ಬೆಂಗಳೂರು ನಗರದಲ್ಲಿ ಶನಿವಾರ ಅಹೋರಾತ್ರಿ 'ಯಕ್ಷ ಸಂಕ್ರಾಂತಿ'

Upayuktha
0


ಬೆಂಗಳೂರು: ತೆಂಕುತಿಟ್ಟು ಮತ್ತು ಬಡಗುತಿಟ್ಟು ದಿಗ್ಗಜ ಕಲಾವಿದರು ಅಭಿನಯಿಸಲಿರುವ ಯಕ್ಷಗಾನ ಪ್ರದರ್ಶನ ಭಾವಬಣ್ಣಗಳ ಒಡ್ಡೋಲಗ- "ಯಕ್ಷ ಸಂಕ್ರಾಂತಿ" ರವೀಂದ್ರ ಕಲಾಕ್ಷೇತ್ರದಲ್ಲಿ ಸೆ. 20 ರಂದು ಶನಿವಾರ ಸಂಜೆ 6.30 ರಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ ನಡೆಯಲಿದೆ. ರಾಮನಿರ್ಯಾಣ, ಕಾಲಯವನ, ಗಿರಿಪೂಜೆ, ಚಿತ್ರಸೇನ ಎಂಬ ನಾಲ್ಕು ಪ್ರತ್ಯೇಕ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.


ರಾಮಚಂದ್ರ ಕೊಂಡದಕುಳಿ, ಬಳ್ಕೂರು ಕೃಷ್ಣಯಾಜಿ, ಸುಧೀರ್ ಉಪ್ಪೂರ್, ವಿದ್ಯಾಧರ ರಾವ್ ಜಲವಳ್ಳಿ, ಜಬ್ಬಾರ್ ಸಮೋ, ಪ್ರಜ್ವಲ್ ಕುಮಾರ್, ಶಂಕರ ಹೆಗಡೆ ನೀಲ್ಕೋಡು, ವಿಶ್ವನಾಥ ಹೆನ್ನಾಬೈಲ್, ರಾಘವೇಂದ್ರ ಬಡಾಬಾಳ್ ಮೊದಲಾದ ಕಲಾವಿದರ ಸಮಾಗಮ ಆಗಲಿದೆ. ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಚಂದ್ರಕಾಂತ ರಾವ್ ಮೂಡು ಬೆಳ್ಳೆ, ಪ್ರಸಾದ ಕುಮಾರ್ ಮೊದಲಾದ ಭಾಗವತರೂ ಇರುವರು.  ಇಡೀ ಕಾರ‌್ಯಕ್ರಮದ ವೀಕ್ಷಣೆಗೆ ರವೀಂದ್ರ ಕಲಾಕ್ಷೇತ್ರದ ಬಾಲ್ಕನಿ ಉಚಿತ ಪ್ರವೇಶವಿದೆ. ಉಳಿದಂತೆ ಸೀಟು ಕಾಯ್ದಿರಿಸಲು (ಪಾಸ್‌ಗಳಿಗಾಗಿ) ಮತ್ತು ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮದ ಸಂಘಟಕರಾದ ನಾಗರಾಜ ಶೆಟ್ಟಿ ನೈಕಂಬ್ಳಿ ಅವರನ್ನು ಮೊಬೈಲ್ 9741474255 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top