ಉತ್ತಮ ವೃತ್ತಿ ಆರಿಸಿಕೊಳ್ಳಿ: ಡಾ. ರಾಜೇಶ್ ಮೋಹನ್

Upayuktha
0


ಉಜಿರೆ: ಉದ್ಯೋಗ ಎಂಬುದು ಅಲ್ಪಾವಧಿಯದ್ದಾದರೆ ವೃತ್ತಿ ಎಂಬುದು ದೀರ್ಘಾವಧಿಯದ್ದು. ಕೆಲಸಕ್ಕಿಂತ ಉತ್ತಮ ವೃತ್ತಿಗೆ ಒತ್ತು ಕೊಡಬೇಕು. ಹಾಗಾಗಿ ಉತ್ತಮ ವೃತ್ತಿಯನ್ನು ಆರಿಸಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ IGNOUದ ತಿರುವನಂತಪುರಂ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ರಾಜೇಶ್ ಮೋಹನ್ ಹೇಳಿದರು.


ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗವು ಸೆ.26ರಂದು ವೃತ್ತಿ ಅವಕಾಶಗಳ ಕುರಿತು ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.


ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ವೃತ್ತಿಯನ್ನು ಆರಿಸುವಾಗ, ನಮ್ಮ ಆಸಕ್ತಿ, ವೃತ್ತಿ ಕ್ಷೇತ್ರದ ಬಗ್ಗೆ ನಮ್ಮ ಒಲವನ್ನು ಚೆನ್ನಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.


ವಿಮರ್ಶಾತ್ಮಕ ಚಿಂತನೆ ಅಗತ್ಯ. ಜತೆಗೆ, ಪದವಿ ಶಿಕ್ಷಣ ಸಂದರ್ಭದಲ್ಲಿ ಭಾಷಾ ಕೋರ್ಸ್‌ ಕೂಡ ಮಾಡುವುದು ಉತ್ತಮ. ಉದ್ಯೋಗ ಮಾರುಕಟ್ಟೆಗೆ ಶಕ್ತಿಯಾದ ಭಾಷಾ ಕೌಶಲ್ಯ, ವಿಶೇಷವಾಗಿ ಇಂಗ್ಲಿಷ್‌ ಭಾಷೆಯಲ್ಲಿನ ಪಾರಂಗತತೆ ಅತ್ಯಂತ ಅಗತ್ಯ ಎಂದು ಅವರು ಸಲಹೆ ನೀಡಿದರು.


ಪ್ರಸ್ತುತ ರಾಜ್ಯಶಾಸ್ತ್ರ ವಿಜ್ಞಾನದಲ್ಲಿ ವೃತ್ತಿ ಅವಕಾಶಗಳು ಹೆಚ್ಚಾಗಿವೆ. ಹಿಂದೆಂದೂ ಇಲ್ಲದಷ್ಟು ಉದ್ಯೋಗ ಹಾಗೂ ವೃತ್ತಿ ಅವಕಾಶಗಳು ಇಂದು ಈ ಕ್ಷೇತ್ರದಲ್ಲಿ ಲಭ್ಯವಿವೆ ಎಂದರು.


ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ನಟರಾಜ್ ಎಚ್.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶೇಷವಾಗಿ ರಾಜ್ಯಶಾಸ್ತ್ರ ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಅವಕಾಶಗಳು ಬಹಳ ವಿಶಾಲವಾಗಿವೆ. ನಮ್ಮ ಸಮಾಜದ ನೀತಿಗಳು ಮತ್ತು ಸವಾಲುಗಳನ್ನು ವಿಶ್ಲೇಷಿಸಲು ಹಾಗೂ ಸಂವಹನ ಕೌಶಲ್ಯವನ್ನು ಬೆಳೆಸಲು ಈ ವಿಷಯವು ಸಹಾಯಕವಾಗಿದೆ ಎಂದರು.


ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ರಾಜ್ಯಶಾಸ್ತ್ರವಿಜ್ಞಾನ ಮತ್ತು ಸರ್ಕಾರ ಕುರಿತ ಜ್ಞಾನವು ಇಂದು ಅತ್ಯಂತ ಮೌಲ್ಯಯುತ. ಕೇವಲ ಜ್ಞಾನ ಹೊಂದಿದರೆ ಸಾಕಾಗುವುದಿಲ್ಲ; ಅದನ್ನು ಪ್ರಾಯೋಗಿಕ ಕೌಶಲ್ಯಗಳಿಗೆ ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಆತ್ಮವಿಶ್ವಾಸ, ಧೈರ್ಯ ಮತ್ತು ಕುತೂಹಲ ವೃತ್ತಿಜೀವನದ ಯಶಸ್ಸಿಗೆ ಪ್ರಮುಖ ಅಂಶಗಳಾಗಿವೆ ಎಂದು ಕಿವಿಮಾತು ಹೇಳಿದರು.


ವಿಭಾಗದ ಪ್ರಾಧ್ಯಾಪಕರಾದ ಭಾಗ್ಯಶ್ರೀ, ಡಾ. ಶಿವಕುಮಾರ್ ಹಾಗೂ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.


ವೀಕ್ಷ ಸ್ವಾಗತಿಸಿದರು. ಕೀರ್ತಿ ಅತಿಥಿ ಪರಿಚಯ ನೀಡಿದರು. ತನುಶ್ರೀ ವಂದಿಸಿ, ಅಚಲ ಕಾರ್ಯಕ್ರಮ ನಿರೂಪಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top