ಶಕ್ತಿಯ ಆರಾಧನೆಗೆ ವಿಶೇಷ ಮಹತ್ವವಿದೆ: ಸುಧಾ ನಾಗೇಶ್

Upayuktha
0


ಸುರತ್ಕಲ್‌: ತುಳುನಾಡನ್ನು ಒಳಗೊಂಡಂತೆ ನಮ್ಮ ರಾಷ್ಟ್ರದಲ್ಲಿ ಶಕ್ತಿ ಆರಾಧನೆಗೆ ವಿಶೇಷವಾದ ಮಹತ್ವವಿದೆ. ಸ್ತ್ರೀ ಸ್ವರೂಪಗಳಾದ ಸರಸ್ವತಿ, ಲಕ್ಷ್ಮೀ, ಗೌರಿ ನಾಮದಲ್ಲಿ ಮಾತೃ ಶಕ್ತಿಯನ್ನು ಆರಾಧಿಸುವ ಪರಂಪರೆ ಬೆಳೆದು ಬಂದಿದೆ. ದುರ್ಗಾ ದೇವಿಯನ್ನು ಒಂಬತ್ತು ರೂಪಗಳಲ್ಲಿ ಆರಾಧಿಸಿ ಹತ್ತನೇ ದಿನವನ್ನು ವಿಜಯದ ಸಂಕೇತವಾಗಿ ವಿಜಯ ದಶಮಿ ಆಚರಣೆ ಮಾಡಲಾಗುತ್ತಿದೆ ಎಂದು ಸಾಹಿತಿ ಸುಧಾ ನಾಗೇಶ್ ನುಡಿದರು.


ಅವರು ತುಳು ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾರ್ನೆಮಿದ ಗೌಜಿ ವಿಚಾರ ಚಿಂತನೆಯಲ್ಲಿ ಮಾತನಾಡುತ್ತಿದ್ದರು. ತುಳುನಾಡಿನಲ್ಲಿ ಮಾರ್ನೆಮಿ ಹಬ್ಬದಲ್ಲಿ ಹರಕೆ ರೂಪದಲ್ಲಿ ವೇಷ ಧರಿಸುವ ಪರಂಪರೆಯಿದ್ದು ಇಂದು ಅದು ಅರ್ಥವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಪ್ರಕೃತಿ ಶಕ್ತಿಯ ಆರಾಧನೆಯ ಮೂಲಕ ನವ ಶಕ್ತಿಯನ್ನು ಗಳಿಸಲು ಪ್ರಯತ್ನ ಮಾಡಬೇಕು ಎಂದರು.


ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಮಾತನಾಡಿ, ಹಬ್ಬಗಳ ಹಿನ್ನೆಲೆಯಲ್ಲಿರುವ ಅರ್ಥವನ್ನು ಅರಿತು ಹಬ್ಬಗಳ ಆಚರಣೆ ಮಾಡಬೇಕು ಎಂದರು.

ಪರಿಷತ್‌ನ ಗೌರವ ಅಧ್ಯಕ್ಷ  ಸಾಹಿತಿ ಡಾ. ಪ್ರಭಾಕರ ನೀರುಮಾರ್ಗ ಮಾತನಾಡಿ, ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ನಮ್ಮ ನಾಡಿನ ಆಚರಣೆಗಳಿಗೆ ಅನನ್ಯತೆ ಇದ್ದು ಮೂಲ ತತ್ವಗಳನ್ನು ಉಳಿಸಿಕೊಳ್ಳಬೇಕು ಎಂದರು.


ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸ್ವಾಗತಿಸಿದರು. ಮಾಲತಿ ಶೆಟ್ಟಿ,ಶ್ರೀನಿವಾಸ ಬಿ., ಶಾರದಾ ಬಾರ್ಕೂರು, ಶಾಲಿನಿ ರೈ ಸುಮತಿ ಹೆಗ್ಡೆ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top