ಹೋಮ್ ಡಾಕ್ಟರ್ ಫೌಂಡೇಶನ್: ವಿಶಿಷ್ಟ ದೀಪಾವಳಿ ಆಚರಣೆ

Upayuktha
0


ಉಡುಪಿ: ಹೋಂ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬದ ಆಚರಣೆ ಕಾರ್ಯಕ್ರಮ ಕೊಳಲಗಿರಿ ಸ್ವರ್ಗ ಆಶ್ರಮದ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ, ಮಾತನಾಡಿ ಸಂಸ್ಥೆಯು ಇವರಿಗೆ ಸುಮಾರು 2 ಕೋಟಿಯಷ್ಟು ಮೊತ್ತದ ಸೇವಾ ಕಾರ್ಯಗಳನ್ನು ದಾನಿಗಳ ನೆರವಿನಿಂದ ಮಾಡಿದ್ದು ಅದೇ ರೀತಿ ಸ್ವರ್ಗ ಆಶ್ರಮವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು.


ಮುಂದಿನ ಕಾರ್ಯಕ್ರಮಗಳ ಬಗ್ಗೆ ಮತ್ತು ಸಂಸ್ಥೆಯಿಂದ ನಡೆಸಲ್ಪಡುವ ವಿವಿಧ ಕಾನ್ಸೆಪ್ಟ್ ಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸಮಾಜಸೇವಕ ವಿಶು ಶೆಟ್ಟಿ, ಅಂಬಲಪಾಡಿ ಮಾತನಾಡಿ ಸಮಾಜ ಸೇವೆ ಮಾಡುವಾಗ ಟೀಕೆ ಟಿಪ್ಪಣಿ ಮಾಡುವವರು ಬಹಳಷ್ಟು ಮಂದಿ ಇರುತ್ತಾರೆ. ಅವರು ಟೀಕೆ ಮಾಡಿದಷ್ಟು ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಮೂಲಕ ನಡೆಸಲ್ಪಡುವ ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿ ಎಂದರು.


ವೇದಿಕೆಯಲ್ಲಿ ಗ್ರೇಸಿ ಕೆಮ್ಮಣ್ಣು, ಡಾ. ಸುಮಾ ಶೆಟ್ಟಿ, ಆಶ್ರಮದ ಮೇಲ್ವಿಚಾರಕರಾದ ಮಹೇಶ್, ಹರೀಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಶಶಿಕಿರಣ್ ಶೆಟ್ಟಿ ಬರೆದ ಬದುಕು ಬದಲಿಸುವ ಕಥೆಗಳು ಪುಸ್ತಕವನ್ನು ಪ್ರದೀಪ್ ಭಟ್ ಬಿಡುಗಡೆಗೊಳಿಸಿದರು. ಶಶಿಕಲಾ ಶೆಟ್ಟಿ ಮತ್ತು ಸುಂದರ ಶೆಟ್ಟಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಐದು ಮಂದಿ ಅಸಹಾಯಕರಿಗೆ ದಿನಸಿ ವಸ್ತುಗಳನ್ನು ಮತ್ತು ಹತ್ತು ಜನ ಅಸಹಾಯಕರಿಗೆ ಒಂದು ಲಕ್ಷದ ಐದು ಸಾವಿರ ರೂ. ಸಹಾಯ ಧನ ವಿತರಿಸಲಾಯಿತು.


ಗಿಚ್ಚಿ ಗಿಲಿಗಿಲಿ ಖ್ಯಾತಿಯ ದೀಕ್ಷಾ ಬ್ರಹ್ಮಾವರ ಇವರ ತಂಡದವರಿಂದ ಹಾಸ್ಯದ ಹೊನಲು ಮತ್ತು ಬ್ರಾಹ್ಮರಿ ನೃತ್ಯ ತಂಡ ಉಪ್ಪೂರು ರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅವಲಕ್ಕಿ ಕಾನ್ಸೆಪ್ಟ್ ನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ಯಾಡಿ ಸೇವಾ ಧಾಮದ ವಿನಾಯಕ ರಾವ್ ರವರನ್ನು ಸನ್ಮಾನಿಸಲಾಯಿತು. ಆಶ್ರಮವಾಸಿಗಳು ತಯಾರಿಸಿದ ಹಣತೆಯಿಂದ ದೀಪ ಬೆಳಗಿಸಿ ದೀಪಾವಳಿ ಆಚರಿಸಲಾಯಿತು. ವಾಣಿಶ್ರೀ ಗೋವಿಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಬಂಗಾರಪ್ಪ, ರಾಘವೇಂದ್ರ ಪೂಜಾರಿ, ಉದಯ್ ನಾಯ್ಕ್ ರಾಘವೇಂದ್ರ ಪ್ರಭು ಕರ್ವಾಲು, ರವಿ ಮತ್ತು ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top