ಕುಂಬಳೆ: ಇಲ್ಲಿನ ಅನಂತಪುರ ಕೈಗಾರಿಕಾ ಪ್ರಾಂಗಣದ ಪ್ಲೈವುಡ್ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ಭಾರೀ ಸ್ಪೋಟ ಸಂಭವಿಸಿದೆ. ಸಂಜೆ ಸುಮಾರು ಏಳರ ವೇಳೆಗೆ ಈ ಸ್ಪೋಟ ಸಂಭವಿಸಿದ್ದು, ಪರಿಸರದ ಮನೆ, ಕಾರ್ಖಾನೆಗಳಿಗೆ ಛಿದ್ರಗೊಂಡ ಕಲ್ಲುಗಳು ಸಿಡಿದಿವೆ. ಅಲ್ಲದೆ ಸ್ಫೋಟದ ಕಂಪನಕ್ಕೆ ಅನಂತಪುರ ಕ್ಷೇತ್ರ ಪರಿಸರವೇ ಕಂಪಿಸಿದೆ.
ಘಟನೆಯಲ್ಲಿ ಹಲವು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಸುಮಾರು 15ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೖಕಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ಮೃತಪಟ್ಟವನನ್ನು ಅಸ್ಸಾಂ ರಾಜ್ಯದ ಕಾರ್ಮಿಕ ನಜೀರಲ್ ಆಲಿ (20) ಎಂದು ಗುರುತಿಸಲಾಗಿದೆ. ದುರಂತ ಘಟಿಸಿದ ವೇಳೆ ಕಾರ್ಖಾನೆಯಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರಿದ್ದರು ಎನ್ನಲಾಗಿದೆ.
ಅನಂತಪುರದ ಸಮೀಪದ ಕಣ್ಣೂರು ಕುನ್ನಿಲ್ ಎಂಬಲ್ಲಿ ಇರುವ ಡೆಕೋರ್ ಪ್ಯಾನೆಲ್ ಇಂಡಸ್ಟ್ರೀಸ್ ನಲ್ಲಿ ಬಾಯ್ಲರ್ ಸ್ಫೋಟಿಸಿ ಈ ದುರಂತ ಘಟಿಸಿದೆ. ಸ್ಫೋಟದ ಸದ್ದಿಗೆ ಪರಿಸರದಲ್ಲಿ ಭಯ ಭೀತಿಯ ಆತಂಕ ಸೃಷ್ಟಿಯಾಯಿತು. ಹಲವರು ಮನೆಯಿಂದ ಹೊರಗೆ ಓಡಿ ಬಂದರು. ಅನೇಕ ಮನೆಗಳ ಗಾಜಿಗೆ ಹಾನಿಯಾಗಿವೆ. ಕಾರ್ಖಾನೆ ಪರಿಸರದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸಾರ್ವಜನಿಕರು ಅತ್ತ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಅನಂತಪುರ ದೇವಳ ಸುತ್ತಲಿನ ಪರಿಸರ ಕೈಗಾರಿಕಾ ಕೇಂದ್ರವಾಗಿದ್ದು, ಇಂತಹ ದುರಂತ ಇದೇ ಮೊದಲ ಬಾರಿ ಈ ಪರಿಸರದಲ್ಲಿ ಘಟಿಸಿದೆ. ಘಟನೆಯಿಂದಾಗಿ ಪರಿಸರಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


