಾನ್ ಮದೇಶ್ (ಕೊಲ್ಕತಾ ರಾಯಲ್ ಟೈಗರ್ಸ್) ಮೂರನೇ ಸ್ಥಾನದಲ್ಲಿ ಮುಗಿಸಿದರು.


ದಿನದ ಕೊನೆಯ ರೇಸ್ 4ರಲ್ಲಿ ಮದೇಶ್ ಅತ್ಯುತ್ತಮ ಚಾಲನೆ ತೋರಿದರು. ಗ್ರಿಡ್‌ನಲ್ಲಿ ನಾಲ್ಕನೇ ಸ್ಥಾನದಿಂದ ಆರಂಭಿಸಿದ ಅವರು, ಸ್ಪೀಡ್ ಡೀಮನ್‌ಸ್ ದೆಹಲಿಯ ಸೈಶಿವ ಶಂಕರನ್ ಮತ್ತು ಚಂದಾರಿಯಾ ಅವರನ್ನು ಮೀರಿಸಿ ತಮ್ಮ ಸೀಸನ್‌ನ ಎರಡನೇ ಗೆಲುವು ದಾಖಲಿಸಿದರು. ಈ ಮೂಲಕ ಕೊಯಮತ್ತೂರಿನಲ್ಲಿ ನಡೆದ ಫಾರ್ಮುಲಾ 4 ರೇಸಿಂಗ್ ವಾರಾಂತ್ಯವು ರೋಚಕ ಕ್ಷಣಗಳೊಂದಿಗೆ ಮುಕ್ತಾಯಗೊಂಡಿತು.


ಫಲಿತಾಂಶಗಳು:

ರೇಸ್ 2:

1. ಶೇನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್) – 26:50.864

2. ಲುವಿವೇ ಸಾಂಬುಡ್ಲಾ (ಗೋವಾ ಏಸೆಸ್ JA ರೇಸಿಂಗ್) – 27:01.307

3. ಇಟ್ಸುಕಿ ಸಾಟೋ (ಅಹಮದಾಬಾದ್ ಏಪೆಕ್ಸ್ ರೇಸರ್ಸ್) – 27:03.824

ರೇಸ್ 3:

1. ಇಟ್ಸುಕಿ ಸಾಟೋ (ಅಹಮದಾಬಾದ್ ಏಪೆಕ್ಸ್ ರೇಸರ್ಸ್) – 26:16.084

2. ಲುವಿವೇ ಸಾಂಬುಡ್ಲಾ (ಗೋವಾ ಏಸೆಸ್ JA ರೇಸಿಂಗ್) – 26:16.609

3. ಇಶಾನ್ ಮದೇಶ್ (ಕೊಲ್ಕತಾ ರಾಯಲ್ ಟೈಗರ್ಸ್) – 26:17.408

ರೇಸ್ 4:

1. ಇಶಾನ್ ಮದೇಶ್ (ಕೊಲ್ಕತಾ ರಾಯಲ್ ಟೈಗರ್ಸ್) – 27:13.558

2. ಸೈಶಿವ ಶಂಕರನ್ (ಸ್ಪೀಡ್ ಡೀಮನ್‌ಸ್ ದೆಹಲಿ) – 27:19.160

3. ಶೇನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್) – 27:20.542


28ನೇ ಜೆಕೆ ಟೈರ್ FMSCI ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಷಿಪ್ (ಫಾರ್ಮುಲಾ LGB4) – 2ನೇ ಸುತ್ತು

ಬೆಂಗಳೂರಿನ ಧ್ರುವ್ ಗೋಸ್ವಾಮಿ (ಎಂಸ್ಪೋರ್ಟ್) ಅವರು ಫಾರ್ಮುಲಾ LGB4 ವಿಭಾಗದ ರೇಸ್ 3ರಲ್ಲಿ ತಮ್ಮ ವಾರಾಂತ್ಯದ ಮೊದಲ ಗೆಲುವು ಸಾಧಿಸಿದರು. ಮೊದಲ ದಿನದ ಎರಡೂ ರೇಸ್‌ಗಳಲ್ಲಿ ಹತ್ತಿರದ ಎರಡನೇ ಸ್ಥಾನ ಗಳಿಸಿದ್ದ ಅವರು, ಪೋಲ್ ಸ್ಥಾನದಿಂದ ಆರಂಭಿಸಿದರು. ಡಾರ್ಕ್ ಡಾನ್ ರೇಸಿಂಗ್‌ನ ದಿಲ್ಜಿತ್ ಟಿ ಎಸ್ ಅವರು ಬಹುಭಾಗದ ಪೈಪೋಟಿಯಲ್ಲಿ ಹತ್ತಿರದಲ್ಲೇ ಇದ್ದರೂ, 9ನೇ ಲ್ಯಾಪ್‌ನಲ್ಲಿ ಗೋಸ್ವಾಮಿ ಮುನ್ನಡೆ ವಿಸ್ತರಿಸಿದರು. ಮೊದಲ ಎರಡು ರೇಸ್‌ಗಳ ವಿಜೇತರಾದ ಡಾರ್ಕ್ ಡಾನ್ ರೇಸಿಂಗ್‌ನ ಮೆಹುಲ್ ಅಗರ್ವಾಲ್ ಮೂರನೇ ಸ್ಥಾನ ಪಡೆದು ತಂಡಕ್ಕೆ ಮತ್ತೊಂದು ಬಲಿಷ್ಠ ಫಲಿತಾಂಶ ಒದಗಿಸಿದರು.


ರೇಸ್ 4ರಲ್ಲಿ ಮೆಹುಲ್ ಅಗರ್ವಾಲ್ ಮತ್ತೊಮ್ಮೆ ಶ್ರೇಷ್ಠ ಪ್ರದರ್ಶನ ನೀಡಿ ವಾರಾಂತ್ಯದ ಮೂರನೇ ಗೆಲುವು ಮತ್ತು ನಾಲ್ಕನೇ ಪೋಡಿಯಂ ಸಾಧನೆ ದಾಖಲಿಸಿದರು. ರಿವರ್ಸ್ ಗ್ರಿಡ್‌ನಲ್ಲಿ ಎಂಟನೇ ಸ್ಥಾನದಿಂದ ಆರಂಭಿಸಿದ ಕೊಲ್ಕತ್ತಾದ ಚಾಲಕರು ಆರಂಭದಲ್ಲೇ ನಿಯಂತ್ರಣ ಸಾಧಿಸಿದರು. ತಂಡದ ಸಹಚಾಲಕರಾದ ಹಾಗೂ ಚಾಂಪಿಯನ್‌ಶಿಪ್‌ನ ಮುಂಚೂಣಿಯಲ್ಲಿರುವ ದಿಲ್ಜಿತ್ ದ್ವಿತೀಯ ಸ್ಥಾನದಲ್ಲಿ ಮುಗಿಸಿದರು. ಬೆಂಗಳೂರಿನ ಗೋಸ್ವಾಮಿ ಮೂರನೇ ಸ್ಥಾನ ಪಡೆದುಕೊಂಡರು. 


ಫಲಿತಾಂಶಗಳು – ಜೆಕೆ ಟೈರ್ FMSCI ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಷಿಪ್ (ಫಾರ್ಮುಲಾ LGB4)


ರೇಸ್ 3:

1.ಧ್ರುವ್ ಗೋಸ್ವಾಮಿ (ಎಂಸ್ಪೋರ್ಟ್) – 22:04.600

2.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) – 22:05.629

3.ಮೆಹುಲ್ ಅಗರ್ವಾಲ್ (ಡಾರ್ಕ್ ಡಾನ್ ರೇಸಿಂಗ್) – 22:06.172 


ರೇಸ್ 4:

1.ಮೆಹುಲ್ ಅಗರ್ವಾಲ್ (ಡಾರ್ಕ್ ಡಾನ್ ರೇಸಿಂಗ್) – 29:46.499

2.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) – 29:50.824

3.ಧ್ರುವ್ ಗೋಸ್ವಾಮಿ (ಎಂಸ್ಪೋರ್ಟ್) – 29:50.966 

ಭಾನುವಾರ 3ನೇ ಸುತ್ತು ಮುಕ್ತಾಯಗೊಂಡಿದ್ದು ಮುಂದಿನ ಹಂತಗಳತ್ತ ಈಗ ಗಮನ ಹರಿದಿದೆ. ಮುಂದಿನ ಹಂತದಲ್ಲಿ ಚಾಲಕರು ಹೊಸ ಗೋವಾ ಓಶನ್‌ಫ್ರಂಟ್ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ವೇಗಭರಿತ ಸವಾಲುಗಳನ್ನು ಎದುರಿಸಲಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top