ಮುಜುಂಗಾವು: ಮುಜುಂಗಾವು ಪರಿಸರದಲ್ಲಿರುವ, ವಿದ್ಯಾಲಯದ ರಕ್ಷಕರೂ ಆದ ಚಂದ್ರಹಾಸ ಶೆಟ್ಟಿಯವರ ಮನೆಯ ಗೋಮಾತೆಗೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗೋಪೂಜೆಯನ್ನು ಇಂದು (ಅ.22) ನಡೆಸಲಾಯಿತು. ವಿದ್ಯಾಲಯದ ಆಡಳಿತ ಸೇವಾಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.
ಸಂಸ್ಕೃತ ಅಧ್ಯಾಪಕರಾದ ಬಾಲಕೃಷ್ಣ ಶರ್ಮ ಅನಂತಪುರ ಗೋಪೂಜೆಯ ಮಹತ್ವವನ್ನು ಈ ಸಂದರ್ಭದಲ್ಲಿ ವಿವರಿಸಿದರು. ವಿದ್ಯಾಲಯದ ಆಡಳಿತ ಸೇವಾಸಮಿತಿ ಕಾರ್ಯದರ್ಶಿಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಹಿಳ್ಳೆಮನೆ, ಮುಖ್ಯೋಪಾಧ್ಯಾಯ ಶಾಮ ಭಟ್ ದರ್ಭೆಮಾರ್ಗ, ಸಹಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ ಇವರೊಂದಿಗೆ ಎಲ್ಲಾ ಅಧ್ಯಾಪಕ ವೃಂದ ಹಾಗೂ ಶಾಲಾ ಮಕ್ಕಳೂ ಗೋಪೂಜೆಯಲ್ಲಿ ಸಹ ಭಾಗಿಗಳಾದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

