ಡಾ ಸುರೇಶ ನೆಗಳಗುಳಿ ಅವರ 'ವೃತ್ತಿ ಪ್ರವೃತ್ತಿ ಆವೃತ್ತಿ' ಕೃತಿ ಬಿಡುಗಡೆ

Upayuktha
0


ಮಂಗಳೂರು: ಮಂಗಳೂರಿನ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಧಾನ ಸಲಹೆಗಾರ, ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ತಜ್ಞ ಮತ್ತು ಹೆಸರಾಂತ ಬರಹಗಾರ ಡಾ ಸುರೇಶ ನೆಗಳಗುಳಿ ಇವರ ಕುರಿತಾದ ಬದುಕು ಬರೆಹ, "ವೃತ್ತಿ ಪ್ರವೃತ್ತಿ ಅವೃತ್ತಿ" ಎಂಬ ಕೃತಿಯು ಇಂದು (ಅ.26) ದೇರಳಕಟ್ಟೆಯ ವಿದ್ಯಾರತ್ನ ಶಾಲಾ ಸಭಾಂಗಣದಲ್ಲಿ ನಡೆದ ಪಿ.ವಿ ಪ್ರದೀಪ್ ಕುಮಾರ್ ಅವರ ಕಥಾಬಿಂದು ಸಾಹಿತ್ಯೋತ್ಸವದ ಸಂದರ್ಭ ಲೋಕಾರ್ಪಣೆಗೊಂಡಿತು.


ವಿ.ಬಿ. ಕುಳಮರ್ವ ಅವರು ಬಿಡುಗಡೆಗೊಳಿಸಿದ ಈ ಕಾರ್ಯಕ್ರಮಕ್ಕೆ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಪಿ ವಿ ಪ್ರದೀಪ್ ಕುಮಾರ್, ರವೀಂದ್ರ ಶೆಟ್ಟಿ ಉಳಿದೋಟ್ಟು, ಸತ್ಯವತಿ ಭಟ್ ಕೊಳಚಪ್ಪು, ಮುಂತಾದವರು ಸಾಕ್ಷಿಯಾದರು.


ಕೊಳಚಪ್ಪೆ ಗೋವಿಂದ ಭಟ್ಟರು ಕೃತಿಗಾರರ ನೆಲೆಯಿಂದ ಮಾತನಾಡುತ್ತಾ ಕೇವಲ ಹತ್ತು ದಿನದಲ್ಲಿ ಡಾ ನೆಗಳಗುಳಿಯವರ ಬದುಕು ಬರೆಹವನ್ನು ಸಿದ್ಧ ಪಡಿಸಲಾಯಿತು ಎಂದರು.


ಆದರೂ ಈ ಕೃತಿಯು  ಅಜಿತ್ ಪ್ರಸಾದ, ಕಣಚೂರ್ ಮೋನು, ಡಾ ಶ್ರೀರಾಮ ಭಟ್, ಡಾ ಚಕ್ರಪಾಣಿ, ಡಾ ಹರೀಶ್ ನಾಯಕ್, ಡಾ ಸದಾನಂದ ನಾಯ್ಕ್, ಮೋಹನ ಆಳ್ವ, ಚೊಕ್ಕಾಡಿದ್ವಯರ ಸಹಿತ ಹಲವು ಗಣ್ಯರ ಅಶಯ ನುಡಿಗಳನ್ನು ಹೊಂದಿರುವುದು ಗಮನಾರ್ಹ ಎಂದರು.


ಸೊಗಸಾದ ಸ್ಕೂಲ್ ಬುಕ್ ಕಂಪನಿಯ ಉಮೇಶ್ ಶೆಣೈಯವರಿಂದ ಮುದ್ರಿತವಾದ ಈ ಕೃತಿಯು ಸುರೇಶ ನೆಗಳಗುಳಿ ಅವರ ಶುಭ ಪ್ರಕಾಶನದ ಮೂಲಕ ಬೆಳಕಿಗೆ ಬಂದಿದೆ.


ಕೊನೆಯಲ್ಲಿ ಪಿ.ವಿ ಪ್ರದೀಪ್ ಕುಮಾರ್ ಅವರು ಶಾಲು ಹಾರ ಸಹಿತ ಪುರಸ್ಕರಿಸಿದರು. ಹಲವು ಸಾಧಕರಿಗೆ ಸಾಧಕ ರತ್ನ, ಶಿಕ್ಷಕ ರತ್ನ ಪ್ರಶಸ್ತಿಗಳನ್ನು ಇದೇ ವೇದಿಕೆಯಲ್ಲಿ ನೀಡಲಾಯಿತು. ಕವಿಗೋಷ್ಠಿ ಹಾಗೂ ಡಾ ವಾಣಿಶ್ರೀ ಸಾರಥ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳೂ ವಿಶೇಷ ಮೆರುಗು ನೀಡಿದುವು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top