ಕರ್ನಾಟಕದ ನಾಲ್ಕು ಜೆಸ್ವಿಟ್ ಉಪಯಾಜಕರಿಗೆ ಮಂಗಳೂರಿನಲ್ಲಿ ಗುರುದೀಕ್ಷೆ

Upayuktha
0


ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹರವರು, ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ನಾಲ್ಕು ಉಪಯಾಜಕರುಗಳಿಗೆ ಯಾಜಕ ದೀಕ್ಷೆಯನ್ನು ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಅಕ್ಟೋಬರ್ 12 ರಂದು ನೀಡಿದರು.


ಗುರುದೀಕ್ಷೆ ಪಡೆದ ಉಪಯಾಜಕರು: ವಂ. ನಿಶಾಂತ್ ನೊರೊನ್ಹಾ, ವಂ. ಶರೂನ್ ಡಿ’ಸೋಜ, ವಂ. ಪೃಥ್ವಿ ರೋಡ್ರಿಗಸ್, ಹಾಗೂ ವಂ. ಪ್ರೀತೇಶ್ ಮಿಸ್ಕಿತ್ ತಮ್ಮ ಪ್ರಭೊಧನೆಯಲ್ಲಿ ಓರ್ವ ಯಾಜಕನು ಕ್ರಿಸ್ತನ ಪ್ರವಾದಿಯಾಗಿ ಕ್ರಿಸ್ತನನ್ನು ಎಲ್ಲೆಡೆಯಲ್ಲೂ ಪಸರಿಸುವ ಕಾರ್ಯದಲ್ಲಿ ತೊಡಗಬೇಕೆಂದು ಕರೆ ನೀಡಿದರು.


“ಇಂದು ಹಲವು ಕಾರಣಗಳಿಂದ ನಮ್ಮ ಸಮಾಜದಲ್ಲಿ ಮತ್ತು ಪ್ರಪಂಚದಲ್ಲಿ ಕತ್ತಲೆ ತುಂಬಿದೆ. ಇಂತಹ ಸನ್ನಿವೇಶದಲ್ಲಿ ತಮ್ಮ ಸೇವೆಗೆ ನೀಡಿದ ಜನತೆಗೆ ಭರವಸೆ ತುಂಬುವ ಮತ್ತು ಕತ್ತಲೆಯನ್ನು ದೂರ ಮಾಡುವ ಪ್ರವಾದಿಗಳಾಗಬೇಕು” ಎಂದು ನವ ಯಾಜಕರಿಗೆ ಕರೆ ನೀಡಿದರು.


ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂದನೀಯ ಸ್ವಾಮಿ ಡಯನೀಶಿಯಸ್ ವಾಸ್ ಜೆ.ಸ., ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ವಂದನೀಯ ಸ್ವಾಮಿ ಐವನ್ ಮೆಂಡೋನ್ಸಾ ಹಾಗೂ ಹಲವು ಗುರುಗಳು ಹಾಗೂ ಕನ್ಯಾಸ್ತ್ರೀಯರು ಹಾಜರಿದ್ದರು.


ವಂದನೀಯ ಸ್ವಾಮಿ ವಿಶ್ವಾಸ್ ಮಿಸ್ಕಿತ್‌ರವರು ಬಲಿಪೂಜೆಯ ನಿರ್ವಹಣೆಯನ್ನು ನೋಡಿಕೊಂಡರು. ವಂದನೀಯ ಸ್ವಾಮಿ ಲೆಸ್ಟನ್ ಲೋಬೊರವರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನೋಡಿಕೊಂಡರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top