ಮಣಿಪಾಲದಲ್ಲಿ ಆದಿತ್ಯ ಬಿರ್ಲಾ ಶಾಖೆ ಆರಂಭ

Upayuktha
0


ಮಂಗಳೂರು: ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ ಲಿಮಿಟೆಡ್, ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಸನ್ ಲೈಫ್ (ಇಂಡಿಯಾ) ಎಎಂಸಿ ಇನ್ವೆಸ್ಟ್‍ಮೆಂಟ್ ಐಎನ್‍ಸಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ನೂತನ ಶಾಖೆಯನ್ನು ಮಣಿಪಾಲದಲ್ಲಿ ಆರಂಭಿಸಿದೆ.


ಮಣಿಪಾಲ ಶಾಖೆಯು ಎಬಿಎಸ್‍ಎಲ್‍ಎಎಂಸಿಯ ಸಮಗ್ರ ಹೂಡಿಕೆ ಉತ್ಪನ್ನಗಳನ್ನು ವೈಯಕ್ತಿಕ ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ತಲುಪಿಸುವ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಈ ಪ್ರದೇಶದಲ್ಲಿ ವಿತರಣಾ ಪಾಲುದಾರರನ್ನು ಸಕ್ರಿಯಗೊಳಿಸುವತ್ತ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ. ಬಾಲಸುಬ್ರಮಣಿಯನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ನೂತನ ಶಾಖೆ ಉಡುಪಿ ಬನ್ನಂಜೆಯ ಜಯಲಕ್ಷ್ಮಿ ಸಿಲ್ಕ್ಸ್ ಬಳಿಯ ಡೈಮಂಡ್ ಕಾಂಪ್ಲೆಕ್ಸ್‍ನ ಒಂದನೇ ಮತ್ತು 2ನೇ ಮಹಡಿಯಲ್ಲಿದ್ದು, ಹೂಡಿಕೆದಾರರನ್ನು ಸಬಲೀಕರಣಗೊಳಿಸುವ ಮತ್ತು ಅವರ ಹೆಚ್ಚುತ್ತಿರುವ ಆರ್ಥಿಕ ಆಕಾಂಕ್ಷೆಗಳನ್ನು ಬೆಂಬಲಿಸುವ ಮೂಲಕ, ಕರ್ನಾಟಕದಲ್ಲಿ, ವಿಶೇಷವಾಗಿ ಮಣಿಪಾಲದಂತಹ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಎಬಿಎಸ್‍ಎಲ್‍ಎಂಎಎಂಸಿಯ ಬೆಳವಣಿಗೆಯಲ್ಲಿ ಶಾಖೆಯು ಸಕ್ರಿಯ ಪಾತ್ರ ವಹಿಸಲು ಸಜ್ಜಾಗಿದೆ.


ದೇಶಾದ್ಯಂತ 300ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಮಣಿಪಾಲ ಶಾಖೆ ಆರಂಭದೊಂದಿಗೆ ಕರ್ನಾಟಕದಲ್ಲಿ ತನ್ನ ರಿಟೇಲ್ ವಿತರಣಾ ಹೆಜ್ಜೆಗುರುತನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಹೂಡಿಕೆದಾರರಿಗೆ, ವಿಶೇಷವಾಗಿ ಶ್ರೇಣಿ 3 ಮತ್ತು ಶ್ರೇಣಿ 4 ನಗರಗಳಲ್ಲಿ ವಿಶ್ವಾಸಾರ್ಹ ಆಸ್ತಿ ವ್ಯವಸ್ಥಾಪಕರಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಕಟಣೆ ಹೇಳಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top