ಶಿಕ್ಷಣದೊಂದಿಗೆ ಕೌಶಲ್ಯವನ್ನು ರೂಢಿಸಿಕೊಳ್ಳಿ : ಕೃಷ್ಣರಾಜ ಜೋಯಿಸ.ಎ

Upayuktha
0



ಪುತ್ತೂರು:" ವಿದ್ಯಾರ್ಥಿ ಗಳು ಶಿಕ್ಷಣದ ಜೊತೆ ಜೊತೆಗೆ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ಸಂವಹನ ಕೌಶಲ್ಯ, ನಡವಳಿಕೆ, ನಾಯಕತ್ವ, ಒಗ್ಗಟ್ಟು, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯಗಳು  ನಮ್ಮ ಬದುಕಿನ ಯಶಸ್ಸಿನ ನಿಜವಾದ ಸ್ತಂಭಗಳು" ಎಂದು  ನಿಟ್ಟೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣರಾಜ ಜೋಯಿಸ ಹೇಳಿದರು. 


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಇದರ  ಇಂಗ್ಲಿಷ್ ವಿಭಾಗ, ಉದ್ಯೋಗ ಮತ್ತು ತರಬೇತಿ ಕೋಶ ಮತ್ತು ಐಕ್ಯೂಎಸಿ ಸಂಯುಕ್ತವಾಗಿ ಆಯೋಜಿಸಿದ “ಸಾಫ್ಟ್ ಸ್ಕಿಲ್ಸ್- ಎ ಗೇಟ್‌ವೇ ಟು ಸಕ್ಸೆಸ್” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ  ಮುರಳಿಕೃಷ್ಣ ಕೆ. ಎನ್. "ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯ ವ್ಯವಸ್ಥೆ ಇಲ್ಲದ ಕಾರಣದಿಂದಲೇ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಾರ್ಯಾಗಾರಗಳನ್ನು ಆಯೋಜಿಸುವ ಅಗತ್ಯವಿದೆ.  ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಅನಗತ್ಯ ವಿಷಯಗಳಿಂದ  ದೂರವಿದ್ದು  ತಮ್ಮ ವೃತ್ತಿಪರ ಜೀವನದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಕೌಶಲ್ಯಗಳನ್ನು ಜೀವನದಲ್ಲಿ ಅನ್ವಯಿಸಿದಾಗ ಮಾತ್ರ ಅವುಗಳ ನಿಜವಾದ ಮೌಲ್ಯ ಹೊರಹೊಮ್ಮುತ್ತದೆ" ಎಂದು ತಿಳಿಸಿದರು.


ಕಾರ್ಯಕ್ರಮವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್.  ಸ್ವಾಗತಿಸಿ, ತೃತೀಯ ಬಿಎ ವಿದ್ಯಾರ್ಥಿನಿ ತ್ರಿಷಾ ಧನ್ಯವಾದಗೈದರು. ನಿಭಾ ಡಿ. ನಿರ್ವಹಿಸಿದರು .



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top