ಪುತ್ತೂರು: ಜನಸೇವಾ ವಿದ್ಯಾಕೇಂದ್ರ , ಚೆನ್ನನ ಹಳ್ಳಿ, ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಪ್ರಾಂತ ಹಾಗೂ ಕ್ಷೇತ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಹಾಸನದಲ್ಲಿ ನಡೆಯಲಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜನ್ನು ಪ್ರತಿನಿಧಿಸಲಿದ್ದಾರೆ.
ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಜೇತರ ವಿವರಗಳು
1. ಸಚಿತ್ ಪಿ. ಕೆ , ದ್ವಿತೀಯ ವಿಜ್ಞಾನ ವಿಭಾಗ - 400 ಮೀ ಓಟ - ಪ್ರಥಮ ಸ್ಥಾನ , 800 ಮೀ ಓಟ ಹಾಗೂ 400 ಮೀ ಹರ್ಡಲ್ಸ್ - ದ್ವಿತೀಯ ಸ್ಥಾನ
2. ಸಾತ್ವಿಕ್ ಆರ್ , ದ್ವಿತೀಯ ವಿಜ್ಞಾನ ವಿಭಾಗ - ಉದ್ದ ಜಿಗಿತ - ದ್ವಿತೀಯ ಸ್ಥಾನ, 110 ಮೀ ಹರ್ಡಲ್ಸ್ - ತೃತೀಯ ಸ್ಥಾನ.
3. ಚರಣ್ , ದ್ವಿತೀಯ ವಾಣಿಜ್ಯ ವಿಭಾಗ - ಜಾವೆಲಿನ್ ತ್ರೋ - ಪ್ರಥಮ ಸ್ಥಾನ, ಶಾಟ್ ಪುಟ್ - ದ್ವಿತೀಯ ಸ್ಥಾನ
4. ಯಶ್ವಿತ್ ಡಿ.ಪಿ , ದ್ವಿತೀಯ ವಾಣಿಜ್ಯ ವಿಭಾಗ - ಎತ್ತರ ಜಿಗಿತ ಪ್ರಥಮ ಸ್ಥಾನ
5. ಮೋಕ್ಷಿತ್ , ಪ್ರಥಮ ವಿಜ್ಞಾನ ವಿಭಾಗ - ಎತ್ತರ ಜಿಗಿತ ದ್ವಿತೀಯ ಸ್ಥಾನ
6. ಬಾಶ್ಮಿತ್ , ಪ್ರಥಮ ವಾಣಿಜ್ಯ ವಿಭಾಗ - 3000 ಮೀ ಓಟ - ದ್ವಿತೀಯ ಸ್ಥಾನ
7. ಡಿಂಪಲ್ ಶೆಟ್ಟಿ , ಪ್ರಥಮ ವಿಜ್ಞಾನ ವಿಭಾಗ - 100 ಮೀ ಹಾಗೂ 200 ಮೀ ಓಟ - ತೃತೀಯ ಸ್ಥಾನ
8. ರಿಧಿ ಸಿ ಶೆಟ್ಟಿ , ದ್ವಿತೀಯ ವಾಣಿಜ್ಯ ವಿಭಾಗ - 800 ಮೀ ಓಟ - ದ್ವಿತೀಯ ಸ್ಥಾನ
9. ಸಮೃದ್ಧಿ ಜೆ ಶೆಟ್ಟಿ , ದ್ವಿತೀಯ ವಿಜ್ಞಾನ ವಿಭಾಗ - ಉದ್ದ ಜಿಗಿತ ಹಾಗೂ 100 ಮೀ ಹರ್ಡಲ್ಸ್ - ದ್ವಿತೀಯ ಸ್ಥಾನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
