ಬೆಂಗಳೂರು: ಸೆಪ್ಟೆಂಬರ್ 5, 6 ಹಾಗೂ 7 ರಂದು ಟೀಮ್ ತಕ್ಷಕ್ ಆಯೋಜಿಸಿದ ರಾಜರಾಜೇಶ್ವರಿ ತಂಡದ ಅದ್ದೂರಿ ಯುವ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ರೂಪಶ್ರೀ ಕೆ. ಎಸ್. ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.) ತಂಡದ ವಿದ್ಯಾರ್ಥಿನಿಯರ ನೃತ್ಯ ಕಾರ್ಯಕ್ರಮ ಸೆಪ್ಟೆಂಬರ್ 5 ಹಾಗೂ 7ನೇ ತಾರೀಕಿನಂದು ಬಹಳ ಸೊಗಸಾಗಿ ನಡೆಯಿತು.
ಸೆಪ್ಟೆಂಬರ್ 5ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ವಿದುಷಿ ರೂಪಶ್ರೀ ಕೆ ಎಸ್ ಅವರ ತಂಡದಿಂದ ವಿದುಷಿ ರೂಪಶ್ರೀ ಕೆ. ಎಸ್., ಹೃದ್ಯಾ ಭಟ್ ಕೆ., ತನ್ವಿಕ ಸಿ, ರಚನಾ ಸತೀಶ್, ವೈಷ್ಣವಿ ಕೆ. ಅದ್ಬುತ ನೃತ್ಯ ಪ್ರದರ್ಶನವಿತ್ತರು. ನಂತರ ಜಾನಪದ ಗಾಯಕರಾದ ಕಡಬಗೆರೆ ಮುನಿರಾಜು ಅವರ ತಂಡದ ಜಾನಪದ ಗಾಯನ ಜರಗಿತು.
ಸೆಪ್ಟೆಂಬರ್ 7 ರಂದು ಅಕಾಡೆಮಿಯ ವಿದ್ಯಾರ್ಥಿನಿಯರಾದ ಹೃದ್ಯಾ ಭಟ್ ಕೆ., ಪ್ರಣಮ್ಯ ಹೆಗಡೆ, ತಾನ್ಯಾ ಎ., ಇಶಾನ ಶಿವಪ್ರಸಾದ್, ಕೇಸರ್ ಸಿಂಗ್, ನಮಿತಾ ಎಂ, ಸಾನ್ವಿ ಜಿ., ಆದ್ವಿಕ ಮಹೇಶ್ವರಿ, ಇಶಿತ ಶರ್ಮಾ, ಮಾನ್ಯ, ಹಾರಿಕ, ಸಂಹಿತ ಪಾಟಿಲ್, ಜಿನೋವಿಯ ಪಿ, ಲಕ್ಷಣಶ್ರೀ ಕೆ., ಆವ್ಯ ತಿವಾರಿ, ಪ್ರತೀಕ್ಷಾ ಪಿ, ಲಿಶಿಕ ಗೌಡ, ಶ್ರದ್ಧ ಹೆಚ್ ಎಸ್., ಆದಿತ್ರಿ ಶರ್ಮ, ಐಶಾನಿ ಸಿ., ದುತಿಶ್ರೀ ಸಿ., ಧನ್ಯತಾ ಎ ನಾಡಗೌಡರ್, ಐಶಾನಿ ಯೋಗೇಶ್, ಅಭಿಶ್ರುತ ಗಣೇಶ್, ನಿದರ್ಶ ಎಲ್ ಜಿ, ಸೇಜಲ್ ವಿ ಆರಾಧ್ಯ, ನಿವಿಶ ವಿನೋದ್, ಚಾರ್ವಿ ಎಂ ಸನಿಲ್, ತನ್ವಿಕ ಸಿ, ಪ್ರಾಚಿ ಆರ್ ಕುಲಕರ್ಣಿ, ಶ್ರೀಮತಿ ಶ್ರೀವಾಣಿ ಸುವರ್ಣ ಸಿ ಎಸ್, ಡಾ. ಸುನಿತಾ ರಘು ಕುಮಾರ್, ಶ್ರೀಮತಿ ವಿದ್ಯಾ ಕೆ., ಶ್ರೀಮತಿ ಸಂಗೀತ ಏಸ್, ಶ್ರೀಮತಿ ಸ್ಮಿತಾ ಮಿಶ್ರ, ಹಾಗೂ ಶ್ರೀಮತಿ ಶೃತಿ ನೃತ್ಯ ಕಾರ್ಯಕ್ರಮ ನೀಡಿದರು.
ವಿಶೇಷವಾದ ಅಮ್ಮ- ಮಗಳ ನರ್ತನ, ಭರತನಾಟ್ಯ, ಜಾನಪದ ನೃತ್ಯ, ಸೆಮಿ ಕ್ಲಾಸಿಕಲ್ ನರ್ತನ ನೆರೆದ ಸಭಿಕರನ್ನು ರಂಜಿಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ