ಸರ್ವ ದುರಿತಾಪಹಾರಿ- ಗೀತೆ: ಕೃಷ್ಣರಾಜರಾವ್ ಪೆರ್ಡೂರು

Upayuktha
0


ಕೋಡಿಕಲ್‌: "ಶ್ರೀರಾಮನಂತೆ ಬದುಕುವುದು; ಗೀತಾಚಾರ್ಯನ ನೀತಿಗಳನ್ನು ಅನುಸರಿಸುವುದೇ ಗೀತೆಯ ಸಾರ. ಜನಮಂದಿಯ ಸರ್ವಸಮಸ್ಯೆಗಳಿಗೂ ಅಲ್ಲಿ ಉತ್ತರ ದೊರೆಯುತ್ತದೆ. ಗೋಪಾಲನಂದನನಾಗಿ ಶ್ರೀಕೃಷ್ಣ ಈ ಭೂಮಿಯಲ್ಲಿನ ಸಕಲ ಜೀವರಾಶಿಗಳಿಗೂ ನಡೆದುಕೊಳ್ಳಲು ಪಥದರ್ಶನ ಮಾಡಿದ್ದಾನೆ. ಹಸುವು ಕೆಚ್ಚಲಿನಿಂದ ಹಾಲು ಸ್ರವಿಸುವಂತೆ ಅರ್ಜುನನೆಂಬ ಕರುವಿಗೆ ಗೀತೋಪದೇಶ ಮಾಡಿದ್ದಾನೆ. ಕೃಷ್ಣ ದ್ವೈಪಾಯನರು ಕಂಡ ಸತ್ಯವನ್ನು ಗ್ರಾಂಥಿಕವಾಗಿ ಬರೆದು ನಮ್ಮ ಕೈಗೆ ಮಾಗಿದ ಹಣ್ಣನ್ನಿತ್ತಿದ್ದಾರೆ. ನಾವು ಅದರ ಸವಿಯನ್ನುಂಡು ಗೀತಾ ರಸಾಯನ ಭುಂಜಿಸಿ ಕೃತಾರ್ಥರಾಗೋಣ. ಮುಂದಿನ ಪೀಳಿಗೆಯೂ ಈ ದಿಶೆಯಲ್ಲಿ ಮುಂದುವರಿಯುವಂತೆ ಪ್ರೇರೇಪಿಸೋಣ" ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಪ್ರವಚನಕಾರ ಕೃಷ್ಣರಾಜ ರಾವ್, ಪೆರ್ಡೂರು ರವರು ನುಡಿದರು.


ಅವರು ಕೋಡಿಕ್ಕಲ್‌ನ ವಿಪ್ರವೇದಿಕೆಯ ದಶಮಾನೋತ್ಸವ ಸರಣಿ ಕಾರ್ಯಕ್ರಮದ ಪಂಚಮ ಉತ್ಸವದಲ್ಲಿ "ಗೀತಾ ಸಾರೋದ್ಧಾರ" ಎಂಬ ವಿಷಯದಲ್ಲಿ ಪ್ರವಚನ ನಡೆಸಿಕೊಟ್ಟರು.


ಮಾ| ಗೌರವ್ ಕೆ ರಾವ್ ರವರ ಗಣಪತ್ಯರ್ಥವಶೀರ್ಷ ಮಂತ್ರದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶೀಮತಿ ಸುಧಾರಾಣಿ ಜಿ. ರಾವ್ ರವರು ಸ್ವಾಗತಿಸಿದರು. ವಿಪ್ರ ವೇದಿಕೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ, ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ, ಟ್ರಸ್ಟಿಗಳಾದ ವಿದ್ಯಾಗಣೇಶ್ ರಾವ್, ಪ್ರಭಾವತಿ ಮಡಿ ಸಭೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ನಿರ್ವಹಿಸಿ, ಖಚಾಂಚಿ ಕಿಶೋರ್ ಕೃಷ್ಣ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top