ಮಂಗಳೂರು: ಪ್ರಮುಖ ಬ್ಯಾಂಕ್‍ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್ ಮಂಗಳೂರಿನ ಸುರತ್ಕಲ್‍ನಲ್ಲಿ ಹೊಸ ಶಾಖೆಯನ್ನು ಉದ್ಘಾಟನೆ ಮಾಡಿದೆ. ಇದು ಮಂಗಳೂರು ನಗರ ವ್ಯಾಪ್ತಿಯಲ್ಲಿ ಹತ್ತನೇ ಶಾಖೆಯಾಗಿದ್ದು, 24x7 ಎಟಿಎಂ ಸೌಲಭ್ಯವನ್ನು ಹೊಂದಿದೆ.
ವೈಷ್ಣವಿ ಟ್ರಾನ್ಸ್ ಪೋರ್ಟ್ ಕಾರ್ಪೊರೇಶನ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಶೆಟ್ಟಿ ಹೊಸ ಶಾಖೆ ಉದ್ಘಾಟಿಸಿದರು. ಈ ಶಾಖೆಯು ವಿವಿಧ ರೀತಿಯ ಖಾತೆಗಳು ಮತ್ತು ಠೇವಣಿ ಸೌಲಭ್ಯಗಳನ್ನು ಒಳಗೊಂಡಂತೆ ಸಮಗ್ರ ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆಗಳು, ಸ್ಥಿರ ಮತ್ತು ಆವರ್ತಕ ಠೇವಣಿಗಳು, ಮನೆ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ವ್ಯಾಪಾರ ಸಾಲ ಮತ್ತು ಶಿಕ್ಷಣ ಸಾಲ, ಜೊತೆಗೆ ಹಣ ವರ್ಗಾವಣೆ ಮತ್ತು ವಿವಿಧ ರೀತಿಯ ಕಾರ್ಡ್ ಸೇವೆಗಳು ಸೇರಿವೆ ಎಂದು ಪ್ರಕಟಣೆ ಹೇಳಿದೆ.
ಈ ಶಾಖೆಯು ಗ್ರಾಹಕರಿಗೆ ಟ್ಯಾಬ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸುತ್ತಿದ್ದು, ಇದರಲ್ಲಿ ಗ್ರಾಹಕರಿಗೆ ಅವರು ಇರುವ ಸ್ಥಳದಲ್ಲಿಯೇ ಟ್ಯಾಬ್ಲೆಟ್ ಸಾಧನದ ಮೂಲಕ ಒಬ್ಬ ಉದ್ಯೋಗಿಯವನ್ನು ಬಳಸಿಕೊಂಡು ಸುಮಾರು 100 ಸೇವೆಗಳನ್ನು ನೀಡಲಾಗುತ್ತದೆ. ಖಾತೆ ತೆರೆಯುವಿಕೆ, ಸ್ಥಿರ ಠೇವಣಿ (ಎಫ್ ಡಿ), ಚೆಕ್ ಬುಕ್ ವಿನಂತಿ, ಇ-ಸ್ಟೇಟ್ ಮೆಂಟ್ ಒದಗಿಸುವಿಕೆ ಮತ್ತು ವಿಳಾಸ ಬದಲಾವಣೆಯಂತಹ ಹಲವು ಸೇವೆಗಳನ್ನು ಈ ಮೂಲಕ ಪಡೆಯಬಹುದಾಗಿದೆ.
ಐಸಿಐಸಿಐ ಬ್ಯಾಂಕ್ ತನ್ನ ಭಾರಿ ದೊಡ್ಡ ಗ್ರಾಹಕ ಬಳಗಕ್ಕೆ ಶಾಖೆಗಳು, ಎಟಿಎಂಗಳು, ಕಾಲ್ ಸೆಂಟರ್ ಗಳು, ಇಂಟರ್ನೆಟ್ ಬ್ಯಾಂಕಿಂಗ್ (www.icicibank.com) ಮತ್ತು ಮೊಬೈಲ್ ಬ್ಯಾಂಕಿಂಗ್ ನಂತಹ ವಿವಿಧ ವಿತರಣಾ ಜಾಲಗಳ ಮೂಲಕ ಸೇವೆ ಸಲ್ಲಿಸುತ್ತದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ