ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ಮಂಗಳ ಈಜು ಸಂಸ್ಥೆಯ ಆಶ್ರಯದಲ್ಲಿ ನಡೆದ ಗಾಲ, 2025 ಈಜುಸ್ಪರ್ಧೆಯಲ್ಲಿ 449 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ಈ ಸ್ಪರ್ಧೆಯಲ್ಲಿ ಆಯಾಯ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಈಜುಪಟುಗಳಾದ ರಿಯನ್ನ ಧೃತಿ ಫರ್ನಾಂಡಿಸ್, ಸಾನ್ವಿ, ಯಶ್ವಿ ಬಿ ಹೆಚ್, ಅಲೀಟಾ ಡಿಸೋಜ, ರೀಮಾ ಎ ಎಸ್, ಪ್ರದ್ಯುಮ್ನ ಇವರು ವೈಯಕ್ತಿಕ ಚಾಂಪಿಯನ್‌ಗಳಾಗಿ ಮೂಡಿ ಬಂದರು. ಒಟ್ಟು 65 ಚಿನ್ನ, 24 ಬೆಳ್ಳಿ, 23 ಕಂಚಿನ ಪದಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪದಕಗಳ ವಿವರ
ಬಾಲಕರ ವಿಭಾಗ
ಆಲಿಸ್ಟಾರ್ ಸ್ಯಾಮ್ಯುಯೆಲ್ ರೇಗೊ ಎರಡು ಬೆಳ್ಳಿ ಒಂದು ಕಂಚು, ಅವನೀಶ್ ನಾಯಕ್ ಸುಜೀರ್ ಎರಡು ಬೆಳ್ಳಿ ಒಂದು ಕಂಚು
ಸ್ನಿತಿಕ್ ಎನ್ ಒಂದು ಬೆಳ್ಳಿ 2 ಕಂಚು, ಶಶಾಂಕ್ ಡಿ ಎಸ್ ಎರಡು ಚಿನ್ನ ಒಂದು ಕಂಚು, ಪ್ರದೀಮ್ ನ ಎರಡು ಚಿನ್ನ ಒಂದು ಬೆಳ್ಳಿ, ದಿವಿಜ್ ಕೊಟ್ಟಾರಿ ಒಂದು ಬೆಳ್ಳಿ, ನಂದನ್ ಕರ್ಕೇರಾ ಒಂದು ಕಂಚು, ಸನ್ನೀದ್ದು ಉಳ್ಳಾಲ್ ಒಂದು ಚಿನ್ನ ಒಂದು ಬೆಳ್ಳಿ, ಶ್ರೀ ವತ್ಸ ಒಂದು ಬೆಳ್ಳಿ, ನೀಲ್ ಎಂಜಿ ಒಂದು ಬೆಳ್ಳಿ, ಸುಧನ್ವ ಶೆಟ್ಟಿ ಒಂದು ಚಿನ್ನ
ತನಯ್ ಒಂದು ಚಿನ್ನ ಒಂದು ಕಂಚು.
ಬಾಲಕಿಯರ ವಿಭಾಗ
ರಿಯಾನಾ ಧೃತಿ ಫರ್ನಾಂಡಿಸ್ ಮೂರು ಚಿನ್ನ, ದ್ವಿಶಾ ಶೆಟ್ಟಿ ಒಂದು ಕಂಚು, ದಿಯಾ ನಾಯಕ್ ಒಂದು ಕಂಚು, ಸಾನ್ವಿ ಎರಡು ಚಿನ್ನ ಒಂದು ಬೆಳ್ಳಿ, ಪೋಷಿಕ ಒಂದು ಬೆಳ್ಳಿ ಒಂದು ಕಂಚು, ರೀಮಾ ಎ ಎಸ್ ಎರಡು ಚಿನ್ನ ಒಂದು ಬೆಳ್ಳಿ, ಸಾರಾ ಎಲಿಷ ಪಿಂಟೋ ಮೂರು ಬೆಳ್ಳಿ, ಕುಶಿ ಕುಮಾರ್ ಒಂದು ಬೆಳ್ಳಿ, ದೇವಿಕಾ ಎಂ ಎರಡು ಚಿನ್ನ, ಯಶ್ವಿ ಬಿ ಎಚ್ ಎರಡು ಚಿನ್ನ ಒಂದು ಬೆಳ್ಳಿ, ಹಂಸ್ವಿ ಮೆಂಡನ್ ಒಂದು ಚಿನ್ನ ಲಿಪಿಕಾ ಒಂದು ಚಿನ್ನ ಒಂದು ಕಂಚು, ಅಲಿಟಾ ಡಿಸೋಜ ಮೂರು ಚಿನ್ನ ನಿಷ್ಕಾ ಸೋನೋರಾ ಫರ್ನಾಂಡಿಸ್ ಒಂದು ಬೆಳ್ಳಿ ಒಂದು ಕಂಚು, ಶಿಪ್ರ ಶೆಟ್ಟಿ ಒಂದು ಚಿನ್ನ ಒಂದು ಕಂಚು, ಪಂಚಮಿ ನಾಯಕ್ ಬಾಬುಮೂಲೆ ಒಂದು ಕಂಚು, ಪ್ರಕೃತಿ ಕೆ ಒಂದು ಬೆಳ್ಳಿ, ಶ್ರಾವ್ಯ ಕೆ ಒಂದು ಕಂಚು, ರೊನ್ನಿಕಾ ಮೈರಾ ಒಂದು ಚಿನ್ನ, ಧ್ವನಿ ಅಂಬರ್ ಒಂದು ಕಂಚು.
ಹಾಗೂ ಆಲಿಸ್ಟಾರ್ ಸ್ಯಾಮ್ಯುಯೆಲ್ ರೇಗೊ, ಧೃತಿ ಫರ್ನಾಂಡಿಸ್, ಪ್ರಹ್ಲಾದ್ ಶೆಟ್ಟಿ ಹಾಗೂ ದೇವಿಕಾ ಅವರನ್ನು ಒಳಗೊಂಡ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಫ್ರೀ ಸ್ಟೈಲ್ ಹಾಗೂ ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು.
ಗುಂಪು ಒಂದು ಬಾಲಕಿಯರ ವಿಭಾಗದಲ್ಲಿ ಧೃತಿ, ಸಾನ್ವಿ, ಯಶ್ವಿ, ಪೋಷಿಕ ಒಳಗೊಂಡ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಫ್ರೀ ಸ್ಟೈಲ್ ಹಾಗೂ ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು.
ಗುಂಪು ಒಂದು ಬಾಲಕರ ವಿಭಾಗದ ಮೆಡ್ಲೇರಿಲೆಯಲ್ಲಿ ರೋನನ್, ಡಿವಿಜ್ ನೀಲ್ ಡೈಲಾನ್ ಅವರನ್ನು ಒಳಗೊಂಡ ತಂಡ ಕಂಚಿನ ಪದಕ ಗಳಿಸಿತು
ಗುಂಪು ಎರಡು ಹಾಗೂ ಮೂರು ವಿಭಾಗದ ಮೆಡ್ಲೆ ಹಾಗೂ ಫ್ರೀ ಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಶಶಾಂಕ್ ಸುಧನ್ವ ನಂದನ್ ದೈವಿಕ್ ಇವರನ್ನು ಒಳಗೊಂಡ ತಂಡ ಪ್ರಥಮ ಪ್ರಶಸ್ತಿ ಗಳಿಸಿತು.
ಗುಂಪು ಎರಡು ಮತ್ತು ಮೂರು ಬಾಲಕಿಯರ ವಿಭಾಗದ ಫ್ರೀ ಸ್ಟೈಲ್ ಹಾಗೂ ಮೆಡ್ಲೇ ರಿಲೇ ಸ್ಪರ್ಧೆಯಲ್ಲಿ ಪ್ರೇಮ ಅನಿತಾ ನಿಷ್ಕ ಲಿಪಿಕಾ ಇವರ ನೊಳಗೊಂಡ ತಂಡ ಪ್ರಥಮ ಬಹುಮಾನವನ್ನು ಹಾಗೂ ಧ್ವನಿ, ಹನ್ಸ್ವಿ, ದಿವ್ಯಂಶಿ, ಶಮಿತ ಇವರನ್ನೊಳಗೊಂಡ ತಂಡವು ತೃತೀಯ ಸ್ಥಾನ ಗಳಿಸಿತು .
ಗುಂಪು ನಾಲ್ಕು ಐದು ಆರು ವಿಭಾಗದಲ್ಲಿ ಕಿಕ್ ರಿಲೆಯಲ್ಲಿ ಪ್ರದ್ಯುಮ್ನ ಆಯುಷ್, ಶ್ರೀವತ್ಸ ಏದಂತ್ ಬಾಲಕರ ರಿಲೇ ತೃತೀಯ ಸ್ಥಾನವನ್ನು ಮತ್ತು ಶಿಪ್ರ, ಸಾರಾ, ರೊನ್ನಿಕಾ ಅವರು ದ್ವಿತೀಯ ಸ್ಥಾನ ಗೆದ್ದಿದ್ದಾರೆ.
ಇವರಿಗೆ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಅಭಿಲಾಶ್ ಹಾಗೂ ತರಬೇತುದಾರ ರಾದ ಸ್ಕಂದ ಸುಧೀನ್ ರಾಜ್, ಗಗನ್ ಜಿ ಪ್ರಭು, ಸಂಜು, ಆರೋಮಲ್, ಪ್ರಣಾಮ್ ಸಂಜಯ್ ಉಳ್ವೇಕರ್, ಇವರಲ್ಲಿ ತರಬೇತಿ ಪಡೆಯುತ್ತಿದ್ದರು ಹಾಗೂ ಇವರನ್ನು ನಿರ್ದೇಶಕರಾದ ನವೀನ್ ಹಾಗೂ ರೂಪ ಜಿ ಪ್ರಭು ಇವರು ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


