ಕಾಸರಗೋಡು: ಸುಲಭದ ದಾರಿಯಲ್ಲಿ ದುಡ್ಡು ಮಾಡುವ ದರ್ದಿಗೆ ಬಿದ್ದವರು ತಮ್ಮ ಚಿಕ್ಕ ಮಕ್ಕಳನ್ನೂ ಕೆಟ್ಟದಾರಿಗೆ ದೂಡಲೂ ಹೇಸರು ಎಂಬುದು ಈ CCTV ದೃಶ್ಯಾವಳಿಗಳಿಂದ ಸಾಬೀತಾಗಿದೆ.
ಬಾಯಾರು ಪದವಿನಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕ್ ಆಫ್ ಬರೋಡ, ಕೇರಳ ಗ್ರಾಮೀಣ ಬ್ಯಾಂಕ್‌ಗಳ ಪರಿಸರ ಇಂತಹ ಹಲವು ಸಿನಿಮೀಯ ಪಿಕ್ ಪಾಕೆಟ್ ಮಾಡುವವರ ಹಾಟ್ ಸ್ಪಾಟ್ ಅಂದರೆ ತಪ್ಪಾಗಲಾರದು.
ಬ್ಯಾಂಕ್‌ಗಳಿಂದ ಹಣ ವಿತ್‌ಡ್ರಾ ಮಾಡುವವರ ಮೇಲೆ ಕಣ್ಣಿಟ್ಟು ನಂತರ ಸಣ್ಣ ಮಕ್ಕಳ ಮುಖಾಂತರ ಅದನ್ನ ಲಪಾಟಾಯಿಸುವ ಖತರ್ನಾಕ್ ತಂಡವೊಂದು ಈ ಪರಿಸರಕ್ಕೆ ಲಗ್ಗೆ ಇಟ್ಟಿದ್ದು, ಸಾರ್ವಜನಿಕರು ತಮ್ಮ ಎಚ್ಚರ ತಪ್ಪಿದರೆ ಕ್ಷಣಮಾತ್ರದಲ್ಲಿ ಬೆವರು ಹರಿಸಿ ದುಡಿದ ದುಡ್ಡು ಕಳ್ಳರ ಪಾಲಾಗುವುದರಲ್ಲಿ ಸಂಶಯವಿಲ್ಲ.
ನಿನ್ನೆ 21/10/2026ರಂದು ಕೆಲಸದವರಿಗೆ ಸಂಬಳ ಕೊಡಲು ಬ್ಯಾಂಕಿನಿಂದ 50000/- ಹಣ ವಿತ್‌ಡ್ರಾ ಮಾಡಿ ಪ್ಯಾಂಟಿನ ಜೇಬಿನಲ್ಲಿ ಇರಿಸಿ ಅಲ್ಲೇ ಹತ್ತಿರದ ಮೆಡಿಕಲ್ಸ್‌ನಲ್ಲಿ ಖರೀದಿಯಲ್ಲಿ ತೊಡಗಿದ್ದಾಗ ಬಂದ ಬುರ್ಖಾಧಾರಿ ಮಹಿಳೆ ಹಾಗೂ ಸಣ್ಣ ಹುಡುಗ ಕೈಚಳಕ ಬಾಯಾರಿನ ಜನೌಷಧಿ ಕೇಂದ್ರದ CCTVಯಲ್ಲಿ ಸೆರೆಯಾಗಿದೆ.
ಕುರುವೇರಿ ಕ್ಯಾಶ್ಯೂ ಮಾಲಿಕ ವಿಶ್ವ ಕೇಶವ ಅವರು ಕೆಲಸದವರ ಸಂಬಳ ಕೊಡಲೆಂದು ಬ್ಯಾಂಕಿನಿಂದ ಹಣ ಡ್ರಾ ಮಾಡುದನ್ನು ಹೊಂಚುಹಾಕಿದ್ದ ಈ ಕತರ್ನಾಕ್ ಮಹಿಳೆ ತನ್ನ ಮಗುವಿನ ಸಹಾಯದಿಂದ ಹಣವನ್ನು ಪಿಕ್ ಪಾಕೆಟ್ ಮಾಡಿಸಿ ನಂತರ ತನ್ನ ಚೀಲಕ್ಕೆ ಹಾಕಿದ ದೃಶ್ಯ CCTVಯಲ್ಲಿ ಸೆರೆಯಾಗಿದ್ದು ಈ ಫುಟೇಜ್ ಆಧರಿಸಿ ಮಂಜೇಶ್ವರ ಠಾಣೆಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

