ಉಚಿತ ಯಕ್ಷಗಾನ ತರಗತಿ ಉದ್ಘಾಟನೆ

Upayuktha
0


ಕಾರಡ್ಕ: ಗಾಯನ, ಆಂಗಿಕ, ವಾಚಿಕ, ಆಹಾರ್ಯಗಳನ್ನೊಳಗೊಂಡ ಪರಿಪೂರ್ಣ ಕಲೆ ಯಕ್ಷಗಾನ. ಯಕ್ಷಗಾನ ಕಲಿಕೆಯಿಂದ ವ್ಯಕ್ತಿ ಸರ್ವತೋಮುಖ ಸಾಧನೆಗೈಯಲು ಸಾಧ್ಯ ಎಂದು ಹಿರಿಯ ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹೇಳಿದರು.


ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಯಕ್ಷಚಿಣ್ಣರು ಕಾರಡ್ಕ ವತಿಯಿಂದ ಎರಡು ತಿಂಗಳ ಉಚಿತ ಯಕ್ಷಗಾನ ತರಗತಿಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು.


ಈ ಎರಡು ತಿಂಗಳ ಉಚಿತ ತರಗತಿಯು ನಿಮ್ಮ ಕಲಾ ಆಸಕ್ತಿಗೆ ಇನ್ನಷ್ಟು ಪ್ರಚೋದನೆ ನೀಡಲಿ ಎಂದು ಕಾರಡ್ಕ ಶಾಲಾ ಮುಖ್ಯ ಶಿಕ್ಷಕ ಸಂಜೀವ ಎಂ  ಶುಭ ಹಾರೈಸಿದರು. ಸಂಚಾಲಕರಾದ ರಾಮಚಂದ್ರ ಮಾಸ್ಟರ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.


ಅನಿವಾರ್ಯ ಕಾರಣಗಳಿಂದ ಗೈರಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಸತೀಶ ಅಡಪ ಸಂಕಬೈಲು ಅವರ ಶುಭಾಶಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಕಾರಡ್ಕ ಶಾಲಾ ಪಿಟಿಎ ಅಧ್ಯಕ್ಷ, ಸಮಾಜ ಸೇವಕ ಸುರೇಶ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ತಂಡ ಪ್ರಾರ್ಥನೆ ಹಾಡಿತು. ಕೀರ್ತೇಶ್ ಸ್ವಾಗತಿಸಿ, ಯುಕ್ತಿ ಧನ್ಯವಾದ ಸಲ್ಲಿಸಿದರು. ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top