ಮಂಗಳೂರು: ಅಮೆಜಾನ್ ಜಾಗತಿಕ ಮಾರಾಟ (ಗ್ಲೋಬಲ್ ಸೆಲ್ಲಿಂಗ್) ಕಾರ್ಯಕ್ರಮದ ಮೂಲಕ ಭಾರತದ ಲಕ್ಷಾಂತರ ಮಾರಾಟಗಾರರು 2015 ಮತ್ತು 2025 ರ ಅವಧಿಯಲ್ಲಿ ಭಾರತದಿಂದ ಒಟ್ಟಾರೆ ಇ-ಕಾಮರ್ಸ್ ರಫ್ತಿನಲ್ಲಿ 20 ಶತಕೋಟಿ ಡಾಲರ್ ಮೊತ್ತದ ವಹಿವಾಟಿನ ಗಡಿ ದಾಟಲು ಅಮೆಜಾನ್ ನೆರವಾಗಿದೆ.
ಅಮೆಜಾನ್‍ನ ಪ್ರಮುಖ ಇ-ಕಾಮರ್ಸ್ ರಫ್ತು ಕಾರ್ಯಕ್ರಮವಾದ 'ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್' ಉಪಕ್ರಮಕ್ಕೆ 2015ರಲ್ಲಿ ಚಾಲನೆ ನೀಡಿದ ಬಳಿಕ 2 ಲಕ್ಷಕ್ಕೂ ಹೆಚ್ಚು ರಫ್ತುದಾರರು ನೋಂದಾಯಿಸಿದ್ದು, 'ಭಾರತದಲ್ಲಿ ತಯಾರಿಸಿದ' ಒಟ್ಟಾರೆ 75 ಕೋಟಿಗೂ ಹೆಚ್ಚು ಉತ್ಪನ್ನಗಳನ್ನು ವಿಶ್ವದಾದ್ಯಂತ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಈ ಕಾರ್ಯಕ್ರಮದ ಒಟ್ಟು ಮಾರಾಟಗಾರರ ಸಂಖ್ಯೆಯು ಶೇಕಡ 33ಕ್ಕಿಂತ ಹೆಚ್ಚಾಗಿದೆ ಎಂದು ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ಇಂಡಿಯಾದ ಮುಖ್ಯಸ್ಥ ಶ್ರೀನಿಧಿ ಕಲ್ವಪುಡಿ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ, ಭಾರತದ ಉದ್ಯಮಿಗಳಿಗೆ ಜಾಗತಿಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ತಂತ್ರಜ್ಞಾನ ಹೇಗೆ ಸಹಕಾರಿಯಾಗಿದೆ ಎನ್ನುವುದನ್ನು ಅಮೆಜಾನ್ ಜಾಗತಿಕ ಮಾರಾಟ ಯೋಜನೆ ತೋರಿಸಿಕೊಟ್ಟಿದೆ. ಅಮೆರಿಕ, ಇಂಗ್ಲೆಂಡ್, ಯುಎಇ, ಸೌದಿ ಅರೇಬಿಯಾ, ಕೆನಡಾ, ಮೆಕ್ಸಿಕೊ, ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್ ಮುಂತಾದ ದೇಶಗಳಲ್ಲಿನ 18 ಕ್ಕೂ ಹೆಚ್ಚು ಅಮೆಜಾನ್ ಜಾಗತಿಕ ಮಾರುಕಟ್ಟೆಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಜಾಗತಿಕ ಬ್ರ್ಯಾಂಡ್‍ಗಳನ್ನು ನಿರ್ಮಿಸಲು ಇದು ಅನುವು ಮಾಡಿಕೊಟ್ಟಿದೆ ಎಂದು ವಿವರಿಸಿದ್ದಾರೆ.
'ಸುಸ್ಥಿರ, ಉತ್ತಮ ಗುಣಮಟ್ಟದ ಸೆಣಬಿನ ರಗ್ಗುಗಳ ಮೂಲಕ ಭಾರತದ ಕರಕುಶಲತೆಯನ್ನು ವಿಶ್ವದಾದ್ಯಂತ ಮನೆಗಳಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ" ಎಂದು ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್‍ನ ಮಾರಾಟಗಾರರಾಗಿರುವ ಹೋಮ್‍ಮೋಂಡೆ ಸಂಸ್ಥಾಪಕ ಸರ್ವೇಶ್ ಅಗರ್ವಾಲ್ ಹೇಳಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


