ನಾಡಿನೆಲ್ಲೆಡೆ ನವರಾತ್ರಿ-ದಸರಾ ಸಂಭ್ರಮ

Upayuktha
0


ನವರಾತ್ರಿ ಹಬ್ಬವು ಚಿಕ್ಕ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಈ ಹಬ್ಬವನ್ನು ಎಲ್ಲೆಡೆ ಆಚರಿಸುತ್ತಾರೆ. ಈ ಹಬ್ಬದಲ್ಲಿ ಶಕ್ತಿ ದೇವತೆಯಾದ ದುರ್ಗೆಯನ್ನು ಪೂಜಿಸಲಾಗುತ್ತದೆ. ಈ ಹಬ್ಬವು ವಿಜಯದ ಸಂಕೇತವಾಗಿದ್ದು ಕೆಟ್ಟದರ ಮೇಲೆ ಒಳ್ಳೆಯದರ ವಿಷಯವನ್ನು ಸೂಚಿಸುತ್ತದೆ.ನವರಾತ್ರಿ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಪ್ರಿಯವಾದ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ನವರಾತ್ರಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಶರದ ಋತುವಿನಲ್ಲಿ ಅಂದರೆ ಸೆಪ್ಟೆಂಬರ್ / ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಸಂತೋಷ, ಸಮೃದ್ಧಿ, ಯಶಸ್ಸು, ಮತ್ತು ಆಶೀರ್ವಾದಕ್ಕಾಗಿ ಭಕ್ತಾದಿಗಳು ಪ್ರಾರ್ಥಿಸುತ್ತಾರೆ. ಈ ಹಬ್ಬದಲ್ಲಿ ದೇವಿ ದುರ್ಗೆಯ ಒಂಬತ್ತು ರೂಪಗಳನ್ನು ನೋಡುತ್ತೇವೆ. ಇದರ ಮೂಲಕ ಜ್ಞಾನದ ಶಕ್ತಿಯ ವಿಜಯವನ್ನು ಆಚರಿಸುತ್ತೇವೆ. ನವರಾತ್ರಿ ಹಬ್ಬವು ವರ್ಷದಲ್ಲಿ ಎರಡು ಬಾರಿ ಬರುತ್ತದೆ.


1.ವಸಂತ ನವರಾತ್ರಿ-ಮಾರ್ಚ್/ಏಪ್ರಿಲ್ ತಿಂಗಳಲ್ಲಿ 

2. ಶರದ ನವರಾತ್ರಿ-ಸೆಪ್ಟೆಂಬರ್ /ಅಕ್ಟೋಬರ್ ತಿಂಗಳಲ್ಲಿ 

ಇದು ಹೆಚ್ಚು ಪ್ರಸಿದ್ಧವಾಗಿದೆ. ನವರಾತ್ರಿ ಹಬ್ಬದ ಪ್ರತಿದಿನ ದೇವಿಯ 9 ರೂಪವನ್ನು ಪೂಜಿಸುತ್ತೇವೆ. ಅನೇಕ ಭಕ್ತಾದಿಗಳು ಉಪವಾಸದ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಇನ್ನೂ ಕೆಲವರು ವಿಶೇಷ ಪೂಜೆಗಳನ್ನು ಹಾಗೂ ಹೋಮ ಹವಣಗಳನ್ನು ಮಾಡುತ್ತಾರೆ. ನವರಾತ್ರಿಯ 9 ದಿನಗಳಿದ್ದು ಪ್ರತ್ಯೇಕವಾದ ದೇವಿಯ ರೂಪವಿದ್ದು ಎಲ್ಲಾ ದೇವಿಯರನ್ನು ಒಟ್ಟಾಗಿ ನವದುರ್ಗ ಎಂದು ಕರೆಯುತ್ತಾರೆ ಮೊದಲನೆಯದಾಗಿ 

1. ಶೈಲ ಪುತ್ರಿ 

2. ಬ್ರಹ್ಮಚಾರಿಣಿ

3. ಚಂದ್ರಘಂಟಾ 

4. ಕುಷ್ಮಾಂಡಾ

5. ಸ್ಕಂದ ಮಾತತಾ

6. ಕಾತ್ಯಾಯನಿ

7. ಕಾಲರಾತ್ರಿ

8. ಮಹಾಗೌರಿ

9. ಸಿದ್ಧಿರಾತ್ರಿ


ಮೊದಲನೇ ದೇವಿ ಶೈಲಪುತ್ರಿ

ಶೈಲ ಪುತ್ರಿ ದೇವಿಯನ್ನು ಆರದಿಸುತ್ತೇವೆ ಶೈಲಾ ಅಂದರೆ ಪರ್ವತರಾಜನ ಮಗಳು ಇವಳಿಗೆ ಸತಿ, ಭವಾನಿ, ಹೇಮಾವತಿ ಎಂದೆಲ್ಲ ಕರೆಯುತ್ತೇವೆ. ಶೈಲ ಪುತ್ರಿಯು ಹಿಂದಿನ ಜನ್ಮದಲ್ಲಿ ಸತಿ ಎಂಬ ಹೆಸರಿನಿಂದ ಜನ್ಮ ಪಡೆದವಳು. ಈಕೆ ಶಂಕರನ ಪತ್ನಿ, ಆದರೆ ತನ್ನ ತಂದೆ ದಕ್ಷನು ಶಿವನನ್ನು ತಿರಸ್ಕರಿಸಿದ್ದರಿಂದ ಸತಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಈಕೆ ಶಂಕರನ ಮೇಲಿದ್ದ ಪ್ರೀತಿಯಿಂದ ಪುನರ್ಜನ್ಮ ಪಡೆಯುತ್ತಾಳೆ. ಹಿಮವಂತ ಪರ್ವತರಾಜನ ಮಗಳಾಗಿ ಜನ್ಮವನ್ನು ಪಡೆಯುತ್ತಾಳೆ. ಈಕೆಗೆ ಎತ್ತಿನ ಮೇಲೆ ಇರುತ್ತಾಳೆ ಎಡಕೈಯಲ್ಲಿ ಕಮಲದ ಹೂವು ಬಲಗೈಯಲ್ಲಿ ತ್ರಿಶೂಲ ಹೊಂದಿದ್ದಾಳೆ. ಈಕೆ ಧರ್ಮ ಶ್ರದ್ಧೆ ಶುದ್ಧತೆ ಭಕ್ತಿ ಮತ್ತು ಶಕ್ತಿಯ ಪ್ರತೀಕವಾಗಿದ್ದಾಳೆ. ಈ ದಿನ ಭಕ್ತರು ಶ್ರದ್ಧತೆ ಮತ್ತು ಆಂತರಿಕ ಶಕ್ತಿಯನ್ನು ಪಡೆಯಲು ಶೈಲ ಪುತ್ರಿಯ ಧ್ಯಾನವನ್ನು ಮಾಡುತ್ತಾರೆ.


ಶೈಲ ಪುತ್ರಿ ದೇವಿಯ ಮಂತ್ರ 

ವಂದೇ ವಾಂಛಿತ ಲಾಭಯ ಚಂದ್ರಾರ್ಥಕೃತ || 

ವೃಷರೂಢಾ ಶೂಲಾಧರಾಂ ಶೈಲ ಪುತ್ರಿಂ ಯಶಸ್ವಿನೀಂ||


ಈ ಮಂತ್ರದ ಅರ್ಥ ಚಂದ್ರನ ಅರ್ಧವನ್ನುತಲೆಯ ಮೇಲೆ ಧರಿಸಿದ ಎತ್ತಿನ ಮೇಲೆ ಕೋರಿದ ಶೂಲವನ್ನು ಧರಿಸಿದ ಶೈಲ ಪುತ್ರಿಗೆ ನಮಸ್ಕಾರ.


ಶೈಲ ಪುತ್ರಿಗೆ ಮಾಡುವ ಪೂಜೆಯ ಫಲ: ಈಕೆಗೆ ಪೂಜೆಯಿಂದ ಮೂಲಾಧಾರ ಚಕ್ರ ಶುದ್ಧವಾಗುತ್ತದೆ.

ಪೂಜಿಸುವ ಭಕ್ತನಿಗೆ ಸ್ಥಿರತೆ ಧೈರ್ಯ ಮತ್ತು ಸಮತೋಲನ ದೊರೆಯುತ್ತದೆ.

ನವರಾತ್ರಿಯ ನಂತರ ಹತ್ತನೇ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ನಾವೆಲ್ಲರೂ ಕರೆಯುತ್ತೇವೆ. ಇದು ಚೆನ್ನಾಗಿ ಶಕ್ತಿಯ ಭಯವನ್ನು ಧರ್ಮದ ಜಯವನ್ನು ಸೂಚಿಸುತ್ತದೆ. ಈ ದಿನವನ್ನು ರಾಮನು ರಾವಣನನ್ನು ಜೈಸಿದ ದಿನವೆಂದು ಈ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ.




- ಸ್ವಾತಿ. ಡಿ

ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top