ಉಡುಪಿ ಕೃಷ್ಣ ಮಠಕ್ಕೆ ನಟ ಧ್ರುವ ಸರ್ಜಾ ಭೇಟಿ: ಲೇಖನ ಯಜ್ಞ ದೀಕ್ಷೆ ಸ್ವೀಕಾರ

Chandrashekhara Kulamarva
0


ಉಡುಪಿ: ಖ್ಯಾತ ಚಿತ್ರ ನಟ ಧ್ರುವ ಸರ್ಜಾ ಅವರು ಇಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ತಮ್ಮ ಸ್ನೇಹಿತರೊಂದಿಗೆ ಸೋಮವಾರ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸರ್ಜಾ, ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು.


ನಂತರ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದರ್ಶನ ಪಡೆದು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಶ್ರೀಗಳಿಂದ ಪಡೆದರು.


ಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ ಹಾಗೂ ಪ್ರಸಾದ ಪಡೆದ ಧ್ರುವ ಸರ್ಜಾ, ಕೆಲವು ಕಾಲ ಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದರು. ನಂತರ ಶ್ರೀಮಠದಲ್ಲಿಯೇ ಅವರು ಅನ್ನ ಪ್ರಸಾದ ಸೇವಿಸಿದರು.


ಈ ಸಂದರ್ಭದಲ್ಲಿ ಸರ್ಜಾ ಅವರು ಸ್ನೇಹಿತರು, ಶ್ರೀಮಠದ ಮಧೂರು ನಾರಾಯಣ ಶರಳಾಯ ಸೇರಿದಂತೆ ಹಲವು ಇದ್ದರು.

 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top