ಐಟಿ ನಿರ್ವಹಣೆ: ಮೆಸ್ಕಾಂನ ಆನ್‌ ಲೈನ್‌ ಸೇವೆಗಳು ತಾತ್ಕಾಲಿಕ ಅಲಭ್ಯ

Upayuktha
0


ಮ೦ಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣಾ ಕಾರ್ಯನಿಮಿತ್ತ ಮೆಸ್ಕಾಂನ ಆರ್‌ ಎ ಪಿ ಡಿ ಆರ್‌ ಪಿ ನಗರ ಪ್ರದೇಶಗಳಲ್ಲಿ (ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು) ಆನ್‌ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊಸ ಸಂಪರ್ಕ ಇತ್ಯಾದಿ ಆನ್‌ಲೈನ್‌ ಆಧಾರಿತ ಸೇವೆಗಳು ಅ. 24ರ ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆಯವರೆಗೆ ಲಭ್ಯವಿರುವುದಿಲ್ಲ.


ಆರ್‌ ಎ ಪಿ ಡಿ ಆರ್‌ ಪಿ ನಗರ ಪ್ರದೇಶದ ಗ್ರಾಹಕರು ಬಿಲ್‌ ಪಾವತಿಗಾಗಿ ಹೆಚ್ಚಾಗಿ ಬಳಸುವ ಮೆಸ್ಕಾಂನ ಜಾಲತಾಣ (www.mescom.org.in) ಮೆಸ್ಕಾಂನ ಮೊಬೈಲ್‌ ಆಪ್‌ (ನನ್ನ ಮೆಸ್ಕಾಂ), ಕರ್ನಾಟಕ ಒನ್‌ ಕೌಂಟರ್‌ಗಳು, ಅಂಚೆ ಕಚೇರಿಯ ಕೌಂಟರ್‌ಗಳು ಹಾಗೂ ಇತರೆ ಬಿ.ಬಿ.ಪಿ.ಎಸ್‌.ನ ಚಾನಲ್‌ಗಳಲ್ಲಿ ಈ ಸಮಯದಲ್ಲಿ, ಆರ್‌ ಎ ಪಿ ಡಿ ಆರ್‌ ಪಿ ನಗರ ಪ್ರದೇಶದ ಗ್ರಾಹಕರಿಗೆ ಆನ್‌ ಲೈನ್‌ ಸೇವೆಗಳು ಲಭ್ಯವಿರುವುದಿಲ್ಲ. ಅಡಚಣೆಗಾಗಿ ವಿಷಾದಿಸುತ್ತೇವೆ ಹಾಗೂ ಗ್ರಾಹಕರ ಸಹಕಾರವನ್ನು ಕೋರಲಾಗಿದೆ ಎ೦ದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top