ಬುರುಡೆ ಷಡ್ಯಂತ್ರದಲ್ಲಿ ಯೂಟ್ಯೂಬರ್ ಗಳ ಕೈವಾಡ: ಎಸ್.ಐ.ಟಿಗೆ ಪ್ರಶಾಂತ್ ಸಂಬರಗಿ ದೂರು

Upayuktha
0


ಬೆಳ್ತಂಗಡಿ:  ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೂಡಿರುವ ಶಕ್ತಿಗಳ ಭಾಗವಾಗಿ ಬುರುಡೆ ಪ್ರಕರಣ ಸೃಷ್ಟಿಸಿ ಕ್ಷೇತ್ರದ ವಿರುದ್ದ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಹಿಂದೂ ಹೋರಾಟಗಾರ ಪ್ರಶಾಂತ್ ಸಂಬರಗಿ ಎಸ್‌ಐಟಿಗೆ ದೂರು ಸಲ್ಲಿಸಿದ್ದಾರೆ.


ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಇಲ್ಲದೆ ಯಾವುದೇ ಸುದ್ದಿ ಮತ್ತು ಪ್ರಸ್ತುತ ಘಟನೆಗಳ ಮಾಹಿತಿ ಮತ್ತು ಸುದ್ದಿಯನ್ನು ಬಿತ್ತರಿಸುವಂತಿಲ್ಲ. ರಾಷ್ಟ್ರದ ಹಿತಾಸಕ್ತಿಯಿಂದ  ಸುದ್ದಿ ಪ್ರಸಾರಕ್ಕೆ ಸಚಿವಾಲಯದ ಅನುಮತಿ ಅಗತ್ಯ. ಆದರೆ ಯೂಟ್ಯೂಬ್ ಚಾನೆಲ್ ಗಳಾದ ಡಿ ಟಾಕ್ಸ್ , ಕುಡ್ಲ ರ್‍ಯಾಂಪೇಜ್, ಮಹಮ್ಮದ ಸಮೀರ್, ವಾರ್ತಾ ಭಾರತಿ, ಕನ್ನಡ ಪ್ಲಾನೆಟ್ ಇವರುಗಳು ಸುದ್ದಿಯನ್ನು  ಮತ್ತು ಸುಳ್ಳು ಸುದ್ದಿಯನ್ನು ಬಿತ್ತರ ಮಾಡಿದಲ್ಲದೆ  ಪ್ರೊಟೆಕ್ಟೆಡ್ ವಿಟ್ನೆಸ್ ಸ್ಕೀಮ್ ಅಡಿಯಲ್ಲಿದ್ದ ಚಿನ್ನಯ್ಯನ ಕಾನೂನು ಬಾಹಿರವಾಗಿ ಸಂದರ್ಶನ ಮಾಡಿ ಭಾರತೀಯ ಕಾನೂನನ್ನು ನಗೆಪಾಟಲು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಚಿನ್ನಯ್ಯನ ಸಂದರ್ಶನವನ್ನು ದೂರು ದಾಖಲಾತಿಗೂ ಮುನ್ನ  ಅಥವಾ ದೂರು ದಾಖಲಾದ ನಂತರ ಅಥವಾ  ಆರೋಪಿಯಾದ ನಂತರ ಈ ಮೂರು ರೀತಿಯಲ್ಲಿಯೂ ಸಂದರ್ಶನ ತೆಗೆದುಕೊಂಡಿದ್ದರು ಅದು ಅಪರಾಧ. ಈ ಯೂಟ್ಯೂಬರ್ ಗಳ ಹಣಕಾಸಿನ ಬಗ್ಗೆ ತನಿಖೆ  ಆಗಬೇಕು ಈ ನಿಟ್ಟಿನಲ್ಲಿ ಎಸ್.ಐಟಿಗೆ ದೂರು ನೀಡಲಾಗಿದೆ. ದೂರನ್ನು ಎಸ್.ಐ.ಟಿ ಅಧಿಕಾರಿ ಸೈಮನ್ ಅವರು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top