ಕುರುಬರು ಪವಾಡಗಳಿಂದ ಪ್ರಸಿದ್ಧಿ: ಮಾಲತೇಶ್ ಅರಸ್
ಚಿತ್ರದುರ್ಗ: ಹಾಲುಮತ ಕುರುಬ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಚರಿತ್ರೆ, ಪುರಾಣ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ ಬುಡಕಟ್ಟು ಆಚರಣೆ, ಒಡೆಯರ್ ಗುರುಸ್ಥಾನ ಹೀಗೆ ಬೃಹತ್ ಪರಂಪರೆ ಹೊಂದಿದ್ದು ಅನೇಕ ಪವಾಡಗಳ ಮೂಲಕ ಕುರುಬರು ಪ್ರಸಿದ್ಧಿ ಪಡೆದಿದ್ದಾರೆ ಎಂದು ಬುಡಕಟ್ಟು ಸಂಸ್ಕೃತಿ ಸಂಶೋಧಕ, ವಕೀಲ ಮಾಲತೇಶ್ ಅರಸ್ ಹೇಳಿದರು.
ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠ ಹೊಸದುರ್ಗ ಹಾಗೂ ತಾಲ್ಲೂಕು ಕುರುಬ ಸಮಾಜ, ತುಮಕೂರು ಇವರ ಆಶ್ರಯದಲ್ಲಿ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಕನಕ ಧಾಮದಲ್ಲಿ ಹಮ್ಮಿಕೊಂಡಿದ್ದ "ಕನಕ ಹುಣ್ಣಿಮೆ" (ನಮ್ಮ ಸಂಸ್ಕೃತಿ-ನಮ್ಮ ಪರಂಪರೆ) ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕುರುಬರ ಮೂಲ ಗುರು ಶಾಂತಮುತ್ತಯ್ಯ ಅವರು ಸತ್ತ ಕುರಿಯನ್ನು ಬದುಕಿಸುವ ಪವಾಡವನ್ನು ಹೇಳುವ ತಗರ ಪವಾಡ ಕುರುಬ ಸಮುದಾಯವನ್ನು ಪ್ರಸ್ತಾಪಿಸುವ ಅದ್ಬುತ ಕೃತಿ. ಈ ಪವಾಡದಿಂದಲೇ ಬಸವಣ್ಣ ಅವರ ಕಲ್ಯಾಣದಿಂದ ಹೊರಗಿದ್ದ ಕುರುಬರು ಒಳಗೆ ಬರುವಂತಾಯಿತು.ಆ ಕಾಲದಲ್ಲಿಯೇ ಕುರುಬರು ಕಾಡಿನಲ್ಲಿ ವಾಸಿಸಿ ಕಾಡುಕುರುಬರಾಗಿದ್ದು ಮೂಲ ಬುಡಕಟ್ಟು ಸಂಸ್ಕೃತಿ ಬಂದಿದೆ. ಕುರುಬರ ಇತಿಹಾಸ ಚರಿತ್ರೆ ಬಗ್ಗೆ ಕೃತಿಗಳನ್ನು ಬರೆಸಿ ಹೊರತರುವ ಕಾರ್ಯ ಹೆಚ್ಚಾಗಬೇಕು. ಈ ಮೂಲಕ ಕಾಗಿನೆಲೆ ಕನಕ ಗುರುಪೀಠದ ಕನಕ ಹುಣ್ಣಿಮೆ ಹೊಸ ಚರಿತ್ರೆ ಬರೆಯಲಿ ಎಂದರು.
ಕುರುಬರಿಗೆ ನಮ್ಮ ಮೂಲದ ಅರಿವು ಇಲ್ಲ, ಸಂಘಟನೆಯ ಕೊರತೆಯಿಂದ ಇತಿಹಾಸದ ಮರೆಯಾಗುತ್ತಿದೆ. ಬರೀ ರಾಜಕೀಯ ಮಾತನಾಡುವ ಬದಲಿಗೆ ಸಂಸ್ಕೃತಿ ಅನಾವರಣವಾಗಲಿ. ಬಸವಣ್ಣ ಕಾಲದ ಆದಿಗೊಂಡ, ಪದುಮಗೊಂಡರ ಶಿವಶಕ್ತಿ, ಶಾಂತಮುತ್ತಯ್ಯರ ಟಗರು ಪವಾಡ ಚರಿತ್ರೆಯಾದರೆ. ಕಲಿಯುಗದಲ್ಲಿ ಟಗರು ಸಿದ್ದರಾಮಯ್ಯ ಅವರೂ ಟಗರು ಪವಾಡವೂ ಚರಿತ್ರೆಗೆ ಸೇರಲಿದೆ ಎಂದರು.
ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕ ಹುಣ್ಣಿಮೆ ಮೂಲಕ ಸಮುದಾಯದಲ್ಲಿ ಹೊಸ ಬದಲಾವಣೆ ಆಗುತ್ತಿದೆ, ಪ್ರತಿ ತಿಂಗಳು ಒಂದೊಂದು ತಾಲ್ಲೂಕಿನ ಭಕ್ತರು ಆಗಮಿಸುತ್ತಾರೆ ಅದು ನಮಗೆ ಸಂತಸ ತಂದಿದೆ. ಶೀಘ್ರದಲ್ಲಿ ಬೃಹತ್ ಕನಕ ಪ್ರತಿಮೆ ಅನಾವರಣಗೊಳಿಸ ಲಾಗುತ್ತದೆ. ಈ ಮೂಲಕ ಮಧ್ಯ ಕರ್ನಾಟಕದ ಕೆಲ್ಲೋಡು ಪ್ರವಾಸೋದ್ಯಮ ಕೇಎವಾಗಲಿದೆ ಎಂದರು.
ತುಮಕೂರಿನ ಬಿಂದುಶೇಖರ್ ಒಡೆಯರ್, ಮಾಜಿ ಶಾಸಕ ಡಾ. ಎಂ.ಆರ್. ಹುಲಿನಾಯ್ಕರ್, ಹಿರಿಯ ಪತ್ರಕರ್ತ ಡಾ. ಎಸ್. ನಾಗಣ್ಣ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಮಕೂರು ಜಿಲ್ಲೆಯ ತಾಲ್ಲೂಕು ಕುರುಬ ಸಮಾಜದ ಮೂನ್ಮೂರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಅನಂತ್, ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷರಾದ ಕೆ.ಓಂಕಾರಪ್ಪ, ಸುರೇಶ್ ಯಾಜ್ಞವಲ್ಕ್ಯ, ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ಹಾಸ್ಯ ಸಾಹಿತಿ ಜಗನ್ನಾಥ್, ರೇಣುಕಾ ಪ್ರಸಾದ್, ತುಮಕೂರಿನ ಅನೇಕ ಗಣ್ಯರು ಮತ್ತು ಮಹಿಳೆಯರು ಇತರರು ಇದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


