ನ.30: ಉಡುಪಿಯಲ್ಲಿ ಬೃಹತ್ ಗೀತೋತ್ಸವ, ಧರ್ಮಸ್ಥಳ ಹೆಗ್ಗಡೆಯವರಿಗೆ ಆಮಂತ್ರಣ

Upayuktha
0


ಉಡುಪಿ: ಶ್ರೀಕೃಷ್ಣ ಮಠದ ಪೂಜ್ಯ ಪರ್ಯಾಯ ಶ್ರೀಪಾದರಾದ ಪುತ್ತಿಗೆ ಶ್ರೀ ಸುಗೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ನವಂಬರ್ 30 ಭಾನುವಾರದಂದು ನಡೆಯಲಿರುವ ಬೃಹತ್ ಗೀತೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಮಂತ್ರಣವನ್ನು ಶ್ರೀ ಮಠದ ವತಿಯನ್ನು ನೀಡಲಾಯಿತು.


ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜಾಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯರವರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಕಾರ್ಯಕ್ರಮದ ವಿವರವನ್ನು ತಿಳಿಸಿ ಸಹಕಾರವನ್ನು ಕೋರಿದರು. 


ಧರ್ಮಸ್ಥಳ ಭಜನಾ ಪರಿಷತ್ತಿನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮತ್ತು ರವೀಂದ್ರಾಚಾರ್ಯ ಉಪಸ್ಥಿತರಿದ್ದರು. ನವೆಂಬರ್ 30 ರಂದು ಲಕ್ಷ ಕಂಠ ಗೀತಾಪಾರಾಯಣ, ಭಜನೋತ್ಸವ, ಸಂತ ಸಂಗಮ ಮುಂತಾದ ವಿಶಿಷ್ಟ ಕಾರ್ಯಕ್ರಮಗಳು ಜರಗಲಿದ್ದು ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top