ಮಂಗಳೂರು: ಭರತಾಂಜಲಿ (ರಿ) ಕೊಟ್ಟಾರ ಮಂಗಳೂರು ಇವರು ಕೇಂದ್ರ ಸರಕಾರ ಸಂಸ್ಕೃತಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆ ನೃತ್ಯ ರತ್ನ ಶೋಧ- 2025 ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಗುರು ಉಳ್ಳಾಲ್ ಮೋಹನ್ ಕುಮಾರ್ ಉದ್ಘಾಟಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್, ಭರತಾಂಜಲಿಯ ನೃತ್ಯ ಗುರುಗಳಾದ ಶ್ರೀಧರ ಹೊಳ್ಳ, ವಿದುಷಿ ಪ್ರತಿಮಾ ಶ್ರೀಧರ್, ತೀರ್ಪುಗಾರರಾಗಿ ಭಾಗವಹಿಸಿದ ವಿದುಷಿ ರಾಧಿಕಾ ರಾಮಾನುಜಂ ಬೆಂಗಳೂರು, ವಿದುಷಿ ರಾಜಶ್ರೀ ಉಳ್ಳಾಲ್ ಮಂಗಳೂರು, ವಿದುಷಿ ಲಕ್ಷ್ಮೀ ಗುರುರಾಜ್ ಉಡುಪಿ ಸಂಚಾಲಕಿ ವಿದುಷಿ ಪ್ರಕ್ಷೀಲ ಜೈನ್, ವಿದುಷಿ ಅನ್ನಪೂರ್ಣ ರಿತೇಶ್, ವಿದುಷಿ ಮಾನಸ ಕುಲಾಲ್,ವಿದುಷಿ ಮಧುರಾ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು.
Advt Slider:
❮
❯
!doctype>





